- Kannada News Photo gallery Cricket photos Prithvi Shaw rumoured girlfriend Nidhhi Tapadia shared special photo in her Instagram post PBKS vs DC IPL 2023
Prithvi Shaw: ಪಂಜಾಬ್-ಡೆಲ್ಲಿ ಪಂದ್ಯದ ಮಧ್ಯೆ ಕಾಣಿಸಿಕೊಂಡ ಪೃಥ್ವಿ ಶಾ ಗರ್ಲ್ ಫ್ರೆಂಡ್: ಯಾರು ಈಕೆ ಗೊತ್ತೇ?
Nidhhi Tapadia: ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಪೃಥ್ವಿ ಅರ್ಧಶತಕ ಬಾರಿಸುತ್ತಿದ್ದಂತೆ ಅತ್ತ ಇವರ ಗರ್ಲ್ ಫ್ರೆಂಡ್ ಎಂದು ಹೇಳಲಾಗುವ ನಿಧಿ ತಪಾಡಿಯಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ಇಬ್ಬರೂ ಒಂದೇ ರೀತಿಯಲ್ಲಿ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ.
Updated on: May 18, 2023 | 11:56 AM

ಕಳಪೆ ಫಾರ್ಮ್ನಿಂದ ಕಂಗೆಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ಬುಧವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದರು. 38 ಎಸೆತಗಳಲ್ಲಿ 54 ರನ್ ಸಿಡಿಸಿ ಐಪಿಎಲ್ 2023 ರಲ್ಲಿ ಚೊಚ್ಚಲ ಅರ್ಧಶತಕ ಬಾರಿಸಿದರು.

ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಪೃಥ್ವಿ ಅರ್ಧಶತಕ ಬಾರಿಸುತ್ತಿದ್ದಂತೆ ಅತ್ತ ಇವರ ಗರ್ಲ್ ಫ್ರೆಂಡ್ ಎಂದು ಹೇಳಲಾಗುವ ನಿಧಿ ತಪಾಡಿಯಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ ಇಬ್ಬರೂ ಒಂದೇ ರೀತಿಯಲ್ಲಿ ಫೋಟೋಕ್ಕೆ ಪೋಸ್ ಕೊಟ್ಟಿದ್ದಾರೆ.

ಮಾಡೆಲ್ ಕಮ್ ನಟಿಯಾಗಿರುವ ನಿಧಿ ತಪಾಡಿಯಾ ಜೊತೆ ಪೃಥ್ವಿ ಶಾ ಹಲವು ತಿಂಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಈ ವರ್ಷಾರಂಭದಲ್ಲಿ ಈ ಜೋಡಿಯು ಜೊತೆಯಾಗಿ ಕಾಣಿಸಿಕೊಂಡಿದ್ದರು.

ಇಂಟರ್ನೆಟ್ನಲ್ಲಿ ಸದಾ ಆ್ಯಕ್ಟಿವ್ ಆಗಿರುವ ನಿಧಿ ತಪಾಡಿಯಾಗೆ ಇನ್ಸ್ಟಾಗ್ರಾಮ್ನಲ್ಲಿ 1.11 ಲಕ್ಷಕ್ಕೂ ಹೆಚ್ಚು ಅನುಯಾಯಿಗಳಿದ್ದಾರೆ. ಬುಧವಾರ ಧರ್ಮಶಾಲಾದ ನಡೆದ ಪಂದ್ಯ ವೀಕ್ಷಿಸಲು ಇವರು ಕೂಡ ಬಂದಿದ್ದರು.

ನಿಧಿ ತಪಾಡಿಯಾ ಅವರು ಅನೇಕ ಜಾಹೀರಾತು ಪ್ರಚಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಹೆಸರು ಮಾಡಿದ್ದ ಟಿವಿ ಶೋ CID ಯಲ್ಲಿ ಕೂಡ ನಟಿಸಿದ್ದರು.

ಮೂಲತಃ ಮಹಾರಾಷ್ಟ್ರದ ನಾಸಿಕ್ ನವರಾಗಿರುವ ನಿಧಿ ಇಂಟರ್ನೆಟ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ.

ಈ ವರ್ಷದ ಆರಂಭದಲ್ಲಿ ಪೃಥ್ವಿ ಶಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪಾರ್ಟಿಯ ಫೋಟೋಗಳನ್ನು ಹಂಚಿಕೊಂಡಿದ್ದರು. ಇದರಲ್ಲಿ ನಿಧಿ ತಪಾಡಿಯಾ ಅವರೊಂದಿಗೆ ಪೋಸ್ ಕೂಡ ನೀಡಿದ್ದರು.
