Updated on:Dec 22, 2022 | 12:09 PM
2008 ರಲ್ಲಿ ಪ್ರಾರಂಭವಾದ ಐಪಿಡಲ್ ಇದುವರೆಗೆ 15 ಆವೃತ್ತಿಗಳನ್ನು ಕಂಡಿದೆ. ಪ್ರಸ್ತುತ, ವಿಶ್ವದ ಅತಿದೊಡ್ಡ ಟಿ20 ಲೀಗ್ ಎನಿಸಿಕೊಂಡಿರುವ ಐಪಿಎಲ್ನ ಬ್ರಾಂಡ್ ಮೌಲ್ಯವು ಪ್ರತಿ ವರ್ಷ ಏರಿಕೆಯಾಗುತ್ತಲೆ ಇದೆ. ಅದರಲ್ಲೂ ಕಳೆದ ಒಂಬತ್ತು ವರ್ಷಗಳ ಅಂಕಿಅಂಶಗಳು ನಿಮ್ಮಲ್ಲಿ ಕಂಡಿತ ಬೆರಗು ಮೂಡಿಸುತ್ತವೆ.
ವಾಸ್ತವವಾಗಿ 2014ರಲ್ಲಿ ಐಪಿಎಲ್ ಬ್ರಾಂಡ್ ಮೌಲ್ಯ 19,500 ಕೋಟಿ ರೂ. ಇತ್ತು. ಮುಂದಿನ ವರ್ಷದಲ್ಲಿ ತನ್ನ ಬ್ರಾಂಡ್ ಮೌಲ್ಯವನ್ನು ಹೆಚ್ಚಿಸಿಕೊಂಡ ಈ ಮಿಲಿಯನ್ ಡಾಲರ್ ಕೂಸು 21,300 ಕೋಟಿ ರೂ.ಗೆ ಬಂದು ತಲುಪಿತು. 2016ರಲ್ಲಿ ಮತ್ತಷ್ಟು ಏರಿಕೆ ಕಂಡು 27,500 ಕೋಟಿ ರೂ. ಆಯಿತು. ಇದರ ನಂತರ 2018 ರಲ್ಲಿ ಮೆಗಾ ಹರಾಜು ನಡೆಯಿತು. ಇದರಿಂದಾಗಿ ಬ್ರಾಂಡ್ ಮೌಲ್ಯದಲ್ಲೂ ಹೆಚ್ಚಳಗೊಂಡಿತು. ಹಾಗೆಯೇ 2019 ರಲ್ಲಿ ಬರೋಬ್ಬರಿ 47, 500 ಕೋಟಿಗಳಿಗೆ ಇದರ ಬ್ರಾಂಡ್ ಮೌಲ್ಯ ಬಂದು ತಲುಪಿತು.
ಆದರೆ ಈ ನಡುವೆ ಐಪಿಎಲ್ ಸಾವಿರ ಕೋಟಿಗಳ ಗೆಲುವಿನ ಓಟಕ್ಕೆ ಕೊರೊನಾ ಬ್ರೇಕ್ ಹಾಕಿತು. ಕೊರೊನಾದಿಂದ ಮೊದಲ ಬಾರಿಗೆ ಈ ಲೀಗ್‌ನ ಬ್ರಾಂಡ್ ಮೌಲ್ಯದಲ್ಲಿ ಕುಸಿತ ಕಂಡುಬಂತು. 2019 ರಲ್ಲಿ 47, 500 ಕೋಟಿ ರೂ ಇದ್ದ ಬ್ರ್ಯಾಂಡ್ ಮೌಲ್ಯವು ಮುಂದಿನ ವರ್ಷ ರೂ 45800 ಕೋಟಿಗೆ ಇಳಿಕೆಯಾಯಿತು. 2021 ರಲ್ಲಿಯೂ ಸಹ, ಕೊರೊನಾದಿಂದ ಇದರ ಬ್ರಾಂಡ್ ಮೌಲ್ಯ 45 ಸಾವಿರ ಕೋಟಿಯಿಂದ 35950.53 ಕೋಟಿಗೆ ಜಾರಿತು.
ಆದರೆ 2022 ರಲ್ಲಿ ಮತ್ತೆ ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಈ ಲೀಗ್ ಯಶಸ್ವಿಯಾಯಿತು. ಕಳೆದ ವರ್ಷ ಮೆಗಾ ಹರಾಜು ನಡೆದಿದಲ್ಲದೆ ಈ ಟೂರ್ನಿಗೆ ಮತ್ತೆರಡು ತಂಡಗಳು ಸೇರ್ಪಡೆಗೊಂಡವು. 10 ತಂಡಗಳೊಂದಿಗೆ ಭಾರತದಲ್ಲಿಯೇ ಈ ಟೂರ್ನಿಯನ್ನು ನಡೆಸಲಾಯಿತು. ಹೀಗಾಗಿ 2021ರಲ್ಲಿ 35 ಸಾವಿರ ಕೋಟಿಗೆ ಇಳಿದಿದ್ದ ಇದರ ಬ್ರಾಂಡ್ ಮೌಲ್ಯ, 2022 ರಲ್ಲಿ ಬರೋಬ್ಬರಿ 87,000 ಕೋಟಿ ರೂ.ಗೆ ಏರಿಕೆಯಾಯಿತು.
ಇದೀಗ ಹಲವು ವಿದೇಶಿ ಕಂಪನಿಗಳೂ ಐಪಿಎಲ್‌ನಲ್ಲಿ ಆಸಕ್ತಿ ವಹಿಸುತ್ತಿವೆ. ಹಗಲಿರುಳು ಹೆಚ್ಚುತ್ತಿರುವ ಇದರ ಬ್ರ್ಯಾಂಡ್ ಮೌಲ್ಯ ಮ್ಯಾಂಚೆಸ್ಟರ್ ಯುನೈಟೆಡ್ ನಂತಹ ಕ್ಲಬ್ಗಳನ್ನೂ ಇಲ್ಲಿಗೆ ತಂದಿದೆ. ಅಲ್ಲದೆ ಈ ಲೀಗ್‌ನಲ್ಲಿ, ಆಟಗಾರರ ಅದೃಷ್ಟವು ಬದಲಾಗುತ್ತಿದೆ. ಹಾಗೆಯೇ ಫ್ರಾಂಚೈಸಿಗಳು, ಬ್ರ್ಯಾಂಡ್‌ಗಳು ಮತ್ತು ಚಾನಲ್‌ಗಳು ಸಹ ಇದರಿಂದ ಕೋಟಿಗಳಲ್ಲಿ ಗಳಿಸುತ್ತವೆ.
Published On - 11:26 am, Thu, 22 December 22