IPL 2023 Playoffs: ಪ್ಲೇಆಫ್ ಚಾನ್ಸ್: ಮಧ್ಯಾಹ್ನ ಮುಂಬೈ ಇಂಡಿಯನ್ಸ್ಗೆ, ರಾತ್ರಿ RCBಗೆ..!
TV9 Web | Updated By: ಝಾಹಿರ್ ಯೂಸುಫ್
Updated on:
May 20, 2023 | 3:57 PM
IPL 2023 Kannada: ಇನ್ನುಳಿದ 3 ಸ್ಥಾನಗಳಿಗಾಗಿ ಒಟ್ಟು 6 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನದಲ್ಲಿರುವ ಸಿಎಸ್ಕೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದರೆ ಪ್ಲೇಆಫ್ ಪ್ರವೇಶ ಖಚಿತವಾಗಲಿದೆ.
1 / 8
IPL 2023: ಐಪಿಎಲ್ನ ಲೀಗ್ ಹಂತದ ಮುಕ್ತಾಯವು ರೋಚಕಘಟ್ಟದತ್ತ ಬಂದು ನಿಂತಿದೆ. ಇದುವರೆಗಿನ 66 ಪಂದ್ಯಗಳ ಪ್ಲೇಆಫ್ ಪ್ರವೇಶವನ್ನು ಖಚಿತಪಡಿಸಿಕೊಂಡಿರುವುದು ಗುಜರಾತ್ ಟೈಟಾನ್ಸ್ ಮಾತ್ರ.
2 / 8
ಇನ್ನುಳಿದ 3 ಸ್ಥಾನಗಳಿಗಾಗಿ ಒಟ್ಟು 6 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ. ಪ್ರಸ್ತುತ ಪಾಯಿಂಟ್ಸ್ ಟೇಬಲ್ನಲ್ಲಿ 2ನೇ ಸ್ಥಾನದಲ್ಲಿರುವ ಸಿಎಸ್ಕೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದರೆ ಪ್ಲೇಆಫ್ ಪ್ರವೇಶ ಖಚಿತವಾಗಲಿದೆ. ಹಾಗೆಯೇ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವು ಕೆಕೆಆರ್ ವಿರುದ್ಧ ಜಯ ಸಾಧಿಸಿದರೆ ಪ್ಲೇಆಫ್ಗೆ ಪ್ರವೇಶಿಸಲಿದೆ.
3 / 8
ಈ ಎರಡು ಫಲಿತಾಂಶಗಳ ಬಳಿಕ ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ನಡುವೆ ಪೈಪೋಟಿ ಏರ್ಪಡಲಿದೆ. ಅಂದರೆ 14 ಪಾಯಿಂಟ್ಸ್ ಹೊಂದಿರುವ ಉಭಯ ತಂಡಗಳಿಗೂ ಪ್ಲೇಆಫ್ ಪ್ರವೇಶಿಸುವ ಉತ್ತಮ ಅವಕಾಶವಿದೆ.
4 / 8
ಇಲ್ಲಿ ಮುಂಬೈ ಇಂಡಿಯನ್ಸ್ ತಂಡವು ಎಸ್ಆರ್ಹೆಚ್ ವಿರುದ್ಧ ಗೆದ್ದರೆ 16 ಪಾಯಿಂಟ್ಸ್ನೊಂದಿಗೆ 4ನೇ ಸ್ಥಾನಕ್ಕೇರಲಿದೆ. ಹಾಗೆಯೇ ಆರ್ಸಿಬಿ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ಜಯ ಸಾಧಿಸಿದರೆ 16 ಅಂಕ ಕಲೆಹಾಕಿ ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಬಹುದು.
5 / 8
ವಿಶೇಷ ಎಂದರೆ ಈ ಎರಡು ಪಂದ್ಯಗಳು ನಡೆಯುತ್ತಿರುವುದು ಭಾನುವಾರ. ಅಂದರೆ ಮೇ 21 ರಂದು ಮಧ್ಯಾಹ್ನ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದೆ. ಇದರಲ್ಲಿ ಮುಂಬೈ ಗೆದ್ದರೆ ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಬಹುದು.
6 / 8
ಇನ್ನು ಭಾನುವಾರ ಸಂಜೆ ಶುರುವಾಗಲಿರುವ 2ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದರೆ ಮುಂಬೈ ಇಂಡಿಯನ್ಸ್ ತಂಡವನ್ನು ಹಿಂದಿಕ್ಕಿ ಆರ್ಸಿಬಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನ ಪಡೆಯಬಹುದು.
7 / 8
ಅಂದರೆ ಇಲ್ಲಿ ಮಧ್ಯಾಹ್ನದ ಪಂದ್ಯದಲ್ಲಿ ಗೆದ್ದು ಮುಂಬೈ ಇಂಡಿಯನ್ಸ್ಗೆ ನಾಲ್ಕನೇ ಸ್ಥಾನ ಅಲಂಕರಿಸುವ ಅವಕಾಶವಿದ್ದರೆ, ರಾತ್ರಿಯ ಪಂದ್ಯದಲ್ಲಿ ಗೆದ್ದು ಬೀಗುವ ಮೂಲಕ 4ನೇ ಸ್ಥಾನಕ್ಕೇರುವ ಉತ್ತಮ ಅವಕಾಶ ಆರ್ಸಿಬಿ ಮುಂದಿದೆ. ಹೀಗಾಗಿಯೇ ಐಪಿಎಲ್ನ ಲೀಗ್ ಹಂತದ ಕೊನೆಯ 2 ಪಂದ್ಯಗಳಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.
8 / 8
ಒಂದು ವೇಳೆ 15 ಅಂಕಗಳನ್ನು ಹೊಂದಿರುವ ಸಿಎಸ್ಕೆ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳಲ್ಲಿ ಒಂದು ತಂಡವು ಮುಂದಿನ ಪಂದ್ಯದಲ್ಲಿ ಸೋತರೆ, ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ಮುಂದಿನ ಪಂದ್ಯಗಳಲ್ಲಿ ಗೆದ್ದು ಒಟ್ಟು 16 ಪಾಯಿಂಟ್ಸ್ನೊಂದಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ಇರಲಿದೆ.