- Kannada News Photo gallery Cricket photos Kannada News | IPL 2023 Qualifier 1 Match No reserve day if GT vs CSK Qualifier 1 match canceled due to rain
GT vs CSK, Weather Update: ಗುಜರಾತ್-ಚೆನ್ನೈ ಕ್ವಾಲಿಫೈಯರ್-1 ಪಂದ್ಯ ಮಳೆಯಿಂದ ರದ್ದಾದರೆ ಮೀಸಲು ದಿನವಿಲ್ಲ: ಫಲಿತಾಂಶ ಹೇಗೆ?
IPL 2023, Qualifier 1: ಜಿಟಿ-ಸಿಎಸ್ಕೆ ಪಂದ್ಯಕ್ಕೆ ಚೆನ್ನೈನಲ್ಲಿ ಮಳೆ ಬೀಳುವ ಸಾಧ್ಯತೆಗಳು ಇಲ್ಲವಾದರೂ, ಎಲ್ಲಾದರು ಮಳೆ ಬಂದರೆ ಸೂಪರ್ ಓವರ್ ನಡೆಸಿ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.
Updated on: May 23, 2023 | 11:21 AM

ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಲೀಗ್ ಹಂತದ ಎಲ್ಲ ಪಂದ್ಯಗಳು ಮುಕ್ತಾಯಗೊಂಡಿದ್ದು, ಗುಜರಾತ್, ಚೆನ್ನೈ, ಲಖನೌ ಮತ್ತು ಮುಂಬೈ ತಂಡಗಳು ಪ್ಲೇ ಆಫ್ಗೆ ಕ್ವಾಲಿಫೈ ಆಗಿದೆ.

ಇಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್ ತಂಡ ಎಂಎಸ್ ಧೋನಿ ಅವರ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಎದುರಿಸಲಿದೆ.

ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ಗೆ ಲಗ್ಗೆಯಿಟ್ಟರೆ ಸೋತ ತಂಡ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ಟೀಮ್ನೊಂದಿಗೆ ಸೆಣೆಸಾಟ ನಡೆಸಲಿದೆ. ಹೀಗೆ ಸಾಕಷ್ಟು ಮಹತ್ವದ ಪಡೆದುಕೊಂಡಿರುವ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಬಂದರೆ ಏನು ಗತಿ?.

ಜಿಟಿ-ಸಿಎಸ್ಕೆ ಪಂದ್ಯಕ್ಕೆ ಚೆನ್ನೈನಲ್ಲಿ ಮಳೆ ಬೀಳುವ ಸಾಧ್ಯತೆಗಳು ಇಲ್ಲವಾದರೂ, ಎಲ್ಲಾದರು ಮಳೆ ಬಂದರೆ ಸೂಪರ್ ಓವರ್ ನಡೆಸಿ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ಎಲ್ಲಾ ಪ್ಲೇ-ಆಫ್‌ಗಳು ಮತ್ತು ಫೈನಲ್ ಪಂದ್ಯಗಳಿಗೆ ಕೂಡ ಈ ನಿಯಮ ಅನ್ವಯಿಸುತ್ತದೆ.

ಒಂದುವೇಳೆ ಮಳೆ ನಿಲ್ಲದೆ ಸೂಪರ್ ಓವರ್ ಕೂಡ ನಡೆಸಲು ಸಾಧ್ಯವಾಗಿಲ್ಲ ಎಂದಾದಲ್ಲಿ, ಲೀಗ್ ಅಂಕಗಳು ವಿಜೇತರನ್ನು ನಿರ್ಧರಿಸುತ್ತವೆ. ಇದು ಕೂಡ ಎಲ್ಲಾ ಪ್ಲೇ-ಆಫ್ ಪಂದ್ಯಗಳಿಗೆ ಅನ್ವಯಿಸುತ್ತದೆ. ಕ್ವಾಲಿಫೈಯರ್ 1, ಎಲಿಮಿನೇಟರ್ ಮತ್ತು ಕ್ವಾಲಿಫೈಯರ್ 2 ಯಾವುದೇ ಮೀಸಲು ದಿನಗಳನ್ನು ಹೊಂದಿಲ್ಲ.

ಎಲ್ಲಾದರು ಇಂದಿನ ಜಿಟಿ ಹಾಗೂ ಚೆನ್ನೈ ಪಂದ್ಯಕ್ಕೆ ಮಳೆ ಬಂದು ಸೂಪರ್ ಓವರ್ ಕೂಡ ನಡೆಸಲು ಆಗಿಲ್ಲವಾದರೆ ಪಾಯಿಂಟ್ ಟೇಬಲ್ನಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ತಂಡ ಫೈನಲ್ಗೆ ಎಂಟ್ರಿ ಕೊಡಲಿದೆ.









