Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಔಟಾ ಅಥವಾ ನಾಟೌಟಾ? ಹೊಸ ಚರ್ಚೆಗೆ ಕಾರಣವಾದ ಅಂಪೈರ್ ತೀರ್ಪು

IPL 2023 Kannada: ಸೂರ್ಯಕುಮಾರ್ ಯಾದವ್ (33) ಹಾಗೂ ಕ್ಯಾಮರೋನ್ ಗ್ರೀನ್ (41) ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಆದರೆ ಇವರಿಬ್ಬರ ನಿರ್ಗಮನದೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ಮೇಲುಗೈ ಸಾಧಿಸಿತು.

TV9 Web
| Updated By: ಝಾಹಿರ್ ಯೂಸುಫ್

Updated on: May 24, 2023 | 11:24 PM

IPL 2023 LSG vs MI: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ ಎಲಿಮಿನೇಟರ್ ಪಂದ್ಯದಲ್ಲಿ ಅಂಪೈರ್ ನೀಡಿದ ತೀರ್ಪು ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು.

1 / 8
ಅದರಂತೆ ಇನಿಂಗ್ಸ್ ಆರಂಭಿಸಿದ ಮುಂಬೈ ಇಂಡಿಯನ್ಸ್ ಉತ್ತಮ ಆರಂಭ ಪಡೆದಿರಲಿಲ್ಲ. ನಾಯಕ ರೋಹಿತ್ ಶರ್ಮಾ 11 ರನ್​ಗಳಿಸಿ ಔಟಾದರೆ, ಇಶಾನ್ ಕಿಶನ್ 15 ರನ್​ಗಳಿಸಿ ವಿಕೆಟ್ ಒಪ್ಪಿಸಿದರು.

2 / 8
ಇನ್ನು ಸೂರ್ಯಕುಮಾರ್ ಯಾದವ್ (33) ಹಾಗೂ ಕ್ಯಾಮರೋನ್ ಗ್ರೀನ್ (41) ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಆದರೆ ಇವರಿಬ್ಬರ ನಿರ್ಗಮನದೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ಮೇಲುಗೈ ಸಾಧಿಸಿತು.

3 / 8
ಈ ಹಂತದಲ್ಲಿ ಕ್ರೀಸ್​ನಲ್ಲಿದ್ದ ಟಿಮ್ ಡೇವಿಡ್ ಕಡೆಯಿಂದ ಭರ್ಜರಿ ಬ್ಯಾಟಿಂಗ್ ಅನ್ನು ಮುಂಬೈ ಇಂಡಿಯನ್ಸ್ ನಿರೀಕ್ಷಿತ್ತು. ಆದರೆ 16ನೇ ಓವರ್​ನಲ್ಲಿ ಯಶ್ ಠಾಕೂರ್ ಎಸೆದ 3ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದರು.

4 / 8
ಆದರೆ ಚೆಂಡು ನೇರವಾಗಿ ದೀಪಕ್ ಹೂಡಾ ಅವರ ಕೈ ಸೇರಿತು. ಇತ್ತ ಚೆಂಡು ಸೊಂಟಕ್ಕಿಂತ ಮೇಲ್ಭಾಗದತ್ತ ಬಂದಿದ್ದರಿಂದ ಟಿಮ್ ಡೇವಿಡ್ ಹೈ ನೋಬಾಲ್​ಗಾಗಿ ಅಂಪೈರ್​ಗೆ ಮನವಿ ಸಲ್ಲಿಸಿದರು. ಈ ವೇಳೆ ಬೌಲ್ ಎತ್ತರವನ್ನು ಪರಿಶೀಲಿಸಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು.

5 / 8
ಆದರೆ ಟಿಮ್ ಡೇವಿಡ್ ಚೆಂಡು ನನ್ನ ಸೊಂಟಕ್ಕಿಂತ ಮೇಲ್ಭಾಗದಲ್ಲಿತ್ತು ಎಂಬ ವಾದವನ್ನು ಮುಂದಿಟ್ಟು ಅಂಪೈರ್ ತೀರ್ಪಿನ ವಿರುದ್ಧ ಅಸಮಾಧಾನ ಹೊರಹಾಕಿದರು.

6 / 8
ಆದರೆ ಮೂರನೇ ಅಂಪೈರ್ ವಿಡಿಯೋ ಪರಿಶೀಲಿಸಿದ ವೇಳೆ ಚೆಂಡು ಟಿಮ್ ಟೇವಿಡ್ ಅವರ ಸೊಂಟಕ್ಕಿಂತ ತುಸು ಕೆಳ ಭಾಗದಲ್ಲಿರುವುದು ಕಾಣಬಹುದು. ಹಾಗೆಯೇ ಬಾಲ್ ನೇರವಾಗಿ ವಿಕೆಟ್ ಬೇಲ್ಸ್ ಅನ್ನು ಕೂಡ ಎಗರಿಸುವಂತಿದೆ. ಇದೇ ಕಾರಣದಿಂದಾಗಿ ಟಿವಿ ಅಂಪೈರ್ ನೋಬಾಲ್ ಅಲ್ಲ, ಔಟ್ ಎಂಬ ತೀರ್ಪು ನೀಡಿದ್ದರು.

7 / 8
ಇದಾಗ್ಯೂ ಅಂಪೈರ್ ತೀರ್ಪಿನ ವಿರುದ್ಧ ಇದೀಗ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಇದರ ಬೆನ್ನಲ್ಲೇ ಅದು ನೋಬಾಲ್/ಗುಡ್ ಬಾಲ್ ಎಂಬ ಪರ-ವಿರೋಧ ಚರ್ಚೆಗಳು ಶರುವಾಗಿದೆ.

8 / 8
Follow us
ಗುತ್ತಿಗೆದಾರರು ಈ ಸರ್ಕಾರವನ್ನೂ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ: ಸೋಮಣ್ಣ

ಪುಣ್ಯಸ್ನಾನ ಮಾಡಿ ಸಂಗಮ ತೀರದಲ್ಲೇ ಬಟ್ಟೆ ಬಿಸಾಡಿ ಹೋಗುತ್ತಿರುವ ಜನ

ಎಲೆಕೋಸು ಬೆಲೆ ದಿಢೀರ್​​ ಕುಸಿತ: ಕುರಿಗಳನ್ನ ಬಿಟ್ಟು ಬೆಳೆ ನಾಶ ಪಡಿಸಿದ ರೈತ

ಸಂಸದರಾಗಿ 50ನೇ ಬಾರಿಗೆ ವಾರಾಣಸಿಗೆ ಪ್ರಧಾನಿ ಮೋದಿ ಭೇಟಿ

ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ನೆಹರೂ: ಕಾರಜೋಳ

ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ

ಒಂದೇ ಸ್ಟ್ರಾಟಿಜಿ ಎಲ್ಲ ಪಂದ್ಯಗಳಿಗೆ ನಡೆಯಲ್ಲ, ಬದಲಾಯಿಸಬೇಕು: ಅಭಿಮಾನಿ

ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್

ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!