Updated on: Apr 27, 2023 | 11:23 PM
IPL 2023: ಐಪಿಎಲ್ನ 16ನೇ ಸೀಸನ್ನಲ್ಲಿ ಆರ್ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ 300 ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಇದರೊಂದಿಗೆ ಐಪಿಎಲ್ನಲ್ಲಿ ಸತತವಾಗಿ ಮುನ್ನರಕ್ಕೂ ಅಧಿಕ ರನ್ಗಳಿಸಿದ ವಿಶೇಷ ದಾಖಲೆಯೊಂದು ಕಿಂಗ್ ಕೊಹ್ಲಿ ಪಾಲಾಗಿದೆ.
ಐಪಿಎಲ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ 14 ಸೀಸನ್ಗಳಲ್ಲಿ ಸತತವಾಗಿ 300 ಕ್ಕೂ ಅಧಿಕ ರನ್ಗಳಿಸುತ್ತಾ ಬಂದಿದ್ದಾರೆ. ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿ ಬೇರೆ ಯಾವುದೇ ಆಟಗಾರ 14 ಸೀಸನ್ನಲ್ಲಿ 300+ ರನ್ ಕಲೆಹಾಕಿಲ್ಲ.
ಇದಕ್ಕೂ ಮುನ್ನ ಈ ದಾಖಲೆ ಶಿಖರ್ ಧವನ್ ಹಾಗೂ ಸುರೇಶ್ ರೈನಾ ಹೆಸರಿನಲ್ಲಿತ್ತು. ಧವನ್ ಸತತ 12 ಸೀಸನ್ಗಳಲ್ಲಿ ಮೂರಕ್ಕೂ ಅಧಿಕ ರನ್ಗಳಿಸಿ ಮಿಂಚಿದ್ದಾರೆ.
ಹಾಗೆಯೇ ಸಿಎಸ್ಕೆ ತಂಡದ ಮಾಜಿ ಆಟಗಾರ ಸುರೇಶ್ ರೈನಾ ಕೂಡ ಸತತ 12 ಸೀಸನ್ಗಳಲ್ಲಿ 300+ ರನ್ ಕಲೆಹಾಕಿ ವಿಶೇಷ ದಾಖಲೆ ಬರೆದಿದ್ದರು.
ಇದೀಗ ಇವರೆಲ್ಲರನ್ನೂ ಹಿಂದಿಕ್ಕಿ ವಿರಾಟ್ ಕೊಹ್ಲಿ ಸತತ 14ನೇ ಸೀಸನ್ನಲ್ಲಿ 300 ಕ್ಕೂ ಅಧಿಕ ರನ್ ಕಲೆಹಾಕಿದ್ದಾರೆ. ಪ್ರಸ್ತುತ ಐಪಿಎಲ್ನಲ್ಲಿ ಭರ್ಜರಿ ಫಾರ್ಮ್ ಪ್ರದರ್ಶಿಸಿರುವ ಕಿಂಗ್ ಕೊಹ್ಲಿ 8 ಇನಿಂಗ್ಸ್ಗಳಲ್ಲಿ ಒಟ್ಟು 333 ರನ್ಗಳಿಸಿದ್ದಾರೆ. ಈ ಮೂಲಕ ಆರೆಂಜ್ ಕ್ಯಾಪ್ ರೇಸ್ನಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ಇದಲ್ಲದೆ ಐಪಿಎಲ್ನಲ್ಲಿ ಅತ್ಯಧಿಕ ಬಾರಿ 50+ ಸ್ಕೋರ್ಗಳಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಕೂಡ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ ಒಟ್ಟು 53 ಬಾರಿ ಐವತ್ತಕ್ಕಿಂತ ಹೆಚ್ಚಿನ ರನ್ಗಳಿಸಿದ್ದಾರೆ.
ಹಾಗೆಯೇ ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟರ್ ಕೂಡ ವಿರಾಟ್ ಕೊಹ್ಲಿ. ಕಿಂಗ್ ಕೊಹ್ಲಿ ಇದುವರೆಗೆ 6903 ರನ್ಗಳಿಸಿದ್ದು, ಇನ್ನು 97 ರನ್ಗಳಿಸಿದರೆ ಐಪಿಎಲ್ನಲ್ಲಿ 7 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಲಿದ್ದಾರೆ.