IPL 2023: ಸಿಂಗ್ ಈಸ್ ಕಿಂಗ್: ಭರ್ಜರಿ ಸೆಂಚುರಿ ಸಿಡಿಸಿದ ಪ್ರಭ್​ಸಿಮ್ರಾನ್

| Updated By: ಝಾಹಿರ್ ಯೂಸುಫ್

Updated on: May 13, 2023 | 9:40 PM

Prabhsimran Singh: ಈ ಶತಕದೊಂದಿಗೆ ಪಂಜಾಬ್ ಕಿಂಗ್ಸ್ ಪರ ಸೆಂಚುರಿ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ವಿಶೇಷ ದಾಖಲೆ ಕೂಡ ಪ್ರಭ್​ಸಿಮ್ರಾನ್ ಸಿಂಗ್ ಪಾಲಾಗಿದೆ.

1 / 7
IPL 2023 DC vs PBKS: ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 59ನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಪ್ರಭ್​ಸಿಮ್ರಾನ್ ಸಿಂಗ್ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಬೌಲಿಂಗ್ ಆಯ್ದುಕೊಂಡಿದ್ದರು.

2 / 7
ಅದರಂತೆ ಇನಿಂಗ್ಸ್ ಆರಂಭಿಸಿದ ಪಂಜಾಬ್ ಕಿಂಗ್ಸ್ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಶಿಖರ್ ಧವನ್ 7 ರನ್​ಗಳಿಸಿ ಔಟಾದರೆ, ಲಿಯಾಮ್ ಲಿವಿಂಗ್​ಸ್ಟೋನ್ 4 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಜಿತೇಶ್ ಶರ್ಮಾ 5 ರನ್​ಗಳಿಸಿ ಕ್ಲೀನ್ ಬೌಲ್ಡ್ ಆದರು.

3 / 7
ಇತ್ತ ಪವರ್​ಪ್ಲೇನಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಪಂಜಾಬ್ ಕಿಂಗ್ಸ್ ತಂಡಕ್ಕೆ ಆರಂಭಿಕ ಆಟಗಾರ ಪ್ರಭ್​ಸಿಮ್ರಾನ್ ಸಿಂಗ್ ಆಸರೆಯಾಗಿ ನಿಂತರು. ಆರಂಭದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ಸಿಮ್ರಾನ್ ಆ ಬಳಿಕ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದರು.

4 / 7
ಪರಿಣಾಮ 14ನೇ ಓವರ್​ ವೇಳೆಗೆ ತಂಡದ ಮೊತ್ತ ನೂರರ ಗಡಿದಾಟಿತು. ಅಲ್ಲದೆ 44 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿ ಬಳಿಕ ಸಿಡಿಲಬ್ಬರ ಶುರು ಮಾಡಿದ ಪ್ರಭ್​ಸಿಮ್ರಾನ್ ಸಿಂಗ್ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್​ಗಳ ಬೆಂಡೆತ್ತಿದರು.

5 / 7
ಈ ಭರ್ಜರಿ ಬ್ಯಾಟಿಂಗ್​ ಮೂಲಕ ಕೇವಲ 61 ಎಸೆತಗಳಲ್ಲಿ ಪ್ರಭ್​ಸಿಮ್ರಾನ್ ಸಿಂಗ್ ಶತಕ ಪೂರೈಸಿದರು. ಅಂತಿಮವಾಗಿ 65 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 10 ಫೋರ್​ಗಳೊಂದಿಗೆ 103 ರನ್​ ಬಾರಿಸಿ ಮುಖೇಶ್ ಕುಮಾರ್​ಗೆ ವಿಕೆಟ್ ಒಪ್ಪಿಸಿದರು.

6 / 7
ಪ್ರಭ್​ಸಿಮ್ರಾನ್ ಅವರ ಈ ಭರ್ಜರಿ ಶತಕದ ನೆರವಿನಿಂದ ಪಂಜಾಬ್ ಕಿಂಗ್ಸ್ ತಂಡವು ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್​ ಕಲೆಹಾಕಿತು.

7 / 7
ಈ ಶತಕದೊಂದಿಗೆ ಪಂಜಾಬ್ ಕಿಂಗ್ಸ್ ಪರ ಸೆಂಚುರಿ ಸಿಡಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ವಿಶೇಷ ದಾಖಲೆ ಕೂಡ 22 ವರ್ಷದ ಪ್ರಭ್​ಸಿಮ್ರಾನ್ ಸಿಂಗ್ ಪಾಲಾಗಿದೆ.