- Kannada News Photo gallery Cricket photos Kannada News | IPL 2023: RCB's Virat Kohli bowls in the nets
IPL 2023: ಬೌಲಿಂಗ್ ಅಭ್ಯಾಸ ನಡೆಸಿದ ವಿರಾಟ್ ಕೊಹ್ಲಿ: SRH ವಿರುದ್ಧ ಬೌಲ್ ಮಾಡ್ತಾರಾ?
IPL 2023 Kannada: ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ 13 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಒಟ್ಟು 152 ಎಸೆತಗಳನ್ನು ಎಸೆದಿರುವ ಕೊಹ್ಲಿ ನೀಡಿರುವುದು ಕೇವಲ 204 ರನ್ಗಳು ಮಾತ್ರ.
Updated on: May 17, 2023 | 11:22 PM

IPL 2023: ಐಪಿಎಲ್ನ 65ನೇ ಪಂದ್ಯದಲ್ಲಿ ಆರ್ಸಿಬಿ ಹಾಗೂ ಎಸ್ಆರ್ಹೆಚ್ ತಂಡಗಳು ಮುಖಾಮುಖಿಯಾಗಲಿದೆ. ಗುರುವಾರ ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಆರ್ಸಿಬಿ ಪಾಲಿಗೆ ನಿರ್ಣಾಯಕ.

ಪ್ಲೇಆಫ್ ರೇಸ್ನಲ್ಲಿರುವ ಆರ್ಸಿಬಿ ಈ ಪಂದ್ಯಕ್ಕಾಗಿ ಭರ್ಜರಿ ಅಭ್ಯಾಸ ನಡೆಸಿದೆ. ಇದೇ ವೇಳೆ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಕೂಡ ಬೌಲಿಂಗ್ ಅಭ್ಯಾಸ ನಡೆಸುತ್ತಿರುವುದು ಕಂಡು ಬಂದಿದೆ.

ಅತ್ತ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ಗೆಲುವಿನ ಬಳಿಕ, ನಾನು ಬೌಲಿಂಗ್ ಮಾಡಿದ್ರೆ ಆರ್ಆರ್ ಕೇವಲ 40 ರನ್ಗೆ ಆಲೌಟ್ ಆಗುತ್ತಿದ್ದರು ಎಂದು ವಿರಾಟ್ ಕೊಹ್ಲಿ ತಮಾಷೆಗೆ ಹೇಳಿದ್ದರು. ಆದರೀಗ ಎಸ್ಆರ್ಹೆಚ್ ವಿರುದ್ಧದ ಪಂದ್ಯಕ್ಕೂ ಮುನ್ನ ಕಿಂಗ್ ಕೊಹ್ಲಿ ಬೌಲಿಂಗ್ ಅಭ್ಯಾಸ ನಡೆಸಿರುವುದು ವಿಶೇಷ.

ಇದೀಗ ಬ್ಯಾಟಿಂಗ್ ಅಭ್ಯಾಸ ಮುಗಿದ ಬಳಿಕ ಪ್ಯಾಡ್ನೊಂದಿಗೆ ಬೌಲಿಂಗ್ ಅಭ್ಯಾಸದಲ್ಲಿ ನಿರತರಾಗಿದ್ದ ವಿರಾಟ್ ಕೊಹ್ಲಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಂದಹಾಗೆ ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ 13 ಇನಿಂಗ್ಸ್ಗಳಲ್ಲಿ ಬೌಲಿಂಗ್ ಮಾಡಿದ್ದಾರೆ. ಒಟ್ಟು 152 ಎಸೆತಗಳನ್ನು ಎಸೆದಿರುವ ಕೊಹ್ಲಿ ನೀಡಿರುವುದು ಕೇವಲ 204 ರನ್ಗಳು ಮಾತ್ರ. ಅಲ್ಲದೆ 4 ವಿಕೆಟ್ಗಳನ್ನು ಕೂಡ ಕಬಳಿಸಿದ್ದಾರೆ.

ಆದರೆ 2012 ರ ಬಳಿಕ ವಿರಾಟ್ ಕೊಹ್ಲಿ ಬೌಲಿಂಗ್ ಮಾಡುವ ದುಸ್ಸಾಹಸದಿಂದ ತುಸು ದೂರವೇ ಉಳಿದಿದ್ದಾರೆ. ಇದಕ್ಕೆ ಮುಖ್ಯ ಕಾರಣ ಒಂದೇ ಓವರ್ನಲ್ಲಿ 31 ರನ್ ನೀಡಿರುವುದು.

ಹೌದು, 2012 ರಲ್ಲಿ ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 19ನೇ ಓವರ್ ಎಸೆದಿದ್ದರು. ಈ ವೇಳೆ ಸಿಎಸ್ಕೆ ಆಟಗಾರ ಅಲ್ಬಿ ಮೋರ್ಕೆಲ್ 3 ಭರ್ಜರಿ ಸಿಕ್ಸ್ ಹಾಗೂ 2 ಫೋರ್ನೊಂದಿಗೆ ಒಟ್ಟು 31 ರನ್ ಚಚ್ಚಿದ್ದರು. ಇದಾದ ಬಳಿಕ ಕೇವಲ 2 ಸೀಸನ್ಗಳಲ್ಲಿ (2015, 2016) ಮಾತ್ರ ಕೊಹ್ಲಿ ಬೌಲಿಂಗ್ ಮಾಡಿದ್ದರು. ಅಂದರೆ 2016 ರ ಬಳಿಕ ಕಿಂಗ್ ಕೊಹ್ಲಿ ಐಪಿಎಲ್ನಲ್ಲಿ ಬೌಲಿಂಗ್ ಮಾಡಿಲ್ಲ.



















