IPL 2023: RCB ತಂಡದಿಂದ ಈ ಮೂವರು ಹೊರಬೀಳುವುದು ಬಹುತೇಕ ಖಚಿತ..!
TV9 Web | Updated By: ಝಾಹಿರ್ ಯೂಸುಫ್
Updated on:
May 24, 2023 | 9:22 PM
IPL 2023 Kannada: ಮುಂದಿನ ಸೀಸನ್ಗೂ ಮುನ್ನ RCB ತಂಡಕ್ಕೆ ಮೇಜರ್ ಸರ್ಜರಿಯಾಗುವುದು ಖಚಿತ. ಹೀಗೆ ಮುಂದಿನ ಸೀಸನ್ಗೂ ಮುನ್ನ ಆರ್ಸಿಬಿ ತಂಡದಿಂದ ಈ ಮೂವರು ಹೊರಬೀಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಅವರೆಂದರೆ...
1 / 8
IPL 2023: ಐಪಿಎಲ್ ಸೀಸನ್ 16 ರಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿರುವ ಆರ್ಸಿಬಿ ತಂಡವು ಲೀಗ್ ಹಂತದಿಂದಲೇ ಹೊರಬಿದ್ದಿದೆ. ಅದರಲ್ಲೂ ಇಡೀ ಟೂರ್ನಿಯಲ್ಲಿ ಆರ್ಸಿಬಿ ತಂಡ ನಾಲ್ವರನ್ನು ಅವಲಂಭಿಸಿ 7 ಪಂದ್ಯಗಳನ್ನು ಗೆದ್ದುಕೊಂಡಿದ್ದು ದೊಡ್ಡ ಸಾಧನೆಯೇ ಸರಿ.
2 / 8
ಅಂದರೆ ಆರ್ಸಿಬಿ ಪರ ಈ ಬಾರಿ ಅತ್ಯುತ್ತಮ ಪ್ರದರ್ಶನ ನೀಡಿದ್ದು ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಮೊಹಮ್ಮದ್ ಸಿರಾಜ್. ಡುಪ್ಲೆಸಿಸ್ 730 ರನ್ ಬಾರಿಸಿದರೆ, ವಿರಾಟ್ ಕೊಹ್ಲಿ 639 ರನ್ ಕಲೆಹಾಕಿದ್ದರು. ಇನ್ನು ಗ್ಲೆನ್ ಮ್ಯಾಕ್ಸ್ವೆಲ್ 400 ರನ್ ಪೇರಿಸಿದರೆ, ಸಿರಾಜ್ 19 ವಿಕೆಟ್ ಕಬಳಿಸಿ ಮಿಂಚಿದ್ದರು.
3 / 8
ಅಚ್ಚರಿ ಎಂದರೆ ಫಾಫ್, ಕೊಹ್ಲಿ ಹಾಗೂ ಮ್ಯಾಕ್ಸ್ವೆಲ್ರನ್ನು ಹೊರತುಪಡಿಸಿದರೆ ಆರ್ಸಿಬಿ ತಂಡದ ಯಾವೊಬ್ಬ ಬ್ಯಾಟರ್ ಕೂಡ 150 ರನ್ ಕಲೆಹಾಕಿಲ್ಲ. ಹಾಗೆಯೇ ಸಿರಾಜ್ ಅವರನ್ನು ಹೊರತುಪಡಿಸಿದರೆ ಯಾವುದೇ ಬೌಲರ್ 15 ವಿಕೆಟ್ಗಳನ್ನೂ ಕೂಡ ಕಬಳಿಸಿಲ್ಲ.
4 / 8
ಅಂದರೆ ಆರ್ಸಿಬಿ ಒಂದು ತಂಡವಾಗಿ ಪ್ರದರ್ಶನ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಹೀಗಾಗಿಯೇ ಮುಂದಿನ ಸೀಸನ್ಗೂ ಮುನ್ನ ಆರ್ಸಿಬಿ ತಂಡಕ್ಕೆ ಮೇಜರ್ ಸರ್ಜರಿಯಾಗುವುದು ಖಚಿತ. ಹೀಗೆ ಮುಂದಿನ ಸೀಸನ್ಗೂ ಮುನ್ನ ಆರ್ಸಿಬಿ ತಂಡದಿಂದ ಈ ಮೂವರು ಹೊರಬೀಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಅವರೆಂದರೆ...
5 / 8
1- ಅನೂಜ್ ರಾವತ್: ಈ ಬಾರಿ ಆರ್ಸಿಬಿ ತಂಡದ ವಿಕೆಟ್ ಕೀಪರ್ ಆಗಿ ಕಾಣಿಸಿಕೊಂಡಿದ್ದ ಅನೂಜ್ ರಾವತ್ ಒಟ್ಟು 7 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಕಲೆಹಾಕಿರುವುದು ಕೇವಲ 91 ರನ್ ಮಾತ್ರ. ಅಂದರೆ 3.4 ಕೋಟಿ ರೂ. ನೀಡಿ ಖರೀದಿಸಿದ್ದ ಆಟಗಾರ ಕಲೆಹಾಕಿದ ರನ್ ಸರಾಸರಿ ಕೇವಲ 13 ರನ್. ಹೀಗಾಗಿಯೇ ಅನೂಜ್ ರಾವತ್ರನ್ನು ಆರ್ಸಿಬಿ ಕೈ ಬಿಡುವುದು ಖಚಿತ ಎನ್ನಬಹುದು.
6 / 8
2- ಮಹಿಪಾಲ್ ಲೋಮ್ರರ್: ಈ ಬಾರಿಯ ಐಪಿಎಲ್ನಲ್ಲಿ ಮಹಿಪಾಲ್ ಲೋಮ್ರರ್ 10 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಕಲೆಹಾಕಿರುವ ಒಟ್ಟು ಸ್ಕೋರ್ 135 ರನ್. ಇತ್ತ 95 ಲಕ್ಷ ರೂ. ನೀಡಿ ಖರೀದಿಸಿದ್ದ ಆಟಗಾರನಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಹೀಗಾಗಿ ಲೋಮ್ರರ್ ಕೂಡ ಹೊರಬೀಳಲಿದ್ದಾರೆ.
7 / 8
3- ದಿನೇಶ್ ಕಾರ್ತಿಕ್: ಆರ್ಸಿಬಿ ತಂಡದ ಫಿನಿಶರ್ ಆಗಿ ಕಾಣಿಸಿಕೊಂಡಿದ್ದ ದಿನೇಶ್ ಕಾರ್ತಿಕ್ ಈ ಬಾರಿ 13 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ 4 ಬಾರಿ ಡಕ್ ಔಟ್ ಆಗಿದ್ದಾರೆ. ಇನ್ನು ಕಲೆಹಾಕಿರುವುದು ಕೇವಲ 140 ರನ್ ಮಾತ್ರ. ಅಂದರೆ 5.5 ಕೋಟಿ ರೂ. ನೀಡಿ ಆರ್ಸಿಬಿ ತಂಡ ಉಳಿಸಿಕೊಂಡಿದ್ದ ಆಟಗಾರ ಪ್ರತಿ ಮ್ಯಾಚ್ನಲ್ಲಿ 10 ರ ಸರಾಸರಿಯಲ್ಲಿ ಮಾತ್ರ ರನ್ಗಳಿಸಿದ್ದಾರೆ.
8 / 8
ಸದ್ಯ ದಿನೇಶ್ ಕಾರ್ತಿಕ್ ಅವರಿಗೆ 37 ವರ್ಷವಾಗಿದ್ದು, ಇದಲ್ಲದೆ ಇತರೆ ಯಾವುದೇ ಸ್ಪರ್ಧಾತ್ಮಕ ಟೂರ್ನಿಯಲ್ಲೂ ಭಾಗವಹಿಸುತ್ತಿಲ್ಲ. ಅಲ್ಲದೆ ಈ ಬಾರಿ ವಿಕೆಟ್ ಕೀಪಿಂಗ್ನಲ್ಲೂ ವಿಫಲರಾಗಿದ್ದರು. ಹೀಗಾಗಿ ಡಿಕೆಯನ್ನು ಕೂಡ ಕೈ ಬಿಡುವುದು ಕೂಡ ಖಚಿತ ಎನ್ನಬಹುದು.