IPL 2023: ನವೀನ್ ಉಲ್​ ಹಕ್​ಗೆ ಬಿಸಿ ಮುಟ್ಟಿಸಿದ ವಿರಾಟ್ ಕೊಹ್ಲಿ ಫ್ಯಾನ್ಸ್

IPL 2023 Kannada: ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರ ನವೀನ್ ಉಲ್ ಹಕ್ ಹಾಗೂ ಗೌತಮ್ ಗಂಭೀರ್ ವಿರಾಟ್ ಕೊಹ್ಲಿ ಜೊತೆ ಕಿರಿಕ್ ಮಾಡಿಕೊಂಡಿದ್ದರು.

| Updated By: ಝಾಹಿರ್ ಯೂಸುಫ್

Updated on: May 17, 2023 | 9:21 PM

IPL 2023: ಮೈದಾನದಲ್ಲಿ ವಿರಾಟ್ ಕೊಹ್ಲಿ ಇದ್ದರೂ, ಇಲ್ಲದಿದ್ದರೂ...ಕಿಂಗ್ ಕೊಹ್ಲಿ ಅಭಿಮಾನಿಗಳಂತು ಸ್ಟೇಡಿಯಂನಲ್ಲಿರುತ್ತಾರೆ. ಇದಕ್ಕೆ ಸಾಕ್ಷಿ ಲಕ್ನೋನದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್​ ಹಾಗೂ ಮುಂಬೈ ಇಂಡಿಯನ್ಸ್ ನಡುವಣ ಪಂದ್ಯ.

1 / 10
ಆದರೆ ಹೀಗೆ ಸ್ಟೇಡಿಯಂನಲ್ಲಿರುವ ಕೊಹ್ಲಿಯ ಅಭಿಮಾನಿಗಳೇ ಇದೀಗ ಲಕ್ನೋ ಸೂಪರ್ ಜೈಂಟ್ಸ್ ತಂಡದ ಚಿಂತೆಯನ್ನು ಹೆಚ್ಚಿಸಿದೆ. ಇದಕ್ಕೆ ಕಾರಣ ಆರ್​ಸಿಬಿ ಹಾಗೂ ಲಕ್ನೋ ನಡುವೆ ನಡೆದ ಜಿದ್ದಾಜಿದ್ದಿನ ಪಂದ್ಯ.

2 / 10
ಏಪ್ರಿಲ್ 10 ರಂದು ಬೆಂಗಳೂರಿನಲ್ಲಿ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ 1 ವಿಕೆಟ್​ನಿಂದ ರೋಚಕ ಜಯ ಸಾಧಿಸಿದ್ದ ಲಕ್ನೋ ಸೂಪರ್ ಜೈಂಟ್ಸ್ ಮೈಮರೆತು ಸಂಭ್ರಮಿಸಿದ್ದರು. ಅದರಲ್ಲೂ ತಂಡದ ಮೆಂಟರ್ ಗೌತಮ್ ಗಂಭೀರ್ ಆರ್​ಸಿಬಿ ಅಭಿಮಾನಿಗಳಿಗೆ ಬಾಯಿ ಮುಚ್ಚಿಕೊಂಡಿರುವಂತೆ ಸೂಚಿಸಿ ಅತಿರೇಕದ ವರ್ತನೆ ತೋರಿದ್ದರು.

3 / 10
ಆದರೆ ಮೇ 1 ರಂದು ನಡೆದ ಲಕ್ನೋ ವಿರುದ್ಧ ಪಂದ್ಯದಲ್ಲಿ 18 ರನ್​ಗಳಿಂದ ಜಯ ಸಾಧಿಸಿ ಆರ್​ಸಿಬಿ ಸೇಡು ತೀರಿಸಿಕೊಂಡಿತ್ತು. ಅದರಲ್ಲೂ ಪಂದ್ಯದ ಪ್ರತಿ ಕ್ಷಣದಲ್ಲೂ ಲಕ್ನೋ ಆಟಗಾರರಿಗೆ ಮುಟ್ಟಿ ನೋಡಿಕೊಳ್ಳುವಂತೆ ಕಿಂಗ್ ಕೊಹ್ಲಿ ತಿರುಗೇಟು ನೀಡಿದ್ದರು.

4 / 10
ಇದರ ನಡುವೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಆಟಗಾರ ನವೀನ್ ಉಲ್ ಹಕ್ ಹಾಗೂ ಗೌತಮ್ ಗಂಭೀರ್ ವಿರಾಟ್ ಕೊಹ್ಲಿ ಜೊತೆ ಕಿರಿಕ್ ಮಾಡಿಕೊಂಡಿದ್ದರು. ಈ ಅಹಿತಕರ ಘಟನೆಗೆ ಬಿಸಿಸಿಐ ಕೊಹ್ಲಿ ಹಾಗೂ ಗಂಭೀರ್ ಪಂದ್ಯ ಶುಲ್ಕದ ಶೇ.100 ರಷ್ಟು ದಂಡ ವಿಧಿಸಿದ್ದರು. ಅಲ್ಲದೆ ನವೀನ್​ಗೆ ಶೇ.50 ರಷ್ಟು ದಂಡ ವಿಧಿಸಲಾಗಿತ್ತು.

5 / 10
ಇದರೊಂದಿಗೆ ಮುಗಿದಿದ್ದ ಜಗಳವು ಆ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಮುಂದುವರೆಯಿತು. ಒಂದೆಡೆ ಕಿಂಗ್ ಕೊಹ್ಲಿ ಲಕ್ನೋ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಗುಜರಾತ್ ಟೈಟಾನ್ಸ್ ಆಟಗಾರರನ್ನು ಹೊಗಳಿದ್ದರು. ಇದರಿಂದ ಕೆರಳಿದ್ದ ಗಂಭೀರ್ ಹಾಗೂ ನವೀನ್ ಕೂಡ ಮುಂಬೈ ವಿರುದ್ಧ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಔಟ್ ಅನ್ನು ಸಂಭ್ರಮಿಸಿದ್ದರು.

6 / 10
ಅತ್ತ ಕ್ರಿಕೆಟಿಗರು ಸೋಷಿಯಲ್ ಮೀಡಿಯಾದಲ್ಲಿ ಕಿಚಾಯಿಸುವಿಕೆ ಮುಂದುವರೆಸಿದರೆ, ಇತ್ತ ಅಭಿಮಾನಿಗಳು ಸ್ಟೇಡಿಯಂನಿಂದಲೇ ಶುರು ಹಚ್ಚಿಕೊಂಡಿದ್ದರು. ಮೊದಲು ಸಿಎಸ್​ಕೆ ವಿರುದ್ಧದ ಪಂದ್ಯದ ವೇಳೆ ಗೌತಮ್ ಗಂಭೀರ್ ಅವರನ್ನು ಕಾಣುತ್ತಿದ್ದಂತೆ ಅಭಿಮಾನಿಗಳು ವಿರಾಟ್ ಕೊಹ್ಲಿಯ ಹೆಸರನ್ನು ಕೂಗುವ ಮೂಲಕ ಕೆಣಕಿದ್ದರು.

7 / 10
ಇದೀಗ ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದ ವೇಳೆ ಲಕ್ನೋ ತಂಡದ ಆಟಗಾರ ನವೀನ್ ಉಲ್ ಹಕ್​ಗೆ ಕಿಂಗ್ ಕೊಹ್ಲಿ ಅಭಿಮಾನಿಗಳು ಬಿಸಿ ಮುಟ್ಟಿಸಿದ್ದಾರೆ. ಬೌಂಡರಿ ಲೈನ್​ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ನವೀನ್ ಅವರನ್ನು ಕಿಚಾಯಿಸಲು ಕೊಹ್ಲಿ..ಕೊಹ್ಲಿ ಎಂದು ಕೂಗಿದ್ದಾರೆ.

8 / 10
ಅತ್ತ ವಿರಾಟ್ ಕೊಹ್ಲಿಯ ಅಭಿಮಾನಿಗಳ ಘೋಷಣೆ ಮೊಳಗುತ್ತಿದ್ದಂತೆ ಇತ್ತ ನವೀನ್ ಉಲ್ ಹಕ್ ತಬ್ಬಿಬ್ಬಾಗಿದ್ದಾರೆ. ಅಲ್ಲದೆ ಇನ್ನೂ ಜೋರಾಗಿ ಕೂಗುವಂತೆ ಅಭಿಮಾನಿಗಳಿಗೆ ಸೂಚಿಸಿದರು. ಇದನ್ನೇ ಬಳಸಿಕೊಂಡ ಕಿಂಗ್ ಕೊಹ್ಲಿ ಅಭಿಮಾನಿಗಳು ಪಂದ್ಯದುದಕ್ಕೂ ನವೀನ್ ಅವರನ್ನು ಕೆಣಕಿದ್ದಾರೆ.

9 / 10
ಒಟ್ಟಿನಲ್ಲಿ ವಿರಾಟ್ ಕೊಹ್ಲಿ ಬಿಟ್ಟರೂ ಇದೀಗ ಅಭಿಮಾನಿಗಳು ಬಿಡುತ್ತಿಲ್ಲ ಎಂಬ ಪರಿಸ್ಥಿತಿಯಲ್ಲಿದ್ದಾರೆ ನವೀನ್ ಉಲ್ ಹಕ್.

10 / 10
Follow us
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್

Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?

ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು

ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ

ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!

ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು

ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು