201 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್ಸಿಬಿ ತಂಡವು 8 ವಿಕೆಟ್ ನಷ್ಟಕ್ಕೆ 179 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಕೆಕೆಆರ್ 21 ರನ್ಗಳ ಜಯ ಸಾಧಿಸಿತು. ಒಂದು ವೇಳೆ ನಿತೀಶ್ ರಾಣಾ ಅವರ ವಿಕೆಟ್ ಬೇಗನೆ ಸಿಗುತ್ತಿದ್ದರೆ ಕೆಕೆಆರ್ ತಂಡವು ಒತ್ತಡಕ್ಕೆ ಒಳಗಾಗುತ್ತಿತ್ತು. ಅಲ್ಲದೆ ಮೂರನೇ ವಿಕೆಟ್ಗೆ 80 ರನ್ಗಳ ಭರ್ಜರಿ ಜೊತೆಯಾಟ ಕೂಡ ಮೂಡಿಬರುತ್ತಿರಲಿಲ್ಲ. ಇದರಿಂದ ಕೆಕೆಆರ್ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಕಡಿಮೆ ಗುರಿ ಪಡೆದು ಆರ್ಸಿಬಿಗೆ ಗೆಲ್ಲುವ ಅವಕಾಶ ಇರುತ್ತಿತ್ತು. ಆದರೆ ಆರ್ಸಿಬಿ ಕ್ಯಾಚ್ ಕೈಚೆಲ್ಲಿ ಮ್ಯಾಚ್ ಅನ್ನು ಕೂಡ ಕೈಚೆಲ್ಲಿದೆ ಎನ್ನಬಹುದು.