IPL 2023: ಬೌಲಿಂಗ್ ಅಭ್ಯಾಸ ನಡೆಸಿದ ವಿರಾಟ್ ಕೊಹ್ಲಿ: SRH ವಿರುದ್ಧ ಬೌಲ್ ಮಾಡ್ತಾರಾ?

| Updated By: ಝಾಹಿರ್ ಯೂಸುಫ್

Updated on: May 17, 2023 | 11:22 PM

IPL 2023 Kannada: ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿ 13 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಒಟ್ಟು 152 ಎಸೆತಗಳನ್ನು ಎಸೆದಿರುವ ಕೊಹ್ಲಿ ನೀಡಿರುವುದು ಕೇವಲ 204 ರನ್​ಗಳು ಮಾತ್ರ.

1 / 7
IPL 2023: ಐಪಿಎಲ್​ನ 65ನೇ ಪಂದ್ಯದಲ್ಲಿ ಆರ್​ಸಿಬಿ ಹಾಗೂ ಎಸ್​ಆರ್​​ಹೆಚ್ ತಂಡಗಳು ಮುಖಾಮುಖಿಯಾಗಲಿದೆ. ಗುರುವಾರ ಹೈದರಾಬಾದ್​ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಆರ್​ಸಿಬಿ ಪಾಲಿಗೆ ನಿರ್ಣಾಯಕ.

2 / 7
ಪ್ಲೇಆಫ್ ರೇಸ್​ನಲ್ಲಿರುವ ಆರ್​ಸಿಬಿ ಈ ಪಂದ್ಯಕ್ಕಾಗಿ ಭರ್ಜರಿ ಅಭ್ಯಾಸ ನಡೆಸಿದೆ. ಇದೇ ವೇಳೆ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೂಡ ಬೌಲಿಂಗ್ ಅಭ್ಯಾಸ ನಡೆಸುತ್ತಿರುವುದು ಕಂಡು ಬಂದಿದೆ.

3 / 7
ಅತ್ತ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ಗೆಲುವಿನ ಬಳಿಕ, ನಾನು ಬೌಲಿಂಗ್ ಮಾಡಿದ್ರೆ ಆರ್​ಆರ್ ಕೇವಲ 40 ರನ್​ಗೆ ಆಲೌಟ್ ಆಗುತ್ತಿದ್ದರು ಎಂದು ವಿರಾಟ್ ಕೊಹ್ಲಿ ತಮಾಷೆಗೆ ಹೇಳಿದ್ದರು. ಆದರೀಗ ಎಸ್​​ಆರ್​ಹೆಚ್​ ವಿರುದ್ಧದ ಪಂದ್ಯಕ್ಕೂ ಮುನ್ನ ಕಿಂಗ್ ಕೊಹ್ಲಿ ಬೌಲಿಂಗ್ ಅಭ್ಯಾಸ ನಡೆಸಿರುವುದು ವಿಶೇಷ.

4 / 7
ಇದೀಗ ಬ್ಯಾಟಿಂಗ್ ಅಭ್ಯಾಸ ಮುಗಿದ ಬಳಿಕ ಪ್ಯಾಡ್​ನೊಂದಿಗೆ ಬೌಲಿಂಗ್ ಅಭ್ಯಾಸದಲ್ಲಿ ನಿರತರಾಗಿದ್ದ ವಿರಾಟ್ ಕೊಹ್ಲಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

5 / 7
ಅಂದಹಾಗೆ ವಿರಾಟ್ ಕೊಹ್ಲಿ ಐಪಿಎಲ್​ನಲ್ಲಿ 13 ಇನಿಂಗ್ಸ್​ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಒಟ್ಟು 152 ಎಸೆತಗಳನ್ನು ಎಸೆದಿರುವ ಕೊಹ್ಲಿ ನೀಡಿರುವುದು ಕೇವಲ 204 ರನ್​ಗಳು ಮಾತ್ರ. ಅಲ್ಲದೆ 4 ವಿಕೆಟ್​ಗಳನ್ನು ಕೂಡ ಕಬಳಿಸಿದ್ದಾರೆ.

6 / 7
ಆದರೆ 2012 ರ ಬಳಿಕ ವಿರಾಟ್ ಕೊಹ್ಲಿ ಬೌಲಿಂಗ್​ ಮಾಡುವ ದುಸ್ಸಾಹಸದಿಂದ ತುಸು ದೂರವೇ ಉಳಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಒಂದೇ ಓವರ್​ನಲ್ಲಿ 31 ರನ್ ನೀಡಿರುವುದು.

7 / 7
ಹೌದು, 2012 ರಲ್ಲಿ ಸಿಎಸ್​ಕೆ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 19ನೇ ಓವರ್ ಎಸೆದಿದ್ದರು. ಈ ವೇಳೆ ಸಿಎಸ್​ಕೆ ಆಟಗಾರ ಅಲ್ಬಿ ಮೋರ್ಕೆಲ್ 3 ಭರ್ಜರಿ ಸಿಕ್ಸ್ ಹಾಗೂ 2 ಫೋರ್​ನೊಂದಿಗೆ ಒಟ್ಟು 31 ರನ್​ ಚಚ್ಚಿದ್ದರು. ಇದಾದ ಬಳಿಕ ಕೇವಲ 2 ಸೀಸನ್​ಗಳಲ್ಲಿ​ (2015, 2016) ಮಾತ್ರ ಕೊಹ್ಲಿ ಬೌಲಿಂಗ್ ಮಾಡಿದ್ದರು. ಅಂದರೆ 2016 ರ ಬಳಿಕ ಕಿಂಗ್ ಕೊಹ್ಲಿ ಐಪಿಎಲ್​ನಲ್ಲಿ ಬೌಲಿಂಗ್ ಮಾಡಿಲ್ಲ.