- Kannada News Photo gallery Cricket photos IPL 2023: RCB’s Josh Hazlewood Set to miss first 7 matches
IPL 2023: 7 ಪಂದ್ಯಗಳಿಗೆ ಸ್ಟಾರ್ ಆಟಗಾರ ಅಲಭ್ಯ: RCB ತಂಡದ ಮುಂದಿನ ನಡೆಯೇನು?
IPL 2023 Kannada: RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್.
Updated on: Mar 31, 2023 | 3:23 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಚಿಂತೆ ಶುರುವಾಗಿದೆ. ಅದುವೇ ಆಟಗಾರರ ಗಾಯದ ಸಮಸ್ಯೆ. ಆರ್ಸಿಬಿ ತಂಡದ ಮೂವರು ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್ವೆಲ್ ಹಾಗೂ ಜೋಶ್ ಹ್ಯಾಝಲ್ವುಡ್ ಸಂಪೂರ್ಣ ಫಿಟ್‌ನೆಸ್ ಹೊಂದಿಲ್ಲ. ಇದೇ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಚಿಂತೆಯನ್ನು ಹೆಚ್ಚಿಸಿದೆ. ವಿಶೇಷ ಎಂದರೆ ಮೂವರು ಆಟಗಾರರು ಕೂಡ ಆರ್ಸಿಬಿ ಪ್ಲೇಯಿಂಗ್ ಇಲೆವೆನ್ನ ಖಾಯಂ ಸದಸ್ಯರು. ಅದರಲ್ಲೂ ಫಿಟ್‌ನೆಸ್ ಸಮಸ್ಯೆಯ ಕಾರಣ ತಂಡದ ಪ್ರಮುಖ ವೇಗಿ ಜೋಶ್ ಹ್ಯಾಝಲ್ವುಡ್ 7 ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.

ಅಂದರೆ ಆರ್ಸಿಬಿ ತಂಡದ ಮೊದಲಾರ್ಧದ ಪಂದ್ಯಗಳಲ್ಲಿ ಜೋಶ್ ಹ್ಯಾಝಲ್ವುಡ್ ಕಣಕ್ಕಿಳಿಯುವುದಿಲ್ಲ ಎಂಬುದು ಬಹುತೇಕ ಖಚಿತ. ಮೊಣಕಾಲಿನ ಮೂಳೆ ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಹ್ಯಾಝಲ್ವುಡ್ಗೆ ವೈದ್ಯರು ಇನ್ನೂ 2 ವಾರಗಳ ವಿಶ್ರಾಂತಿ ಸೂಚಿಸಿದ್ದಾರೆ.

ಎಲ್ಲವೂ ಸರಿಯಾದರೆ, ಹಾಗೆಯೇ ಸಂಪೂರ್ಣ ಫಿಟ್‌ನೆಸ್ ಹೊಂದಿದರೆ ನಾನು ಏಪ್ರಿಲ್ 14 ರ ವೇಳೆಗೆ ಆರ್ಸಿಬಿ ತಂಡವನ್ನು ಕೂಡಿಕೊಳ್ಳಲಿದ್ದೇನೆ ಎಂದು ಜೋಶ್ ಹ್ಯಾಝಲ್ವುಡ್ ತಿಳಿಸಿರುವುದಾಗಿ ಆಸ್ಟ್ರೇಲಿಯಾ ಮಾಧ್ಯಮ ದಿ ಏಜ್ ವರದಿ ಮಾಡಿದೆ. ಹೀಗಾಗಿ ಆರ್ಸಿಬಿ ತಂಡದ ಮೊದಲ 7 ಪಂದ್ಯಗಳಿಗೆ ಆಸೀಸ್ ವೇಗಿ ಅಲಭ್ಯರಾಗಲಿದ್ದಾರೆ.

ಮತ್ತೊಂದೆಡೆ ಜೋಶ್ ಹ್ಯಾಝಲ್ವುಡ್ ಅವರ ಫಿಟ್‌ನೆಸ್ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ವೈದ್ಯಕೀಯ ಸಿಬ್ಬಂದಿ ಕೂಡ ಸಮಾಲೋಚಿಸಿದ್ದಾರೆ. ಏಕೆಂದರೆ ಜೂನ್. 7 ರಿಂದ ಆಸ್ಟ್ರೇಲಿಯಾ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆಡಬೇಕಿದ್ದು, ಹೀಗಾಗಿ ತಂಡದ ಪ್ರಮುಖ ವೇಗಿಯಾಗಿರುವ ಹ್ಯಾಝಲ್ವುಡ್ ಅವರ ಫಿಟ್‌ನೆಸ್ ಅನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಅಂದರೆ ಸಂಪೂರ್ಣ ಫಿಟ್‌ನೆಸ್ ಹೊಂದಿಲ್ಲದಿದ್ದರೆ ಅವರಿಗೆ ಐಪಿಎಲ್ ಆಡಲು ಅನುಮತಿ ನೀಡುವುದಿಲ್ಲ.

ಇತ್ತ ಆರ್ಸಿಬಿ ಫ್ರಾಂಚೈಸಿಯು ದ್ವಿತಿಯಾರ್ಧದವರೆಗೂ ಜೋಶ್ ಹ್ಯಾಝಲ್ವುಡ್ ಅವರ ಆಗಮನಕ್ಕಾಗಿ ಕಾಯಲಿದೆಯಾ? ಅಥವಾ ಬದಲಿ ಆಟಗಾರನನ್ನು ಆಯ್ಕೆ ಮಾಡಲಿದೆಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ತಂಡದಲ್ಲಿರುವ ರೀಸ್ ಟೋಪ್ಲಿಗೆ ಇದು ಚೊಚ್ಚಲ ಐಪಿಎಲ್. ಒಂದು ವೇಳೆ ಅವರು ಸಂಪೂರ್ಣ ವಿಫಲರಾದರೆ ಮಾತ್ರ, ಹ್ಯಾಝಲ್ವುಡ್ ಅವರ ಬದಲಿ ಆಟಗಾರನ ಆಯ್ಕೆಗೆ ಆರ್ಸಿಬಿ ಮುಂದಾಗಬಹುದು.

ಒಟ್ಟಿನಲ್ಲಿ ಏಪ್ರಿಲ್ 2 ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯಕ್ಕೆ ಜೋಶ್ ಹ್ಯಾಝಲ್ವುಡ್ ಅಲಭ್ಯರಾಗಿರುವುದು ಖಚಿತವಾಗಿದೆ. ಇದಾಗ್ಯೂ ಅವರು ಈ ಬಾರಿ ಐಪಿಎಲ್ ಆಡಲಿದ್ದಾರಾ ಎಂಬುದಕ್ಕೆ ಉತ್ತರ ಸಿಗಲು ಏಪ್ರಿಲ್ 14 ರ ತನಕ ಕಾಯಲೇಬೇಕು.

RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ಮೈಕೆಲ್ ಬ್ರೇಸ್ವೆಲ್.
