IPL 2023: RCB ತಂಡದಿಂದ 7 ಆಟಗಾರರಿಗೆ ಗೇಟ್ ಪಾಸ್ ಸಾಧ್ಯತೆ

Edited By:

Updated on: May 30, 2023 | 8:30 PM

IPL 2023 Kannada: ಲೀಗ್ ಹಂತದಲ್ಲಿ 14 ಪಂದ್ಯಗಳನ್ನಾಡಿದ್ದ RCB ಜಯ ಸಾಧಿಸಿದ್ದು ಕೇವಲ 7 ಪಂದ್ಯಗಳಲ್ಲಿ ಮಾತ್ರ. ವಿಶೇಷ ಎಂದರೆ ಈ ಏಳು ಪಂದ್ಯಗಳ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದ್ದು ಕೇವಲ ನಾಲ್ವರು ಆಟಗಾರರು ಮಾತ್ರ.

1 / 12
IPL 2023: ಐಪಿಎಲ್ ಸೀಸನ್ 16 ಮುಕ್ತಾಯಗೊಂಡಿದೆ. ಅಂತಿಮ ಹಣಾಹಣಿಯಲ್ಲಿ ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇತ್ತ ಈ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದೊಂದಿಗೆ ಟೂರ್ನಿ ಆರಂಭಿಸಿದ್ದ ಆರ್​ಸಿಬಿ 6ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

IPL 2023: ಐಪಿಎಲ್ ಸೀಸನ್ 16 ಮುಕ್ತಾಯಗೊಂಡಿದೆ. ಅಂತಿಮ ಹಣಾಹಣಿಯಲ್ಲಿ ಬಲಿಷ್ಠ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇತ್ತ ಈ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸದೊಂದಿಗೆ ಟೂರ್ನಿ ಆರಂಭಿಸಿದ್ದ ಆರ್​ಸಿಬಿ 6ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

2 / 12

ಲೀಗ್ ಹಂತದಲ್ಲಿ 14 ಪಂದ್ಯಗಳನ್ನಾಡಿದ್ದ ಆರ್​ಸಿಬಿ ಜಯ ಸಾಧಿಸಿದ್ದು ಕೇವಲ 7 ಪಂದ್ಯಗಳಲ್ಲಿ ಮಾತ್ರ. ವಿಶೇಷ ಎಂದರೆ ಈ ಏಳು ಪಂದ್ಯಗಳ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದ್ದು ಕೇವಲ ನಾಲ್ವರು ಆಟಗಾರರು ಮಾತ್ರ.

3 / 12

ಅಂದರೆ ಟೂರ್ನಿಯುದ್ಧಕ್ಕೂ ಫಾಫ್ ಡುಪ್ಲೆಸಿಸ್ (730 ರನ್), ವಿರಾಟ್ ಕೊಹ್ಲಿ (639 ರನ್), ಗ್ಲೆನ್ ಮ್ಯಾಕ್ಸ್​ವೆಲ್ (400 ರನ್) ಹಾಗೂ ಮೊಹಮ್ಮದ್ ಸಿರಾಜ್ (19 ವಿಕೆಟ್) ಮಿಂಚಿದ್ದು ಬಿಟ್ಟರೆ, ಉಳಿದವರು ಲೆಕ್ಕಕ್ಕಿದ್ದರೇ ಹೊರತು ಆಟಕ್ಕಿರಲಿಲ್ಲ.

4 / 12

ಹೀಗಾಗಿಯೇ ಮುಂದಿನ ಸೀಸನ್​ ಐಪಿಎಲ್​ಗೂ ಮುನ್ನ ಆರ್​ಸಿಬಿ ತಂಡಕ್ಕೆ ಮೇಜರ್ ಸರ್ಜರಿ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಈ ಬಾರಿ ಕಳಪೆ ಪ್ರದರ್ಶನ ನೀಡಿದ ಆಟಗಾರರನ್ನು ಕೈ ಬಿಡುವುದು ಬಹುತೇಕ ಖಚಿತ ಎನ್ನಲಾಗಿದೆ. ಅದರಂತೆ ಈ ಸಲ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಆಟಗಾರರು ಯಾರೆಲ್ಲಾ ಎಂದು ನೋಡುವುದಾದರೆ...

5 / 12

1- ದಿನೇಶ್ ಕಾರ್ತಿಕ್: 13 ಇನಿಂಗ್ಸ್​ಗಳಲ್ಲಿ ಬ್ಯಾಟಿಂಗ್ ಮಾಡಿರುವ ದಿನೇಶ್ ಕಾರ್ತಿಕ್ ಕಲೆಹಾಕಿರುವುದು ಕೇವಲ 140 ರನ್ ಮಾತ್ರ. ಸದ್ಯ ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ದೂರ ಉಳಿದಿರುವ ಕಾರಣ ಡಿಕೆಯನ್ನು ಕೂಡ ಉಳಿಸಿಕೊಳ್ಳುವುದಿಲ್ಲ ಎನ್ನಬಹುದು.

6 / 12

2- ಮಹಿಪಾಲ್ ಲೋಮ್ರರ್: 10 ಇನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ಲೋಮ್ರರ್ 135 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಹೀಗಾಗಿ ಲೋಮ್ರರ್​ಗೂ ಗೇಟ್ ಪಾಸ್ ನೀಡಲಿದೆ.

7 / 12

3- ಅನೂಜ್ ರಾವತ್: 7 ಇನಿಂಗ್ಸ್​ ಆಡಿರುವ ಅನೂಜ್ ರಾವತ್ ಕಲೆಹಾಕಿರುವುದು ಕೇವಲ 91 ರನ್​ ಮಾತ್ರ. ಇತ್ತ 3.4 ಕೋಟಿಗೆ ಖರೀದಿಸಿರುವ ಆಟಗಾರನಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರದ ಕಾರಣ ತಂಡದಿಂದ ರಿಲೀಸ್ ಮಾಡುವುದು ಖಚಿತ.

8 / 12

4- ಶಹಬಾಝ್ ಅಹ್ಮದ್: 10 ಪಂದ್ಯಗಳಲ್ಲಿ 6 ಮ್ಯಾಚ್​ನಲ್ಲಿ ಬ್ಯಾಟ್ ಮಾಡಿರುವ ಶಹಬಾಝ್ ಕಲೆಹಾಕಿದ್ದು 42 ರನ್​ ಮಾತ್ರ. ಇನ್ನು ಕೇವಲ 1 ವಿಕೆಟ್ ಮಾತ್ರ ಪಡೆದಿದ್ದಾರೆ. ಹೀಗಾಗಿ ಶಹಬಾಝ್​ನ ಕೈ ಬಿಡುವುದು ಬಹುತೇಕ ಖಚಿತ ಎನ್ನಬಹುದು.

9 / 12

5- ಕೇದರ್ ಜಾಧವ್: 1 ಇನಿಂಗ್ಸ್ ಆಡಿದ್ದ ಹಿರಿಯ ಆಟಗಾರ ಕೇದರ್ ಜಾಧವ್ ಕಲೆಹಾಕಿದ್ದು ಕೇವಲ 12 ರನ್​ ಮಾತ್ರ. ಬದಲಿ ಆಟಗಾರನಾಗಿ ಆಯ್ಕೆಯಾಗಿದ್ದ ಜಾಧವ್ ಅವರನ್ನು ಉಳಿಸಿಕೊಳ್ಳುವುದು ಅನುಮಾನ.

10 / 12

6- ಸುಯಶ್ ಪ್ರಭುದೇಸಾಯಿ: 5 ಮ್ಯಾಚ್​ನಲ್ಲಿ ಕಣಕ್ಕಿಳಿದಿದ್ದ ಸುಯಶ್ 4 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಕಲೆಹಾಕಿದ ಒಟ್ಟು ಸ್ಕೋರ್ ಕೇವಲ 35 ರನ್ ಮಾತ್ರ. ಹೀಗಾಗಿ ಸುಯಶ್​ರನ್ನು ಕೂಡ ರಿಲೀಸ್ ಮಾಡಬಹುದು.

11 / 12

7- ಕರ್ಣ್ ಶರ್ಮಾ: 7 ಪಂದ್ಯಗಳಲ್ಲಿ 223 ರನ್ ನೀಡಿ ಕರ್ಣ್ ಶರ್ಮಾ ಒಟ್ಟು 10 ವಿಕೆಟ್ ಕಬಳಿಸಿದ್ದಾರೆ. ಇದಾಗ್ಯೂ ಮುಂದಿನ ಸೀಸನ್​ಗಾಗಿ 35 ವರ್ಷದ ಹಿರಿಯ ಆಟಗಾರನನ್ನು ಆರ್​ಸಿಬಿ ಉಳಿಸಿಕೊಳ್ಳುವುದು ಅನುಮಾನ.

12 / 12

RCB ತಂಡ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್​ವೆಲ್​, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್​ವುಡ್​, ಮೊಹಮ್ಮದ್ ಸಿರಾಜ್, ಕರ್ಣ್​ ಶರ್ಮಾ, ಸಿದ್ಧಾರ್ಥ್​ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್​ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯಕುಮಾರ್.

TV9 Web

TV9 Kannada

Read More
Loading...
Unable to load recommendations.
Follow Us