- Kannada News Photo gallery Cricket photos Kannada News | IPL 2023 SRH vs RCB: Heinrich Klaasen Ex RCB Player
IPL 2023: RCB ವಿರುದ್ಧ ಸ್ಪೋಟಕ ಸೆಂಚುರಿ ಸಿಡಿಸಿ ಅಬ್ಬರಿಸಿದ ಮಾಜಿ ಆರ್ಸಿಬಿ ಆಟಗಾರ..!
IPL 2023 Kannada: ಕ್ಲಾಸೆನ್ ಬ್ಯಾಟ್ನಿಂದ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು. ಇದು ಈ ಬಾರಿಯ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಮೂಡಿಬಂದ ಅತೀ ವೇಗದ ಅರ್ಧಶತಕವಾಗಿದೆ.
Updated on:May 18, 2023 | 9:10 PM

IPL 2023 SRH vs RCB: ಹೈದರಾಬಾದ್ನಲ್ಲಿ ನಡೆದ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಎಸ್ಆರ್ಹೆಚ್ ತಂಡದ ಹೆನ್ರಿಕ್ ಕ್ಲಾಸೆನ್ ಸ್ಪೋಟಕ ಸೆಂಚುರಿ ಸಿಡಿಸಿ ಮಿಂಚಿದ್ದಾರೆ.

ಪವರ್ಪ್ಲೇನಲ್ಲಿ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ SRH ಪರ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹೆನ್ರಿಕ್ ಕ್ಲಾಸೆನ್ ಆರಂಭದಿಂದಲೇ ಅಬ್ಬರಿಸಿದರು. ಅದರಲ್ಲೂ ಸ್ಪಿನ್ ಬೌಲರ್ಗಳನ್ನು ಟಾರ್ಗೆಟ್ ಮಾಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

ಪರಿಣಾಮ ಕ್ಲಾಸೆನ್ ಬ್ಯಾಟ್ನಿಂದ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಮೂಡಿಬಂತು. ಇದು ಈ ಬಾರಿಯ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಮೂಡಿಬಂದ ಅತೀ ವೇಗದ ಅರ್ಧಶತಕವಾಗಿದೆ.

ಇನ್ನು ಅರ್ಧಶತಕದ ಬಳಿಕ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ ಕ್ಲಾಸೆನ್ 11ನೇ ಓವರ್ ವೇಳೆಗೆ ತಂಡದ ಮೊತ್ತವನ್ನು 100ರ ಗಡಿದಾಟಿಸಿದರು.

ಅಲ್ಲದೆ ಕೇವಲ 49 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್ನೊಂದಿಗೆ ಸಿಡಿಲಬ್ಬರದ ಶತಕ ಸಿಡಿಸಿ ಅಬ್ಬರಿಸಿದರು. ವಿಶೇಷ ಎಂದರೆ 98 ರನ್ ಗಳಿಸಿದ್ದ ವೇಳೆ ಕ್ಲಾಸೆನ್ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ತಮ್ಮ ಚೊಚ್ಚಲ ಐಪಿಎಲ್ ಶತಕ ಪೂರೈಸಿದ್ದರು.

ಇನ್ನು 51 ಎಸೆತಗಳಲ್ಲಿ 104 ರನ್ಗಳಿಸಿದ್ದ ವೇಳೆ ಹರ್ಷಲ್ ಪಟೇಲ್ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಹೆನ್ರಿಕ್ ಕ್ಲಾಸೆನ್ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು.

ಅಂದಹಾಗೆ ಎಸ್ಆರ್ಹೆಚ್ ತಂಡದ ಪರ ಆಡುವ ಮುನ್ನ ಹೆನ್ರಿಕ್ ಕ್ಲಾಸೆನ್ ಐಪಿಎಲ್ನಲ್ಲಿ ಎರಡು ತಂಡಗಳ ಭಾಗವಾಗಿದ್ದಾರೆ. ಅದರಲ್ಲೂ ಆರ್ಸಿಬಿ ಪರ ಬ್ಯಾಟ್ ಬೀಸಿದ್ದರು ಎಂಬುದು ವಿಶೇಷ.

2018 ರ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಕ್ಲಾಸೆನ್ 4 ಪಂದ್ಯವಾಡಿದ್ದರು. ಈ ವೇಳೆ ಕಲೆಹಾಕಿದ್ದು ಕೇವಲ 57 ರನ್ ಮಾತ್ರ. ಮರುವರ್ಷ ರಾಜಸ್ಥಾನ್ ರಾಯಲ್ಸ್ ಸೌತ್ ಆಫ್ರಿಕಾ ಆಟಗಾರನನ್ನು ಬಿಡುಗಡೆ ಮಾಡಿತ್ತು.

2019 ರಲ್ಲಿ ಆರ್ಸಿಬಿ ತಂಡವು ಕ್ಲಾಸೆನ್ ಅವರನ್ನು ಖರೀದಿಸುವ ಮೂಲಕ ಗಮನ ಸೆಳೆಯಿತು. ಅಲ್ಲದೆ ಆರ್ಸಿಬಿ ಪರ 3 ಪಂದ್ಯವಾಡಿದ್ದರೂ ಒಂದೇ ಒಂದು ಉತ್ತಮ ಇನಿಂಗ್ಸ್ ಆಡಿರಲಿಲ್ಲ. ಸಿಕ್ಕ ಅವಕಾಶದಲ್ಲಿ ಕಲೆಹಾಕಿದ್ದು ಕೇವಲ 9 ರನ್ ಮಾತ್ರ. ಹೀಗಾಗಿ ಆರ್ಸಿಬಿ ಕೂಡ ತಂಡದಿಂದ ಕೈಬಿಟ್ಟಿತು.

ಇದಾಗ್ಯೂ ಸ್ಪೋಟಕ ಬ್ಯಾಟಿಂಗ್ ಮೂಲಕ ಸೌತ್ ಆಫ್ರಿಕಾ ತಂಡದಲ್ಲಿ ಮಿಂಚಿದ್ದ ಹೆನ್ರಿಕ್ ಕ್ಲಾಸೆನ್ ಅವರನ್ನು ಈ ಬಾರಿ SRH ಫ್ರಾಂಚೈಸಿ ಬರೋಬ್ಬರಿ 5.25 ಕೋಟಿ ರೂ.ಗೆ ಖರೀದಿಸಿತ್ತು. ಅದರಂತೆ ಈ ಬಾರಿ ಎಸ್ಆರ್ಹೆಚ್ ಪರ 11 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಹೆನ್ರಿಕ್ ಕ್ಲಾಸೆನ್ 360+ ರನ್ ಕಲೆಹಾಕಿದ್ದಾರೆ.
Published On - 9:06 pm, Thu, 18 May 23



















