Updated on:Mar 08, 2023 | 10:00 AM
ಇತ್ತೀಚಿನ ದಿನಗಳಲ್ಲಿ ಮಹಿಳಾ ಕ್ರಿಕೆಟ್ ಕೂಡ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಮಹಿಳಾ ಕ್ರಿಕೆಟಿಗರೂ ಕೂಡ ತಮ್ಮ ಪ್ರತಿಭೆಯ ಮೂಲಕ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇದರೊಂದಿಗೆ ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಗಳಿಕೆ ಕೂಡ ಮಾಡುತ್ತಿದ್ದಾರೆ. ಅಂತಹವರಲ್ಲಿ ಭಾರತದ ಮಹಿಳಾ ಕ್ರಿಕೆಟರರ್ಸ್ ಕೂಡ ಇದ್ದು, ವಿಶ್ವದ 5 ಶ್ರೀಮಂತ ಮಹಿಳಾ ಕ್ರಿಕೆಟರ್ಗಳ ಪೈಕಿ 3 ಮಂದಿ ಭಾರತೀಯರೇ ಆಗಿದ್ದಾರೆ.
ಶ್ರೀಮಂತ ಮಹಿಳಾ ಕ್ರಿಕೆಟರ್ ಎಂದಾಗ, ಮೊದಲು ನೆನಪಿಗೆ ಬರುವುದು ಆಸ್ಟ್ರೇಲಿಯಾದ ಆಲ್ ರೌಂಡರ್ ಎಲ್ಲಿಸ್ ಪೆರ್ರಿ. ಪೆರ್ರಿ ಅವರ ನಿವ್ವಳ ಮೌಲ್ಯ ಸುಮಾರು 1 ಬಿಲಿಯನ್ 14 ಕೋಟಿ.
ಅವರ ನಂತರ ಆಸ್ಟ್ರೇಲಿಯಾದ ನಾಯಕಿ ಮೆಗ್ ಲ್ಯಾನಿಂಗ್ ಎರಡನೇ ಶ್ರೀಮಂತ ಮಹಿಳಾ ಕ್ರಿಕೆಟಿಗರಾಗಿದ್ದಾರೆ. ಇತ್ತೀಚೆಗಷ್ಟೇ ನಡೆದ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯವನ್ನು ವಿಶ್ವ ಚಾಂಪಿಯನ್‌ನನ್ನಾಗಿ ಮಾಡಿದ ಅವರ ನಿವ್ವಳ ಮೌಲ್ಯ ಸುಮಾರು 73 ಕೋಟಿ ರೂ.
ಭಾರತದ ಮಾಜಿ ನಾಯಕಿ ಮಿಥಾಲಿ ರಾಜ್ ವಿಶ್ವದ ಮೂರನೇ ಶ್ರೀಮಂತ ಮಹಿಳಾ ಕ್ರಿಕೆಟಿಗರಾಗಿದ್ದು, ಅವರ ನಿವ್ವಳ ಮೌಲ್ಯ 41 ಕೋಟಿ ರೂ.
ಅವರ ನಂತರ ಭಾರತ ತಂಡದ ಉಪನಾಯಕಿ ಸ್ಮೃತಿ ಮಂಧಾನ ವಿಶ್ವದ ನಾಲ್ಕನೇ ಶ್ರೀಮಂತ ಮಹಿಳಾ ಕ್ರಿಕೆಟಿಗರಾಗಿದ್ದಾರೆ. ಅವರ ನಿವ್ವಳ ಮೌಲ್ಯ ಸುಮಾರು 34 ಕೋಟಿ. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಮಂಧಾನ ಅತ್ಯಂತ ದುಬಾರಿ ಆಟಗಾರ್ತಿ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅವರನ್ನು 3.4 ಕೋಟಿ ರೂಪಾಯಿಗೆ ಖರೀದಿಸಿತು.
ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್ ವಿಶ್ವದ 5ನೇ ಶ್ರೀಮಂತ ಮಹಿಳಾ ಕ್ರಿಕೆಟಿಗರಾಗಿದ್ದಾರೆ. ಅವರ ನಿವ್ವಳ ಮೌಲ್ಯ 24 ಕೋಟಿ ರೂ. ಆಗಿದ್ದು, ಹರ್ಮನ್‌ಪ್ರೀತ್ ಕೌರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ 1.8 ಕೋಟಿ ರೂ.ಗೆ ಖರೀದಿಸಿದೆ.
Published On - 10:00 am, Wed, 8 March 23