- Kannada News Photo gallery Cricket photos IPL 2023 Names of captains of all IPL teams have been announced see the complete list in Kannada
IPL 2023: ಎಲ್ಲಾ ಐಪಿಎಲ್ ತಂಡಗಳ ನಾಯಕರ ಹೆಸರು ಪ್ರಕಟ; ಸಂಪೂರ್ಣ ಪಟ್ಟಿ ಇಲ್ಲಿದೆ
IPL 2023: 16ನೇ ಆವೃತ್ತಿಯ ಐಪಿಎಲ್ಗೆ ದಿನಗಣನೆ ಆರಂಭವಾಗಿದ್ದು, ಎಲ್ಲಾ ಫ್ರಾಂಚೈಸಿಗಳು ತಮ್ಮ ತಮ್ಮ ತಂಡವನ್ನು ಮುನ್ನಡೆಸುವ ನಾಯಕರನ್ನು ಅಂತಿಮಗೊಳಿಸಿವೆ.
Updated on:Feb 24, 2023 | 5:26 PM

16ನೇ ಆವೃತ್ತಿಯ ಐಪಿಎಲ್ಗೆ ದಿನಗಣನೆ ಆರಂಭವಾಗಿದ್ದು, ಎಲ್ಲಾ ಫ್ರಾಂಚೈಸಿಗಳು ತಮ್ಮ ತಮ್ಮ ತಂಡವನ್ನು ಮುನ್ನಡೆಸುವ ನಾಯಕರನ್ನು ಅಂತಿಮಗೊಳಿಸಿವೆ. ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಗಳು ಕೂಡ ತಮ್ಮ ತಂಡಕ್ಕೆ ನಾಯಕರನ್ನು ಆಯ್ಕೆ ಮಾಡಿದ್ದು, ಏಡೆನ್ ಮಾರ್ಕ್ರಾಮ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವವಹಿಸಿಕೊಂಡಿದ್ದರೆ, ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ನಾಯಕತ್ವವಹಿಸಿಕೊಂಡಿದ್ದಾರೆ. ಇದರೊಂದಿಗೆ ಎಲ್ಲಾ ತಂಡಗಳ ನಾಯಕರು ಅಂತಿಮವಾಗಿದ್ದು, ಯಾವ ತಂಡಕ್ಕೆ ಯಾರು ನಾಯಕರು ಎಂಬುದರ ವಿವರ ಇಲ್ಲಿದೆ.

ಹಾರ್ದಿಕ್ ಪಾಂಡ್ಯ- ಗುಜರಾತ್ ಟೈಟಾನ್ಸ್

ಎಂಎಸ್ ಧೋನಿ- ಚೆನ್ನೈ ಸೂಪರ್ ಕಿಂಗ್ಸ್

ರೋಹಿತ್ ಶರ್ಮಾ- ಮುಂಬೈ ಇಂಡಿಯನ್ಸ್

ಫಾಫ್ ಡು ಪ್ಲೆಸಿಸ್- ರಾಯಲ್ ಚಾಲೆಂಜರ್ಸ್ ಬೆಂಗಳೂರು

ಶ್ರೇಯಸ್ ಅಯ್ಯರ್- ಕೋಲ್ಕತ್ತಾ ನೈಟ್ ರೈಡರ್ಸ್

ಕೆಎಲ್ ರಾಹುಲ್- ಲಕ್ನೋ ಸೂಪರ್ ಜೈಂಟ್ಸ್

ಸಂಜು ಸ್ಯಾಮ್ಸನ್- ರಾಜಸ್ಥಾನ ರಾಯಲ್ಸ್

ಶಿಖರ್ ಧವನ್- ಪಂಜಾಬ್ ಕಿಂಗ್ಸ್

ಡೆವಿಡ್ ವಾರ್ನರ್- ಡೆಲ್ಲಿ ಕ್ಯಾಪಿಟಲ್ಸ್

ಐಡೆನ್ ಮಾರ್ಕ್ರಾಮ್- ಸನ್‌ರೈಸರ್ಸ್ ಹೈದರಾಬಾದ್
Published On - 5:22 pm, Fri, 24 February 23




