- Kannada News Photo gallery Cricket photos IPL 2023, DC vs LSG: Delhi Capitals hang Rishabh Pant's jersey in dugout
IPL 2023, DC vs LSG: ಡೆಲ್ಲಿ ಕ್ಯಾಪಿಟಲ್ಸ್ ಡಗೌಟ್ನಲ್ಲಿ ರಿಷಭ್ ಪಂತ್ ಜೆರ್ಸಿ: ಭಾವುಕರಾದ ಅಭಿಮಾನಿಗಳು
IPL 2023, DC vs LSG: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಡೇವಿಡ್ ವಾರ್ನರ್ ಪದಾರ್ಪಣೆ ಮಾಡಿದ್ದಾರೆ.
Updated on: Apr 01, 2023 | 11:30 PM

IPL 2023, DC vs LSG: ಐಪಿಎಲ್ 2023ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಭಿಯಾನ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಕಣಕ್ಕಿಳಿದಿದೆ. ಆದರೆ ಈ ಬಾರಿ ತಂಡದ ನಾಯಕನಾಗಿ ರಿಷಭ್ ಪಂತ್ ಕಾಣಿಸಿಕೊಂಡಿಲ್ಲ ಎಂಬುದಷ್ಟೇ ವ್ಯತ್ಯಾಸ.

ಹೌದು, ಲಕ್ನೋನ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಡೇವಿಡ್ ವಾರ್ನರ್ ಪದಾರ್ಪಣೆ ಮಾಡಿದ್ದಾರೆ. ಇದಾಗ್ಯೂ ತಂಡದ ಮಾಜಿ ನಾಯಕ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ವಿಶೇಷವಾಗಿ ಗೌರವಿಸಿರುವುದು ವಿಶೇಷ.

ಕಳೆದ ವರ್ಷ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ರಿಷಭ್ ಪಂತ್ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಅವರು ಈ ಸಲ ಐಪಿಎಲ್ ಆಡುತ್ತಿಲ್ಲ. ಇದಾಗ್ಯೂ ರಿಷಭ್ ಪಂತ್ ಅವರ ಜೆರ್ಸಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಅನಾವರಣಗೊಳಿಸಿದೆ.

ಅಷ್ಟೇ ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಡಗೌಟ್ನಲ್ಲಿ ನೇತು ಹಾಕುವ ಮೂಲಕ ರಿಷಭ್ ಪಂತ್ ಈಗಲೂ ತಂಡದ ಭಾಗವಾಗಿದ್ದಾರೆ ಎಂದು ಸಾರಿ ಹೇಳಿದ್ದಾರೆ. ಇತ್ತ ಕಷ್ಟದ ಸಮಯದಲ್ಲಿ ಯುವ ಆಟಗಾರನಿಗೆ ಬೆಂಬಲಕ್ಕೆ ನಿಂತಿರುವ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ನಡೆಯಿಂದ ಅಭಿಮಾನಿಗಳು ಕೂಡ ಭಾವುಕರಾಗಿದ್ದಾರೆ.

ಅಷ್ಟೇ ಅಲ್ಲದೆ ಕೆಲ ಅಭಿಮಾನಿಗಳು ಕೂಡ ರಿಷಭ್ ಪಂತ್ ಅವರ ಫೋಟೋದೊಂದಿಗೆ ಸ್ಟೇಡಿಯಂನಲ್ಲಿ ಕಾಣಿಸಿಕೊಂಡರು. ಒಟ್ಟಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ನಡೆಗೆ ಇದೀಗ ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
