AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಶಕೀಬ್ ಅಲ್ ಹಸನ್ ಬದಲು ಕೆಕೆಆರ್​ ತಂಡಕ್ಕೆ ಎಂಟ್ರಿಕೊಟ್ಟ ಸ್ಫೋಟಕ ಓಪನರ್

IPL 2023: ಈ ಹಿಂದೆ ನಡೆದ ಐಪಿಎಲ್ ಮಿನಿ ಹರಾಜಿಗೆ ಜೇಸನ್ ರಾಯ್ ಕೂಡ ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ಅವರನ್ನು ಯಾವ ತಂಡವೂ ಖರೀದಿಸಿರಲಿಲ್ಲ.

ಪೃಥ್ವಿಶಂಕರ
|

Updated on: Apr 05, 2023 | 3:08 PM

Share
ಖಾಯಂ ನಾಯಕ ಶ್ರೇಯಸ್ ಅಯ್ಯರ್ ಇಲ್ಲದೆ ಮೊದಲ ಪಂದ್ಯವನ್ನಾಡಿದ್ದ ಕೆಕೆಆರ್​ ತಂಡ ಹೀನಾಯ ಸೋಲನುಭವಿಸಿತ್ತು. ಆದಾದ ಬಳಿಕ ಆರ್​ಸಿಬಿ ವಿರುದ್ಧದ ಪಂದ್ಯಕ್ಕೆ ತಯಾರಿ ಆರಂಭಿಸಿದ್ದ ರಾಣಾ ಪಡೆಗೆ ಬಾಂಗ್ಲಾ ಆಲ್​ರೌಂಡರ್ ಶಕೀಬ್ ಅಲ್ ಹಸನ್ ಐಪಿಎಲ್​ನಿಂದ ಹಿಂದೆ ಸರಿದಿದ್ದು ಶಾಕ್ ನೀಡಿತ್ತು. ಹೀಗಾಗಿ ಶಕೀಬ್ ಬದಲಿಯಾಗಿ ಹುಡುಕುತ್ತಿದ್ದ ಶಾರೂಖ್ ತಂಡಕ್ಕೆ ಸ್ಫೋಟಕ ಬ್ಯಾಟರ್​ನ ಆಗಮನವಾಗಿದೆ.

1 / 6
ವಾಸ್ತವವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್ ರೌಂಡರ್ ಶಕೀಬ್ ಅಲ್ ಹಸನ್ ಈ ಬಾರಿಯ ಐಪಿಎಲ್​ನಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಅವರ ಬದಲಿ ಆಟಗಾರನಾಗಿ ಕೆಕೆಆರ್ ಫ್ರಾಂಚೈಸ್ ಇಂಗ್ಲೆಂಡ್​ನ ಸ್ಫೋಟಕ ಓಪನರ್​ ಜೇಸನ್ ರಾಯ್ ಜತೆ ಒಪ್ಪಂದ ಮಾಡಿಕೊಂಡಿದೆ. ಜೇಸನ್ ರಾಯ್ ಅವರನ್ನು 2.8 ಕೋಟಿ ರೂ.ಗೆ ಖರೀದಿಸಲಾಗಿದೆ.

2 / 6
ಈ ಹಿಂದೆ ನಡೆದ ಐಪಿಎಲ್ ಮಿನಿ ಹರಾಜಿಗೆ ಜೇಸನ್ ರಾಯ್ ಕೂಡ ಹೆಸರು ನೋಂದಾಯಿಸಿಕೊಂಡಿದ್ದರು. ಆದರೆ ಅವರನ್ನು ಯಾವ ತಂಡವೂ ಖರೀದಿಸಿರಲಿಲ್ಲ. ಆದರೆ ಇದೀಗ ಈ ಆಟಗಾರ ಈಗ ಕೆಕೆಆರ್‌ಗೆ ಎಂಟ್ರಿ ಪಡೆದಿದ್ದಾರೆ.

3 / 6
ಜೇಸನ್ ರಾಯ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಕಾರಣವೂ ಇದ್ದು, ಐಪಿಎಲ್​ಗೂ ಮುನ್ನ ಪಾಕಿಸ್ತಾನ ಸೂಪರ್​ ಲೀಗ್​ನಲ್ಲಿ ಈ ಸ್ಫೋಟಕ ಬ್ಯಾಟರ್ ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರ ಕಣಕ್ಕಿಳಿದಿದ್ದು, ಕೇವಲ 63 ಎಸೆತಗಳಲ್ಲಿ 145 ರನ್​ಗಳ ಸ್ಫೋಟಕ ಆಟ ಆಡಿದ್ದರು. 230ಕ್ಕೂ ಅಧಿಕ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದ ರಾಯ್ ಅವರ ಇನ್ನಿಂಗ್ಸ್​ನಲ್ಲಿ 5 ಸಿಕ್ಸರ್‌ ಮತ್ತು 20 ಬೌಂಡರಿಗಳು ಸೇರಿದ್ದವು.

4 / 6
ಜೇಸನ್ ರಾಯ್ ಐಪಿಎಲ್ ಆಡುತ್ತಿರುವುದು ಇದೇ ಮೊದಲಲ್ಲ. ಕಳೆದ ಸೀಸನ್​ನಲ್ಲಿ ಈ ಆಟಗಾರನನ್ನು ಗುಜರಾತ್ ಟೈಟಾನ್ಸ್ 2 ಕೋಟಿಗೆ ಖರೀದಿಸಿತ್ತು. ಆದರೆ ಆ ಸೀಸನ್​ನಿಂದ ರಾಯ್​ ಹಿಂದೆ ಸರಿದಿದ್ದರು. 2017 ರಲ್ಲಿ ಮೊದಲ ಬಾರಿಗೆ ಐಪಿಎಲ್​ ಅಖಾಡಕ್ಕೆ ಎಂಟ್ರಿಕೊಟ್ಟಿದ ರಾಯ್, ಈ ಪಂದ್ಯಾವಳಿಯಲ್ಲಿ ಇದುವರೆಗೆ 13 ಪಂದ್ಯಗಳನ್ನಾಡಿದ್ದು, ಇದರಲ್ಲಿ 29.90 ಸರಾಸರಿಯಲ್ಲಿ 329 ರನ್ ಗಳಿಸಿದ್ದಾರೆ. ರಾಯ್ ಅವರ ಸ್ಟ್ರೈಕ್ ರೇಟ್ 129ಕ್ಕಿಂತ ಹೆಚ್ಚಿದೆ.

5 / 6
ಅಂದಹಾಗೆ, ರಾಯ್ 64 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 137 ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್​ನಲ್ಲಿ 1522 ರನ್ ಗಳಿಸಿದ್ದಾರೆ. ಅಲ್ಲದೆ ರಾಯ್ ಪ್ರಸ್ತುತ ಉತ್ತಮ ಫಾರ್ಮ್​ನಲ್ಲಿದ್ದು, ಅದಕ್ಕಾಗಿಯೇ ಕೋಲ್ಕತ್ತಾ ನೈಟ್ ರೈಡರ್ಸ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಈಗ ರಾಯ್ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

6 / 6
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ