Updated on: Apr 01, 2023 | 10:23 PM
IPL 2023 Records: ಮೊಹಾಲಿಯಲ್ಲಿ ನಡೆದ ಐಪಿಎಲ್ನ 2ನೇ ಪಂದ್ಯದಲ್ಲಿ ಕೆಕೆಆರ್ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಪರ ನಾಯಕ ಶಿಖರ್ ಧವನ್ 40 ರನ್ ಬಾರಿಸಿ ಮಿಂಚಿದ್ದರು. ಅದರಲ್ಲೂ 2ನೇ ವಿಕೆಟ್ಗೆ ಭಾನುಕಾ ರಾಜಪಕ್ಸೆ (50) ಜೊತೆಗೂಡಿ 86 ರನ್ಗಳ ಜೊತೆಯಾಟವಾಡಿದರು.
ವಿಶೇಷ ಎಂದರೆ ಈ 86 ರನ್ಗಳ ಜೊತೆಯಾಟದೊಂದಿಗೆ ಐಪಿಎಲ್ನಲ್ಲಿ ಅತ್ಯಧಿಕ ಬಾರಿ ಅರ್ಧಶತಕಗಳ ಜೊತೆಯಾಟವಾಡಿದ ಆಟಗಾರ ಎಂಬ ದಾಖಲೆಯನ್ನು ಶಿಖರ್ ಧವನ್ ಸರಿಗಟ್ಟಿದ್ದಾರೆ.
ಈ ವಿಶೇಷ ದಾಖಲೆ ವಿರಾಟ್ ಕೊಹ್ಲಿಯ ಹೆಸರಿನಲ್ಲಿದೆ. ಕಿಂಗ್ ಕೊಹ್ಲಿ ಐಪಿಎಲ್ನಲ್ಲಿ 94 ಬಾರಿ 50+ ರನ್ಗಳ ಜೊತೆಯಾಟವಾಡಿದ್ದರು. ಇದೀಗ ಶಿಖರ್ ಧವನ್ ಈ ದಾಖಲೆಯನ್ನು ಸರಿಗಟ್ಟಿರುವುದು ವಿಶೇಷ.
ಧವನ್ ಕೂಡ ಐಪಿಎಲ್ನಲ್ಲಿ 94 ಬಾರಿ ಅರ್ಧಶತಕಗಳ ಜೊತೆಯವಾಡಿದ್ದಾರೆ. ಈ ಮೂಲಕ ಐಪಿಎಲ್ ಪಾರ್ಟ್ನರ್ಶಿಪ್ ರೆಕಾರ್ಡ್ನಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಅಗ್ರಸ್ಥಾನ ಅಲಂಕರಿಸಿದ್ದಾರೆ. ಐಪಿಎಲ್ನಲ್ಲಿ ಅತೀ ಹೆಚ್ಚು ಬಾರಿ ಅರ್ಧಶತಕಗಳ ಜೊತೆಯಾಟವಾಡಿದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...
ವಿರಾಟ್ ಕೊಹ್ಲಿ: ಐಪಿಎಲ್ ಆರಂಭದಿಂದಲೂ ಕೇವಲ ಆರ್ಸಿಬಿ ಪರ ಮಾತ್ರ ಕಣಕ್ಕಿಳಿದಿರುವ ಕಿಂಗ್ ಕೊಹ್ಲಿ ಒಟ್ಟು 94 ಬಾರಿ ಅರ್ಧಶತಕಗಳ ಜೊತೆಯವಾಡಿದ್ದಾರೆ.
ಶಿಖರ್ ಧವನ್: ಪಂಜಾಬ್ ಕಿಂಗ್ಸ್ ತಂಡದ ನಾಯಕ ಶಿಖರ್ ಧವನ್ ಕೂಡ 94 ಬಾರಿ ಅರ್ಧಶತಕಗಳ ಜೊತೆಯಾವಾಡಿ ಇದೀಗ ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ್ದಾರೆ.
ಸುರೇಶ್ ರೈನಾ: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಲಯನ್ಸ್ ಪರ ಆಡಿದ್ದ ಸುರೇಶ್ ರೈನಾ ಒಟ್ಟು 83 ಬಾರಿ ಅರ್ಧಶತಕಗಳ ಜೊತೆಯಾಟವಾಡಿದ್ದರು.
ಡೇವಿಡ್ ವಾರ್ನರ್: ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಪರ ಆಡಿರುವ ಡೇವಿಡ್ ವಾರ್ನರ್ ಒಟ್ಟು 82 ಬಾರಿ ಅರ್ಧಶತಕಗಳ ಜೊತೆಯಾಟವಾಡಿದ್ದಾರೆ.
ರೋಹಿತ್ ಶರ್ಮಾ: ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಐಪಿಎಲ್ನಲ್ಲಿ ಒಟ್ಟು 76 ಬಾರಿ ಹಾಫ್ ಸೆಂಚುರಿಯ ಜೊತೆಯಾಟವಾಡಿದ್ದಾರೆ.