IPL 2023: ಐಪಿಎಲ್ನ 50ನೇ ಪಂದ್ಯದಲ್ಲಿ ಆರ್ಸಿಬಿ ಆಟಗಾರ ಮೊಹಮ್ಮದ್ ಸಿರಾಜ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಫಿಲ್ ಸಾಲ್ಟ್ ನಡುವೆ ವಾಕ್ಸಮರ ಏರ್ಪಟ್ಟಿತ್ತು.
ಮೊಹಮ್ಮದ್ ಸಿರಾಜ್ ಎಸೆದ 5ನೇ ಓವರ್ನ ಮೊದಲೆರಡು ಎಸೆತಗಳಲ್ಲಿ ಸಾಲ್ಟ್ ಭರ್ಜರಿ ಸಿಕ್ಸ್ ಸಿಡಿಸಿದರು. ಇನ್ನು 3ನೇ ಎಸೆತದಲ್ಲಿ ಫೋರ್ ಬಾರಿಸಿದರು. ಆದರೆ ಸಿರಾಜ್ 4ನೇ ಎಸೆತವನ್ನು ಬೌನ್ಸರ್ ಎಸೆದರು.
ಅತ್ತ ಮಾರಕ ಬೌನ್ಸರ್ಗೆ ಉತ್ತರಿಸಲಾಗದೇ ಫಿಲ್ ಸಾಲ್ಟ್ ಅದೇನೋ ಗೊಣಗಿದ್ದಾರೆ. ಇತ್ತ ಮೊದಲೇ ಸಿಕ್ಸ್-ಫೋರ್ ಹೊಡೆಸಿಕೊಂಡು ಕುಪಿತಗೊಂಡಿದ್ದ ಮೊಹಮ್ಮದ್ ಸಿರಾಜ್ ಅವರ ಸಹನೆಯ ಕಟ್ಟೆ ಒಡೆದಿದೆ.
ಅತ್ತ ಮಾರಕ ಬೌನ್ಸರ್ಗೆ ಉತ್ತರಿಸಲಾಗದೇ ಫಿಲ್ ಸಾಲ್ಟ್ ಅದೇನೋ ಗೊಣಗಿದ್ದಾರೆ. ಇತ್ತ ಮೊದಲೇ ಸಿಕ್ಸ್-ಫೋರ್ ಹೊಡೆಸಿಕೊಂಡು ಕುಪಿತಗೊಂಡಿದ್ದ ಮೊಹಮ್ಮದ್ ಸಿರಾಜ್ ಅವರ ಸಹನೆಯ ಕಟ್ಟೆ ಒಡೆದಿದೆ.
ಆದರೆ ಮೊದಲೇ ಸಿಡಿಮಿಡಿಗೊಂಡಿದ್ದ ಸಿರಾಜ್ ವಾರ್ನರ್ ಜೊತೆಗೂ ವಾಗ್ವಾದಕ್ಕೆ ಇಳಿದರು. ಅಷ್ಟರಲ್ಲಿ ನಾಯಕ ಫಾಫ್ ಡುಪ್ಲೆಸಿಸ್ ಹಾಗೂ ಅಂಪೈರ್ ಮಧ್ಯಪ್ರವೇಶಿಸಿ ಜಗಳವನ್ನು ಕೊನೆಗೊಳಿಸಿದರು.
ಇನ್ನು ಈ ಪಂದ್ಯದಲ್ಲಿ ಆರ್ಸಿಬಿ ನೀಡಿದ 182 ರನ್ಗಳ ಟಾರ್ಗೆಟ್ ಅನ್ನು 16.4 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಈ ಗೆಲುವಿನ ಬಳಿಕ ಹಸ್ತಲಾಘವ ಮಾಡುವ ವೇಳೆ ಮೊಹಮ್ಮದ್ ಸಿರಾಜ್ ಹಾಗೂ ಫಿಲ್ ಸಾಲ್ಟ್ ಮುಖಾಮುಖಿಯಾಗಿದ್ದಾರೆ. ಆದರೆ ಸಿರಾಜ್ ಕೇವಲ ಕೈಕುಲುಕಿರಲಿಲ್ಲ. ಬದಲಾಗಿ ಸಾಲ್ಟ್ ಅವರನ್ನು ತಬ್ಬಿಕೊಳ್ಳುವ ಮೂಲಕ ಕ್ರೀಡಾಸ್ಪೂರ್ತಿ ಮರೆದಿದ್ದಾರೆ.
ಇದೀಗ ಸಿರಾಜ್ ಹಾಗೂ ಸಾಲ್ಟ್ ಅವರ ಅಪ್ಪುಗೆಯ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಆರ್ಸಿಬಿ ಆಟಗಾರನ ನಡೆಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.