- Kannada News Photo gallery Cricket photos IPL 2023: Latest Playoffs Qualification Scenarios Of All 10 Teams
IPL 2023: ಪ್ಲೇಆಫ್ ಹಂತಕ್ಕೇರಲು ಯಾವ ತಂಡ ಎಷ್ಟೆಷ್ಟು ಪಂದ್ಯಗಳನ್ನು ಗೆಲ್ಲಬೇಕು? ಇಲ್ಲಿದೆ ಮಾಹಿತಿ
IPL 2023 Kannada: ಈ ಬಾರಿಯ ಐಪಿಎಲ್ನಲ್ಲಿ ಪ್ಲೇಆಫ್ ರೇಸ್ ಮತ್ತಷ್ಟು ರೋಚಕವಾಗಿ ಪರಿಣಮಿಸಿದೆ. ಇದಾಗ್ಯೂ ಕೆಲ ತಂಡಗಳು ಪ್ಲೇಆಫ್ ಸನಿಹದಲ್ಲಿದೆ. ಹಾಗಿದ್ರೆ ಯಾವ ತಂಡ ಎಷ್ಟೆಷ್ಟು ಪಂದ್ಯಗಳನ್ನು ಗೆದ್ದು ಪ್ಲೇಆಫ್ ಪ್ರವೇಶಿಸಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
Updated on:May 13, 2023 | 11:10 PM

IPL 2023: ಐಪಿಎಲ್ನ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಬಹುತೇಕ ತಂಡಗಳು 12 ಪಂದ್ಯಗಳನ್ನು ಆಡಿದ್ದು, ಇನ್ನು ಪ್ರತಿ ತಂಡಗಳಿಗೆ ತಲಾ 2 ಮ್ಯಾಚ್ಗಳು ಮಾತ್ರ ಉಳಿದಿವೆ. ಇದಾಗ್ಯೂ ಇದುವರೆಗೆ ಯಾವುದೇ ತಂಡದ ಪ್ಲೇಆಫ್ ಅನ್ನು ಖಚಿತಪಡಿಸಿಕೊಂಡಿಲ್ಲ ಎಂಬುದು ವಿಶೇಷ.

ಒಂದು ತಂಡವು 9 ಪಂದ್ಯಗಳನ್ನು ಗೆದ್ದುಕೊಂಡರೆ ಒಟ್ಟು 18 ಅಂಕಗಳೊಂದಿಗೆ ಪ್ಲೇಆಫ್ ಹಂತಕ್ಕೇರುವುದನ್ನು ಖಚಿತಪಡಿಸಿಕೊಳ್ಳಬಹುದು. ಆದರೆ ಇದುವರೆಗೆ ಯಾವುದೇ ತಂಡದ 18 ಅಂಕವನ್ನು ಪಡೆದಿಲ್ಲ. ಹಾಗೆಯೇ ಯಾವುದೇ ತಂಡ ಪ್ಲೇಆಫ್ ರೇಸ್ನಿಂದ ಹೊರಬಿದ್ದಿಲ್ಲ.

ಹೀಗಾಗಿಯೇ ಈ ಬಾರಿಯ ಐಪಿಎಲ್ನಲ್ಲಿ ಪ್ಲೇಆಫ್ ರೇಸ್ ಮತ್ತಷ್ಟು ರೋಚಕವಾಗಿ ಪರಿಣಮಿಸಿದೆ. ಇದಾಗ್ಯೂ ಕೆಲ ತಂಡಗಳು ಪ್ಲೇಆಫ್ ಸನಿಹದಲ್ಲಿದೆ. 58 ಪಂದ್ಯಗಳ ಮುಕ್ತಾಯದ ಬಳಿಕ ಯಾವ ತಂಡ ಎಷ್ಟೆಷ್ಟು ಪಂದ್ಯಗಳನ್ನು ಗೆದ್ದು ಪ್ಲೇಆಫ್ ಪ್ರವೇಶಿಸಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

1- ಗುಜರಾತ್ ಟೈಟಾನ್ಸ್: 12 ಪಂದ್ಯಗಳಲ್ಲಿ 8 ಜಯ ಹಾಗೂ 4 ಸೋಲು ಕಂಡಿರುವ ಗುಜರಾತ್ ಟೈಟಾನ್ಸ್ ತಂಡವು 16 ಪಾಯಿಂಟ್ಸ್ನೊಂದಿಗೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಗುಜರಾತ್ ತಂಡಕ್ಕೆ 2 ಪಂದ್ಯಗಳು ಉಳಿದಿದ್ದು, ಇದರಲ್ಲಿ 1 ಪಂದ್ಯದಲ್ಲಿ ಜಯ ಸಾಧಿಸಿದರೆ 18 ಅಂಕಗಳೊಂದಿಗೆ ಪ್ಲೇಆಫ್ ಖಚಿತಪಡಿಸಿಕೊಳ್ಳಲಿದೆ.

2- ಚೆನ್ನೈ ಸೂಪರ್ ಕಿಂಗ್ಸ್: ಸಿಎಸ್ಕೆ ತಂಡವು ಆಡಿರುವ 12 ಪಂದ್ಯಗಳಲ್ಲಿ 7 ರಲ್ಲಿ ಜಯ ಸಾಧಿಸಿದೆ. ಇನ್ನು 1 ಪಂದ್ಯವು ರದ್ದಾದ ಕಾರಣ 1 ಅಂಕ ಪಡೆದುಕೊಂಡಿದೆ. ಅದರಂತೆ ಇದೀಗ ಒಟ್ಟು 15 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನದಲ್ಲಿದೆ. ಇನ್ನುಳಿದ 2 ಪಂದ್ಯಗಳಲ್ಲಿ ಒಂದರಲ್ಲಿ ಗೆಲುವು ದಾಖಲಿಸಿದರೂ ಪ್ಲೇಆಫ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಳ್ಳಬಹುದು.

3- ಮುಂಬೈ ಇಂಡಿಯನ್ಸ್: 12 ಪಂದ್ಯಗಳಲ್ಲಿ 7 ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್ ತಂಡವು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಇನ್ನುಳಿದ 2 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಪ್ಲೇಆಫ್ ಆಡುವುದು ಕನ್ಫರ್ಮ್ ಆಗಲಿದೆ. ಒಂದು ವೇಳೆ ಒಂದು ಪಂದ್ಯದಲ್ಲಿ ಮಾತ್ರ ಜಯ ಸಾಧಿಸಿದರೆ, ಪ್ಲೇಆಫ್ ಪ್ರವೇಶಿಸಲು ನೆಟ್ ರನ್ ರೇಟ್ನ ಮೊರೆ ಹೋಗಬೇಕಾಗಿಬರಬಹುದು.

4- ಲಕ್ನೋ ಸೂಪರ್ ಜೈಂಟ್ಸ್: 12 ಪಂದ್ಯಗಳಲ್ಲಿ 5 ಜಯ ಸಾಧಿಸಿರುವ ಲಕ್ನೋ ಸೂಪರ್ ಜೈಂಟ್ಸ್ ಇದೀಗ 13 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಇನ್ನುಳಿದ 2 ಪಂದ್ಯಗಳಲ್ಲಿ ಗೆದ್ದರೆ ಒಟ್ಟು 17 ಪಾಯಿಂಟ್ಸ್ ಆಗಲಿದ್ದು, ಈ ಮೂಲಕ ಪ್ಲೇಆಫ್ ಆಡುವುದನ್ನು ಬಹುತೇಕ ಖಚಿತಪಡಿಸಿಕೊಳ್ಳಬಹುದು. ಒಂದು ವೇಳೆ ಮುಂದಿನ 2 ಪಂದ್ಯಗಳಲ್ಲಿ ಒಂದರಲ್ಲಿ ಸೋತರೆ ಪಾಯಿಂಟ್ಸ್ ಟೇಬಲ್ನಲ್ಲಿ 4ನೇ ಸ್ಥಾನ ಪಡೆಯುವ ತಂಡ 15 ಪಾಯಿಂಟ್ಸ್ ಅಥವಾ ಅದಕ್ಕಿಂತ ಕಡಿಮೆ ಅಂಕಗಳಿಸಿದರೆ ಮಾತ್ರ ಲಕ್ನೋಗೆ ನೆಟ್ ರನ್ ರೇಟ್ ಸಹಾಯದಿಂದ ಪ್ಲೇಆಫ್ ಹಂತಕ್ಕೇರಲು ಅವಕಾಶ ದೊರೆಯಲಿದೆ.

5- ರಾಜಸ್ಥಾನ್ ರಾಯಲ್ಸ್: 12 ಪಂದ್ಯಗಳಲ್ಲಿ 6 ರಲ್ಲಿ ಜಯ ಸಾಧಿಸಿರುವ ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಇನ್ನುಳಿದಿರುವ 2 ಪಂದ್ಯಗಳಲ್ಲಿ ಆರ್ಆರ್ ಗೆಲುವು ದಾಖಲಿಸಿದರೆ ಒಟ್ಟು 16 ಅಂಕಗಳೊಂದಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರೆಯಲಿದೆ. ಆದರೆ ಇತರೆ ತಂಡಗಳು ಕೂಡ 16 ಪಾಯಿಂಟ್ಸ್ಗಳಿಸಿದರೆ ಇಲ್ಲಿ ನೆಟ್ ರನ್ ರೇಟ್ ಗಣನೆಗೆ ಬರಲಿದೆ.

6- ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆಡಿರುವ 11 ಪಂದ್ಯಗಳಲ್ಲಿ 10 ಜಯ ಸಾಧಿಸಿರುವ ಆರ್ಸಿಬಿ ತಂಡಕ್ಕೆ ಇನ್ನು 3 ಪಂದ್ಯಗಳು ಬಾಕಿಯಿದೆ. ಈ 3 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದರೆ ಒಟ್ಟು 16 ಅಂಕಗಳಾಗಲಿವೆ. ಇತ್ತ ಅಂಕ ಪಟ್ಟಿಯಲ್ಲಿ 3ನೇ ಅಥವಾ ನಾಲ್ಕನೇ ಸ್ಥಾನ ಪಡೆಯುವ ತಂಡವು 16 ಅಂಕಗಳಿಸಿದ್ದರೆ ನೆಟ್ ರನ್ ರೇಟ್ ಸಹಾಯದೊಂದಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಆರ್ಸಿಬಿಗಿದೆ.

7- ಕೊಲ್ಕತ್ತಾ ನೈಟ್ ರೈಡರ್ಸ್: 12 ಪಂದ್ಯಗಳನ್ನಾಡಿರುವ ಕೆಕೆಆರ್ ತಂಡವು 5 ಗೆಲುವಿನೊಂದಿಗೆ ಒಟ್ಟು 10 ಪಾಯಿಂಟ್ಸ್ ಕಲೆಹಾಕಿದೆ. ಇನ್ನುಳಿದಿರುವುದು ಕೇವಲ 2 ಪಂದ್ಯಗಳು ಮಾತ್ರ. ಈ ಪಂದ್ಯಗಳಲ್ಲಿ ಜಯ ಸಾಧಿಸಿದರೆ ಒಟ್ಟು 14 ಪಾಯಿಂಟ್ಸ್ ಆಗಲಿದೆ. ಅತ್ತ ಲೀಗ್ ಹಂತದ ಮುಕ್ತಾಯದ ವೇಳೆಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆಯುವ ತಂಡ 14 ಅಂಕ ಪಡೆದಿದ್ದರೆ ಮಾತ್ರ ನೆಟ್ ರನ್ ರೇಟ್ ನೆರವಿನಿಂದ ಕೆಕೆಆರ್ಗೆ ಪ್ಲೇಆಫ್ ಪ್ರವೇಶಿಸಬಹುದು.

8- ಪಂಜಾಬ್ ಕಿಂಗ್ಸ್: 11 ಪಂದ್ಯಗಳಲ್ಲಿ 5 ಗೆಲುವು ದಾಖಲಿಸಿರುವ ಪಂಜಾಬ್ ಕಿಂಗ್ಸ್ ತಂಡಕ್ಕೂ ಪ್ಲೇಆಫ್ ಪ್ರವೇಶಿಸುವ ಉತ್ತಮ ಅವಕಾಶವಿದೆ. ಇನ್ನುಳಿದಿರುವ 3 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದರೆ ಪಂಜಾಬ್ ತಂಡದ ಒಟ್ಟು ಅಂಕ 16 ಆಗಲಿದೆ. ಅತ್ತ ಅಂಕ ಪಟ್ಟಿಯಲ್ಲಿ 3ನೇ ಅಥವಾ ನಾಲ್ಕನೇ ಸ್ಥಾನ ಪಡೆಯುವ ತಂಡವು 16 ಪಾಯಿಂಟ್ಸ್ ಹೊಂದಿದ್ದರೆ, ನೆಟ್ ರನ್ ರೇಟ್ ನೆರವಿನಿಂದ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರೆಯಲಿದೆ.

9- ಸನ್ರೈಸರ್ಸ್ ಹೈದರಾಬಾದ್: ಎಸ್ಆರ್ಹೆಚ್ ತಂಡವು 11 ಪಂದ್ಯಗಳಲ್ಲಿ 4 ರಲ್ಲಿ ಜಯ ಸಾಧಿಸಿ 8 ಪಾಯಿಂಟ್ಸ್ ಕಲೆಹಾಕಿದೆ. ಇನ್ನುಳಿದ 3 ಪಂದ್ಯಗಳಲ್ಲಿ ಗೆದ್ದರೆ ಒಟ್ಟು 14 ಪಾಯಿಂಟ್ಸ್ ಆಗಲಿದೆ. ಅತ್ತ ಅಂಕಪಟ್ಟಿಯಲ್ಲಿ 3ನೇ ಅಥವಾ 4ನೇ ಸ್ಥಾನ ಪಡೆಯುವ ತಂಡಗಳು 14 ಅಂಕಗಳಿಸಿದ್ದರೆ ನೆಟ್ ರನ್ ರೇಟ್ ಸಹಾಯದಿಂದ ಪ್ಲೇಆಫ್ ಪ್ರವೇಶಿಸಬಹುದು.

10- ಡೆಲ್ಲಿ ಕ್ಯಾಪಿಟಲ್ಸ್: 11 ಪಂದ್ಯಗಳನ್ನಾಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡವು 4 ಗೆಲುವಿನೊಂದಿಗೆ ಒಟ್ಟು 8 ಪಾಯಿಂಟ್ಸ್ ಕಲೆಹಾಕಿದೆ. ಇನ್ನುಳಿದಿರುವ 3 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಒಟ್ಟು 14 ಪಾಯಿಂಟ್ಸ್ ಆಗಲಿದೆ. ಲೀಗ್ ಹಂತದ ಮುಕ್ತಾಯದ ವೇಳೆಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆಯುವ ತಂಡವು 14 ಪಾಯಿಂಟ್ಸ್ ಹೊಂದಿದ್ದರೆ ನೆಟ್ ರನ್ ರೇಟ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಪ್ಲೇಆಫ್ ಪ್ರವೇಶಿಸುವ ಅವಕಾಶ ಇರಲಿದೆ.
Published On - 10:07 pm, Sat, 13 May 23



















