- Kannada News Photo gallery Cricket photos IND vs AUS|ICC WTC points table after india vs Australia border Gavaskar trophy first test match in Nagpur
IND vs AUS: ಇನ್ನಿಂಗ್ಸ್ ಗೆಲುವಿನ ಬಳಿಕ ಡಬ್ಲ್ಯುಟಿಸಿ ಪಾಯಿಂಟ್ ಪಟ್ಟಿಯಲ್ಲಿ ಭಾರತಕ್ಕಾದ ಲಾಭವೇನು?
IND vs AUS: ಪಂದ್ಯಕ್ಕೂ ಮುನ್ನ 99 ಅಂಕ ಹೊಂದಿದ್ದ ಭಾರತ ಪಂದ್ಯದ ಬಳಿಕ 111 ಅಂಕ ಗಳಿಸಿದೆ. ಇನ್ನು ಉಳಿದ ಮೂರು ಪಂದ್ಯಗಳನ್ನು ಗೆಲ್ಲುವತ್ತ ಭಾರತದ ಕಣ್ಣು ನೆಟ್ಟಿದೆ.
Updated on:Feb 11, 2023 | 5:04 PM

ನಾಗ್ಪುರದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಇನ್ನಿಂಗ್ಸ್ ಮತ್ತು 132 ರನ್‌ಗಳಿಂದ ಸೋಲಿಸಿದೆ. ಇದರೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.

ಈ ಟೆಸ್ಟ್ ಸರಣಿಯು ಟೀಮ್ ಇಂಡಿಯಾಕ್ಕೆ ಬಹಳ ಮಹತ್ವದ್ದಾಗಿದೆ ಏಕೆಂದರೆ ಈ ಸರಣಿಯ ಗೆಲುವಿನ ಮೇಲೆಯೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಆಡುವ ಟೀಂ ಇಂಡಿಯಾದ ಕನಸು ನಿಂತಿದೆ. ಈಗ ಮೊದಲ ಪಂದ್ಯವನ್ನು ಗೆಲ್ಲುವುದರೊಂದಿಗೆ ಭಾರತ ಫೈನಲ್‌ಗೆ ಹೋಗುವ ಅವಕಾಶವನ್ನು ಗಟ್ಟಿಗೊಳಿಸಿಕೊಂಡಿದೆ.

ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಹೋಗಲು ಟೀಂ ಇಂಡಿಯಾ ಈ ಸರಣಿಯಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕಾಗಿದ್ದು, ಭಾರತ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಹಾಕಿದೆ. ಈ ಗೆಲುವಿನ ನಂತರ ಭಾರತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಪಾಯಿಂಟ್ಸ್ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಂಡಿದೆ. ಅದೇ ವೇಳೆ ಆಸ್ಟ್ರೇಲಿಯಾ ಸಂಕಷ್ಟಕ್ಕೆ ಸಿಲುಕಿದೆ.

ಈ ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಉಭಯ ತಂಡಗಳ ಸ್ಥಾನಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆಸ್ಟ್ರೇಲಿಯಾ ತಂಡ ಮೊದಲ ಸ್ಥಾನದಲ್ಲಿದ್ದರೆ, ಭಾರತ ತಂಡ ಎರಡನೇ ಸ್ಥಾನದಲ್ಲಿದೆ.

ಆದರೆ ಆಸ್ಟ್ರೇಲಿಯಾದ ಶೇಕಡಾವಾರು ಕುಸಿದಿದ್ದರೆ ಭಾರತದ ಶೇಕಡಾವಾರು ಹೆಚ್ಚಾಗಿದೆ. ಈ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯದ ಗೆಲುವಿನ ಶೇ.75.56 ಇದ್ದದ್ದು ಈಗ 70.83ಕ್ಕೆ ಇಳಿದಿದೆ.

ಮತ್ತೊಂದೆಡೆ, ಈ ಪಂದ್ಯದ ಮೊದಲು ಭಾರತದ ಗೆಲುವಿನ ಶೇಕಡಾವಾರು 58.93 ಆಗಿತ್ತು. ಈ ಪಂದ್ಯದ ನಂತರ ಈಗ 61.67 ಆಗಿದೆ. ಪಂದ್ಯಕ್ಕೂ ಮುನ್ನ 99 ಅಂಕ ಹೊಂದಿದ್ದ ಭಾರತ ಪಂದ್ಯದ ಬಳಿಕ 111 ಅಂಕ ಗಳಿಸಿದೆ. ಇನ್ನು ಉಳಿದ ಮೂರು ಪಂದ್ಯಗಳನ್ನು ಗೆಲ್ಲುವತ್ತ ಭಾರತದ ಕಣ್ಣು ನೆಟ್ಟಿದೆ.
Published On - 5:04 pm, Sat, 11 February 23




