
IPL 2023 RCB vs SRH: ಐಪಿಎಲ್ನ 65ನೇ ಪಂದ್ಯದಲ್ಲಿ ಆರ್ಸಿಬಿ ಹಾಗೂ ಎಸ್ಆರ್ಹೆಚ್ ತಂಡಗಳು ಮುಖಾಮುಖಿಯಾಗಲಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಪ್ಲೇಆಫ್ ಕನಸನ್ನು ಜೀವಂತವಿರಿಸಿಕೊಳ್ಳುವ ಇರಾದೆಯಲ್ಲಿದೆ ಆರ್ಸಿಬಿ.

ಆದರೆ ಅದು ಅಂದುಕೊಂಡಷ್ಟು ಸುಲಭವಲ್ಲ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ. ಏಕೆಂದರೆ ಸನ್ರೈಸರ್ಸ್ ಹೈದರಾಬಾದ್ ತಂಡವು ಇತರೆ ತಂಡಗಳ ವಿರುದ್ಧ ಮುಗ್ಗರಿಸಿದರೂ ಆರ್ಸಿಬಿ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಉಭಯ ತಂಡಗಳ ಮುಖಾಮುಖಿಯ ಅಂಶಗಳು ಇದನ್ನೇ ಪುಷ್ಠೀಕರಿಸುತ್ತದೆ.

ಅಂದರೆ ಆರ್ಸಿಬಿ-ಎಸ್ಆರ್ಹೆಚ್ ಇದುವರೆಗೆ 22 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ವೇಳೆ ಅತ್ಯಧಿಕ ಬಾರಿ ಗೆದ್ದಿರುವುದು ಸನ್ರೈಸರ್ಸ್ ಹೈದರಾಬಾದ್. ಎಸ್ಆರ್ಹೆಚ್ 12 ಬಾರಿ ಜಯ ಸಾಧಿಸಿದರೆ, ಆರ್ಸಿಬಿ 9 ಬಾರಿ ಗೆಲುವು ದಾಖಲಿಸಿದೆ. ಇನ್ನು ಒಂದು ಪಂದ್ಯವು ರದ್ದಾಗಿತ್ತು.

ಇನ್ನು ಕಳೆದ ಮೂರು ಸೀಸನ್ ಐಪಿಎಲ್ನಲ್ಲೂ ಉಭಯ ತಂಡಗಳಿಂದಲೂ ಭರ್ಜರಿ ಪೈಪೋಟಿ ಎದುರಾಗಿತ್ತು. 2020 ರಲ್ಲಿ RCB vs SRH ಮೂರು ಬಾರಿ ಮುಖಾಮುಖಿಯಾಗಿತ್ತು. ಈ ವೇಳೆ ಎರಡಲ್ಲಿ ಎಸ್ಆರ್ಹೆಚ್ ಗೆಲುವು ದಾಖಲಿಸಿತ್ತು. ಇನ್ನು ಐಪಿಎಲ್ 2021 ರಲ್ಲಿ 2 ಪಂದ್ಯಗಳಲ್ಲಿ ಉಭಯ ತಂಡಗಳು ಒಂದೊಂದು ಜಯ ಸಾಧಿಸಿತ್ತು. ಹಾಗೆಯೇ 2022 ರಲ್ಲಿ ಮೊದಲ ಪಂದ್ಯ ಎಸ್ಆರ್ಹೆಚ್ ಗೆದ್ದರೆ, 2ನೇ ಪಂದ್ಯದಲ್ಲಿ ಆರ್ಸಿಬಿ ಜಯ ಸಾಧಿಸಿತ್ತು.

ಅಂದರೆ ಇಲ್ಲಿ ಮೇಲ್ನೋಟಕ್ಕೆ ಆರ್ಸಿಬಿ ತಂಡವು ಬಲಿಷ್ಠವಾಗಿ ಕಾಣಿಸಿಕೊಂಡರೂ, ಪ್ರತಿ ಸೀಸನ್ನಲ್ಲೂ ಎಸ್ಆರ್ಹೆಚ್ ತಂಡ ಉತ್ತಮ ಪೈಪೋಟಿ ನೀಡಿದೆ. ಹೀಗಾಗಿಯೇ ರಾಜೀವ್ ಗಾಂಧಿ ಮೈದಾನದಲ್ಲಿ SRH ಪಡೆಯನ್ನು ಸೋಲಿಸುವುದು RCB ಗೆ ಅಂದುಕೊಂಡಷ್ಟು ಸುಲಭವಲ್ಲ.

SRH ತಂಡ ಹೀಗಿದೆ: ಅಭಿಷೇಕ್ ಶರ್ಮಾ , ರಾಹುಲ್ ತ್ರಿಪಾಠಿ , ಐಡೆನ್ ಮಾರ್ಕ್ರಾಮ್ (ನಾಯಕ) , ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್) , ಅಬ್ದುಲ್ ಸಮದ್ , ಸನ್ವಿರ್ ಸಿಂಗ್ , ಮಯಾಂಕ್ ಮಾರ್ಕಾಂಡೆ , ಮಾರ್ಕೊ ಯಾನ್ಸೆನ್ , ಭುವನೇಶ್ವರ್ ಕುಮಾರ್ , ಫಜಲ್ಹಕ್ ಫಾರೂಕಿ , ಟಿ ನಟರಾಜನ್, ಅನ್ಮೋಲ್ಪ್ರೀತ್ ಸಿಂಗ್ , ಗ್ಲೆನ್ ಫಿಲಿಪ್ಸ್ , ಅಕೇಲ್ ಹೊಸೈನ್ , ಮಯಾಂಕ್ ಡಗರ್ , ನಿತೀಶ್ ರೆಡ್ಡಿ , ವಿವ್ರಾಂತ್ ಶರ್ಮಾ , ಆದಿಲ್ ರಶೀದ್ , ಮಯಾಂಕ್ ಅಗರ್ವಾಲ್ , ಸಮರ್ಥ ವ್ಯಾಸ್ , ಉಪೇಂದ್ರ ಯಾದವ್ , ಹ್ಯಾರಿ ಬ್ರೂಕ್ , ಕಾರ್ತಿಕ್ ತ್ಯಾಗಿ , ಉಮ್ರಾನ್ ಮಲಿಕ್.

RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್ವೆಲ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಕೇದಾರ್ ಜಾಧವ್, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯಕುಮಾರ್.