IPL 2023: CSK ಕಡೆಯಿಂದ ಬಿಗ್ ಅಪ್ಡೇಟ್: ಧೋನಿ ಅಭಿಮಾನಿಗಳಿಗೆ ನಿರಾಸೆ..!
TV9 Web | Updated By: ಝಾಹಿರ್ ಯೂಸುಫ್
Updated on:
Feb 11, 2023 | 8:30 PM
IPL 2023 Kannada: ಈ ಹಿಂದೆಯೇ ಮಹೇಂದ್ರ ಸಿಂಗ್ ಧೋನಿ ಚೆಪಾಕ್ ಮೈದಾನದ ಮೂಲಕ ವಿದಾಯ ಹೇಳುವ ಸೂಚನೆ ನೀಡಿದ್ದರು. ಆದರೆ ಕೊರೋನಾ ಕಾರಣದಿಂದ ಕಳೆದ ಎರಡು ಸೀಸನ್ನಲ್ಲಿ ತವರು ಮೈದಾನಗಳಲ್ಲಿ ಪಂದ್ಯಗಳನ್ನು ಆಯೋಜಿಸಿರಲಿಲ್ಲ.
1 / 8
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಆರಂಭಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕಡೆಯಿಂದ ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದೆ. ಆದರೆ ಈ ಅಪ್ಡೇಟ್ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಗಳಿಗೆ ಪಾಲಿಗೆ ನಿರಾಸೆಯನ್ನುಂಟು ಮಾಡಲಿದೆ.
2 / 8
ಹೌದು, ಐಪಿಎಲ್ ಸೀಸನ್ 16 ಮೂಲಕ ಮಹೇಂದ್ರ ಸಿಂಗ್ ಧೋನಿ ವಿದಾಯ ಹೇಳುವುದು ಬಹುತೇಕ ಖಚಿತವಾಗಿದೆ. ಈ ಹಿಂದೆಯೇ ನಿವೃತ್ತಿ ಯೋಚನೆ ಮಾಡಿದ್ದ ಧೋನಿ ಸಿಎಸ್ಕೆ ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿದಿದ್ದರು. ಆದರೆ ರವೀಂದ್ರ ಜಡೇಜಾ ನಾಯಕತ್ವದಲ್ಲಿ ಸಿಎಸ್ಕೆ ಗೆಲುವಿನ ಹಾದಿಯಲ್ಲಿ ಎಡವಿತ್ತು. ಹೀಗಾಗಿ ಧೋನಿ ಮತ್ತೆ ಕ್ಯಾಪ್ಟನ್ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
3 / 8
ಪಂದ್ಯ 13: ಮೇ 14, 2023: ಚೆನ್ನೈ ಸೂಪರ್ ಕಿಂಗ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ (ಸಂಜೆ 7:30)
ಪಂದ್ಯ 14: ಮೇ 20, 2023: ಡೆಲ್ಲಿ ಕ್ಯಾಪಿಟಲ್ಸ್ vs ಚೆನ್ನೈ ಸೂಪರ್ ಕಿಂಗ್ಸ್, ದೆಹಲಿ (3:30PM)
4 / 8
ಇದಾಗ್ಯೂ ತಮ್ಮ ನಿವೃತ್ತಿ ವಿಚಾರದಲ್ಲಿ ಧೋನಿ ಮನಸ್ಸು ಬದಲಿಸಿಲ್ಲ ಎಂದು ತಿಳಿದು ಬಂದಿದೆ. ಅಂದರೆ ಐಪಿಎಲ್ 2023ರ ಬಳಿಕ ವಿದಾಯ ಹೇಳಲು ಎಂಎಸ್ಡಿ ನಿರ್ಧರಿಸಿದ್ದಾರೆ. ಅದರಂತೆ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಪಂದ್ಯದ ಮೂಲಕ ಧೋನಿ ಐಪಿಎಲ್ಗೆ ಗುಡ್ ಬೈ ಹೇಳಲಿದ್ದಾರೆ ಎಂದು ಸಿಎಸ್ಕೆ ತಂಡದ ಮೂಲಗಳು ತಿಳಿಸಿವೆ.
5 / 8
ಈ ಬಾರಿ ತವರು ಮೈದಾನದಲ್ಲಿ ಪಂದ್ಯಗಳು ನಡೆಯಲಿದ್ದು, ಅದರಂತೆ ಚೆಪಾಕ್ ಮೈದಾನದಲ್ಲಿ ಕೊನೆಯ ಪಂದ್ಯವಾಡಲು ಧೋನಿ ಬಯಸಿದ್ದಾರೆ. ಇದೀಗ ತಂಡದಲ್ಲಿ ಇಂಗ್ಲೆಂಡ್ ಆಟಗಾರ ಬೆನ್ ಸ್ಟೋಕ್ಸ್ ಇದ್ದು, ಹೀಗಾಗಿ ನಾಯಕತ್ವದ ಜವಾಬ್ದಾರಿ ಅವರಿಗೆ ವಹಿಸುವ ಸಾಧ್ಯತೆ ಹೆಚ್ಚಿದೆ. ಅದರಂತೆ ಚೆಪಾಕ್ ಮೈದಾನದಲ್ಲಿ ಅಭಿಮಾನಿಗಳ ಮುಂದೆ ಧೋನಿ ಕೊನೆಯ ಬಾರಿ ಕಣಕ್ಕಿಳಿಯಲು ಬಯಸಿದ್ದಾರೆ ಎಂದು ಸಿಎಸ್ಕೆ ತಂಡದ ಮೂಲಗಳು ತಿಳಿಸಿವೆ.
6 / 8
ಈ ಹಿಂದೆಯೇ ಮಹೇಂದ್ರ ಸಿಂಗ್ ಧೋನಿ ಚೆಪಾಕ್ ಮೈದಾನದ ಮೂಲಕ ವಿದಾಯ ಹೇಳುವ ಸೂಚನೆ ನೀಡಿದ್ದರು. ಆದರೆ ಕೊರೋನಾ ಕಾರಣದಿಂದ ಕಳೆದ ಎರಡು ಸೀಸನ್ನಲ್ಲಿ ತವರಿನಲ್ಲಿ ಪಂದ್ಯಗಳನ್ನು ಆಯೋಜಿಸಿರಲಿಲ್ಲ. ಇದೀಗ ಚೆನ್ನೈ ಸೂಪರ್ ಸೂಪರ್ ಕಿಂಗ್ಸ್ ಪಂದ್ಯಗಳು ಚೆಪಾಕ್ ಮೈದಾನದಲ್ಲಿ ನಡೆಯುವುದು ಕನ್ಫರ್ಮ್ ಆಗಿರುವ ಕಾರಣ ಇದೇ ಮೈದಾನದ ಮೂಲಕ ಧೋನಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ.
7 / 8
IPL ನಲ್ಲಿ 234 ಪಂದ್ಯಗಳನ್ನಾಡಿರುವ ಮಹೇಂದ್ರ ಸಿಂಗ್ ಧೋನಿ 4978 ರನ್ಗಳನ್ನು ಕಲೆಹಾಕಿದ್ದಾರೆ. ಈ ವೇಳೆ 24 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು ಧೋನಿ ನಾಯಕತ್ವದಲ್ಲಿ ಸಿಎಸ್ಕೆ ತಂಡವು 4 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದೀಗ 41 ವರ್ಷದ ಧೋನಿ ನಿವೃತ್ತಿ ಅಂಚಿನಲ್ಲಿದ್ದು, ಮುಂಬರುವ ದಿನಗಳಲ್ಲಿ ಸಿಎಸ್ಕೆ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಕಾದು ನೋಡಬೇಕಿದೆ.
8 / 8
ಚೆನ್ನೈ ಸೂಪರ್ ಕಿಂಗ್ಸ್ ತಂಡ: ಎಂಎಸ್ ಧೋನಿ (ನಾಯಕ), ಭಗತ್ ವರ್ಮಾ, ಅಜಯ್ ಮಂಡಲ್, ಕೈಲ್ ಜೇಮಿಸನ್, ನಿಶಾಂತ್ ಸಿಂಧು, ಶೇಕ್ ರಶೀದ್, ಬೆನ್ ಸ್ಟೋಕ್ಸ್ , ಅಜಿಂಕ್ಯ ರಹಾನೆ, ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, , ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ.
Published On - 8:28 pm, Sat, 11 February 23