Updated on: Mar 07, 2023 | 3:06 PM
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಗಾಗಿ ಲಕ್ನೋ ಸೂಪರ್ ಜೈಂಟ್ಸ್ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಈ ಹಿಂದೆಯಿದ್ದ ಅಕ್ವಾಮರೀನ್ ನೀಲಿ ಬಣ್ಣದ ಬದಲು ಈ ಬಾರಿ ಕೆಎಲ್ ರಾಹುಲ್ ಪಡೆ ಗಾಢ ನೀಲಿ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.
ಇನ್ನು ಈ ಜೆರ್ಸಿಯಲ್ಲಿ ಕಡು ನೀಲಿ ಬಣ್ಣದೊಂದಿಗೆ ಕೆಂಪು ಬಣ್ಣದ ವಿನ್ಯಾಸಗಳನ್ನೂ ಕೂಡ ಬಳಸಲಾಗಿದೆ. ಅದರಂತೆ ಈ ಬಾರಿಯ ಐಪಿಎಲ್ನಲ್ಲಿ ಲಕ್ನೋ ತಂಡವು ಹೊಸ ಬಣ್ಣ ಹಾಗೂ ಹೊಸ ಜೋಶ್ನೊಂದಿಗೆ ಕಣಕ್ಕಿಳಿಯಲಿದೆ.
ಕಳೆದ ಸೀಸನ್ ಮೂಲಕ ಐಪಿಎಲ್ ಅಭಿಯಾನ ಆರಂಭಿಸಿದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಪಾಯಿಂಟ್ ಟೇಬಲ್ನಲ್ಲಿ ಮೂರನೇ ಸ್ಥಾನ ಅಲಂಕರಿಸಿತ್ತು. ಈ ಬಾರಿ ತಂಡದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಲಾಗಿರುವುದು ವಿಶೇಷ.
ಏಪ್ರಿಲ್ 1 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡವು ಈ ಬಾರಿ ಅಭಿಯಾನ ಆರಂಭಿಸಲಿದೆ. ಹಾಗೆಯೇ ಏಪ್ರಿಲ್ 10 ರಂದು ಕೆಎಲ್ ರಾಹುಲ್ ಪಡೆ ಆರ್ಸಿಬಿ ವಿರುದ್ಧ ಸೆಣಸಲಿದೆ. ಈ ಬಾರಿಯ ಟೂರ್ನಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಈ ಕೆಳಗಿನಂತಿದೆ.
ಲಕ್ನೋ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್ (ನಾಯಕ), ಆಯುಷ್ ಬಡೋನಿ, ಕರಣ್ ಶರ್ಮಾ, ಮನನ್ ವೋಹ್ರಾ, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೊಯಿನಿಸ್, ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಾರ್ಕ್ ವುಡ್, ಮಯಾಂಕ್ ಯಾದವ್, ರವಿ ಬಿಷ್ಣೋಯ್, ಯುದ್ಧವೀರ್ ಚರಕ್, ನವೀನ್-ಉಲ್-ಹಕ್ , ಸ್ವಪ್ನಿಲ್ ಸಿಂಗ್ , ಪ್ರೇರಕ್ ಮಂಕಡ್, ಅಮಿತ್ ಮಿಶ್ರಾ , ಡೇನಿಯಲ್ ಸ್ಯಾಮ್ಸ್ , ರೊಮಾರಿಯೋ ಶೆಫರ್ಡ್ , ಯಶ್ ಠಾಕೂರ್ , ಜಯದೇವ್ ಉನಾದ್ಕಟ್ , ನಿಕೋಲಸ್ ಪೂರನ್.