IPL 2023: ಮಹೇಂದ್ರ ಸಿಂಗ್​ ಧೋನಿ ನಿವೃತ್ತಿಗೆ ಡೇಟ್ ಫಿಕ್ಸ್​..!

| Updated By: ಝಾಹಿರ್ ಯೂಸುಫ್

Updated on: Feb 18, 2023 | 8:32 PM

MS Dhoni Retirement: ಈ ಹಿಂದೆಯೇ ಚೆಪಾಕ್ ಮೈದಾನದಲ್ಲಿ ಅಭಿಮಾನಿಗಳ ಮುಂದೆ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್​ಗೆ ಗುಡ್ ಬೈ ಹೇಳಲು ಇಚ್ಛಿಸಿರುವುದಾಗಿ ಧೋನಿ ತಿಳಿಸಿದ್ದರು.

1 / 7
ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಯಾವಾಗ ಎಂಬ ಪ್ರಶ್ನೆಗೆ ಈ ಬಾರಿಯ ಐಪಿಎಲ್​ನಲ್ಲಿ ಉತ್ತರ ಸಿಗಲಿರುವುದು ಬಹುತೇಕ ಖಚಿತವಾಗಿದೆ. ಏಕೆಂದರೆ ಈಗಾಗಲೇ ಸಿಎಸ್​ಕೆ ನಾಯಕನಾಗಿ ವಿಶೇಷ ಪಂದ್ಯವನ್ನು ಆಯೋಜಿಸಲು ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿ ಭರ್ಜರಿ ತಯಾರಿಗಳನ್ನು ಆರಂಭಿಸಿದೆ.

2 / 7
ಅದರಂತೆ ಮೇ 14 ರಂದು ಚೆಪಾಕ್​ನಲ್ಲಿ ನಡೆಯಲಿರುವ ಪಂದ್ಯದ ಮೂಲಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್​ ವೃತ್ತಿ ಜೀವನಕ್ಕೆ ವಿದಾಯ ಹೇಳಲಿದ್ದಾರೆ ಎಂದು ವರದಿಯಾಗಿದೆ. ಇನ್​ಸೈಡ್ ಸ್ಪೋರ್ಟ್ಸ್​ ವರದಿಯಂತೆ ಮೆ.14 ರಂದು ಕೆಕೆಆರ್​ ವಿರುದ್ಧದ ಪಂದ್ಯವು ಸಿಎಸ್​ಕೆ ಪರ ಧೋನಿಯ ಕೊನೆಯ ಪಂದ್ಯವಾಗಿರಲಿದೆ.

3 / 7
ಮಾರ್ಚ್ 31 ರಿಂದ ಶುರುವಾಗಲಿರುವ ಐಪಿಎಲ್ ಸೀಸನ್​ 16ನ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ. ಇನ್ನು ಸಿಎಸ್​ಕೆ ತಂಡದ ಕೊನೆಯ ಲೀಗ್ ಪಂದ್ಯ ನಡೆಯಲಿರುವುದು ಮೇ 20 ರಂದು. ಆದರೆ ಅದಕ್ಕೂ ಮುನ್ನ ಮೇ 14 ರಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ ಸಿಎಸ್​ಕೆ ಹಾಗೂ ಕೆಕೆಆರ್ ತಂಡಗಳು ಮುಖಾಮುಖಿಯಾಗಲಿದೆ. ಇದುವೇ ಥಲಾ ಧೋನಿಯ ಕೊನೆಯ ಪಂದ್ಯ ಆಗಿರಲಿದೆ ಎಂದು ಚೆನ್ನೈ ಫ್ರಾಂಚೈಸಿ ಮೂಲಗಳು ತಿಳಿಸಿವೆ.

4 / 7
ಈ ಹಿಂದೆಯೇ ಚೆಪಾಕ್ ಮೈದಾನದಲ್ಲಿ ಅಭಿಮಾನಿಗಳ ಮುಂದೆ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್​ಗೆ ಗುಡ್ ಬೈ ಹೇಳಲು ಇಚ್ಛಿಸಿರುವುದಾಗಿ ಧೋನಿ ತಿಳಿಸಿದ್ದರು. ಆದರೆ ಕೊರೋನಾ ಕಾರಣದಿಂದಾಗಿ ಕಳೆದ ಮೂರು ಸೀಸನ್​ನಲ್ಲಿ ತವರು ಮೈದಾನದಲ್ಲಿ ಪಂದ್ಯಗಳು ನಡೆದಿರಲಿಲ್ಲ.

5 / 7
ಇದೀಗ ಈ ಹಿಂದಿನಂತೆ ಹೋಮ್ ಅ್ಯಂಡ್ ಅವೇ ಮಾದರಿಯಲ್ಲಿ ಐಪಿಎಲ್ ಟೂರ್ನಿ ನಡೆಯಲಿದೆ. ಇಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ತವರಿನಲ್ಲಿ ಕೊನೆಯ ಪಂದ್ಯವನ್ನು ಮೇ.14 ರಂದು ಆಡಲಿದೆ. ಒಂದು ವೇಳೆ ಚೆಪಾಕ್​ನಲ್ಲಿ ನಡೆಯಲಿರುವ ಪಂದ್ಯಕ್ಕೂ ಮುನ್ನ ಸಿಎಸ್​ಕೆ ಪ್ಲೇಆಫ್ ಪ್ರವೇಶಿಸುವುದು ಖಚಿತವಾದರೆ, ಪ್ಲೇಆಫ್ ಪಂದ್ಯಗಳ ಒಂದು ಮ್ಯಾಚ್ ಚೆನ್ನೈನಲ್ಲಿ ನಡೆಯಲಿದೆ. ಆ ಪಂದ್ಯವು ಧೋನಿಯ ಕೊನೆಯ ಪಂದ್ಯವಾಗಿರಲಿದೆ.

6 / 7
ಅಂದರೆ ಸಿಎಸ್​ಕೆ ತಂಡವು ಕೊನೆಯ ಎರಡು ಪಂದ್ಯಗಳಿಗೂ ಮುಂಚಿತವಾಗಿ ಪ್ಲೇಆಫ್ ಪ್ರವೇಶಿಸಿದರೆ, ಮೇ 14 ರಂದು ಅವರು ವಿದಾಯ ಪಂದ್ಯವಾಡುವುದಿಲ್ಲ. ಬದಲಾಗಿ ಸಿಎಸ್​ಕೆ ತಂಡದ ಪ್ಲೇಆಫ್ ಪಂದ್ಯವು ಚೆನ್ನೈನಲ್ಲೇ ನಡೆಯಲಿದೆ. ಅದು ಮಹೇಂದ್ರ ಸಿಂಗ್ ಧೋನಿಯ ವಿದಾಯ ಪಂದ್ಯವಾಗಿರಲಿದೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಐಪಿಎಲ್ ಸೀಸನ್ 16 ಮೂಲಕ ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳುವುದು ಬಹುತೇಕ ಖಚಿತವಾಗಿದೆ. ಅದರೆ ಇದನ್ನು ಸಿಎಸ್​ಕೆ ಫ್ರಾಂಚೈಸಿ ಅಧಿಕೃತವಾಗಿ ಘೋಷಿಸಬೇಕಷ್ಟೆ. ಹೀಗಾಗಿಯೇ ಈ ಬಾರಿಯ ಐಪಿಎಲ್​ ಸಿಎಸ್​ಕೆ ಹಾಗೂ ಧೋನಿ ಪಾಲಿಗೆ ತುಂಬಾ ಮಹತ್ವದ್ದು. ಅದರಂತೆ ಕೊನೆಯ ಸೀಸನ್​ನಲ್ಲಿ ಕೂಲ್ ಕ್ಯಾಪ್ಟನ್​ ಚಾಂಪಿಯನ್​ ಪಟ್ಟದೊಂದಿಗೆ ಗುಡ್​ ಬೈ ಹೇಳಲಿದ್ದಾರಾ ಕಾದು ನೋಡಬೇಕಿದೆ.

7 / 7
ಚೆನ್ನೈ ಸೂಪರ್ ಕಿಂಗ್ಸ್ ತಂಡ​: ಎಂಎಸ್​ ಧೋನಿ (ನಾಯಕ), ಭಗತ್ ವರ್ಮಾ, ಅಜಯ್ ಮಂಡಲ್, ನಿಶಾಂತ್ ಸಿಂಧು, ಶೇಕ್ ರಶೀದ್, ಬೆನ್ ಸ್ಟೋಕ್ಸ್ , ಅಜಿಂಕ್ಯ ರಹಾನೆ, ಡೆವೊನ್ ಕಾನ್ವೆ, ರುತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, , ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ.