IPL 2023: RCB ಅಭಿಮಾನಿಗಳಿಗೆ ಗುಡ್ ನ್ಯೂಸ್: ಪ್ರಮುಖ ವೇಗಿ ಕಂಬ್ಯಾಕ್..!
IPL 2023 RCB Kannada: RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್.
Updated on: Apr 24, 2023 | 10:07 PM

IPL 2023: ಐಪಿಎಲ್ 16 ರಲ್ಲಿ ಆರ್ಸಿಬಿ ತಂಡದ ಮೊದಲಾರ್ಧ ಪೂರ್ಣಗೊಂಡಿದೆ. ಆಡಿರುವ 7 ಪಂದ್ಯಗಳಲ್ಲಿ 4 ಜಯ ಹಾಗೂ 3 ಸೋಲಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

ಇದೀಗ ಆರ್ಸಿಬಿ ತಂಡವು ಮುಂದಿನ ಪಂದ್ಯಕ್ಕಾಗಿ ಸಜ್ಜಾಗುತ್ತಿದೆ. ಈ ಪಂದ್ಯದಲ್ಲಿ ಫಾಫ್ ಪಡೆಯ ಎದುರಾಳಿ ಕೊಲ್ಕತ್ತಾ ನೈಟ್ ರೈಡರ್ಸ್. ಮೊದಲ ಸುತ್ತಿನಲ್ಲಿ ಕೆಕೆಆರ್ ವಿರುದ್ಧ ಸೋಲನುಭವಿಸಿದ್ದ ಆರ್ಸಿಬಿ ಈ ಬಾರಿ ಗೆಲ್ಲುವ ವಿಶ್ವಾಸದಲ್ಲಿದೆ. ಇದಕ್ಕೆ ಮುಖ್ಯ ಕಾರಣ ಪ್ರಮುಖ ವೇಗಿಯ ಕಂಬ್ಯಾಕ್.

ಹೌದು, ಕೆಕೆಆರ್ ವಿರುದ್ಧದ ಪಂದ್ಯದ ಮೂಲಕ ಆರ್ಸಿಬಿ ವೇಗಿ ಜೋಶ್ ಹ್ಯಾಝಲ್ವುಡ್ ಮೈದಾನಕ್ಕಿಳಿಯಲಿದ್ದಾರೆ. ಮೊಣಕಾಲಿನ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಹ್ಯಾಝಲ್ವುಡ್ ಮೊದಲಾರ್ಧದಲ್ಲಿ ಯಾವುದೇ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ.

ಇದೀಗ ಹ್ಯಾಝಲ್ವುಡ್ ಸಂಪೂರ್ಣ ಫಿಟ್ ಆಗಿದ್ದು, ಹೀಗಾಗಿ ಕೆಕೆಆರ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಇತ್ತ ಹ್ಯಾಝಲ್ವುಡ್ ಮುಂದಿನ ಪಂದ್ಯದಲ್ಲಿ ಆಡಲಿದ್ದಾರೆ ಎಂಬ ಸುಳಿವನ್ನೂ ಕೂಡ ವಿರಾಟ್ ಕೊಹ್ಲಿ ನೀಡಿದ್ದಾರೆ.

ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ಮೂಲಕ ಜೋಶ್ ಹ್ಯಾಝಲ್ವುಡ್ ಐಪಿಎಲ್ ಅಭಿಯಾನ ಆರಂಭಿಸಲಿದೆ. ಇತ್ತ ಆಸೀಸ್ ವೇಗಿಯ ಆಗಮನದೊಂದಿಗೆ ಆರ್ಸಿಬಿ ತಂಡದ ಬೌಲಿಂಗ್ ವಿಭಾಗ ಕೂಡ ಮತ್ತಷ್ಟು ಬಲಿಷ್ಠಗೊಳ್ಳಲಿದೆ.

ಏಕೆಂದರೆ ಆರ್ಸಿಬಿ ತಂಡಕ್ಕೆ ಪವರ್ಪ್ಲೇನಲ್ಲೇ ಮೊಹಮ್ಮದ್ ಸಿರಾಜ್ ಯಶಸ್ಸು ತಂದುಕೊಡುತ್ತಿದ್ದರೂ ಉಳಿದ ಬೌಲರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರುತ್ತಿಲ್ಲ. ಇದೀಗ ಹ್ಯಾಝಲ್ವುಡ್ ಆಗಮನದೊಂದಿಗೆ ಈ ಸಮಸ್ಯೆಗೆ ಪರಿಹಾರ ಕಾಣುವ ನಿರೀಕ್ಷೆಯಿದೆ.

ಏಕೆಂದರೆ ಐಪಿಎಲ್‌ನ 2022 ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅತಿ ಹೆಚ್ಚು ವಿಕೆಟ್ ಪಡೆದ ವೇಗಿ ಜೋಶ್ ಹ್ಯಾಝಲ್ವುಡ್. 12 ಪಂದ್ಯಗಳಿಂದ ಒಟ್ಟು 20 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದರು. ಇದೀಗ ನಿರ್ಣಾಯಕವಾಗಿರುವ ದ್ವಿತಿಯಾರ್ಧದಲ್ಲಿ ಹ್ಯಾಝಲ್ವುಡ್ ಕಣಕ್ಕಿಳಿಯುತ್ತಿರುವುದು ಆರ್ಸಿಬಿ ತಂಡದ ಬಲವನ್ನು ಹೆಚ್ಚಿಸಲಿದೆ.

RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ಮೈಕೆಲ್ ಬ್ರೇಸ್ವೆಲ್, ವೈಶಾಕ್ ವಿಜಯಕುಮಾರ್.
