IPL 2023: ದಿಗ್ಗಜರ ಸಮಾಗಮ: ಸಚಿನ್ ತೆಂಡೂಲ್ಕರ್​ ಭೇಟಿಯಾದ ವಿರಾಟ್ ಕೊಹ್ಲಿ

Edited By:

Updated on: May 08, 2023 | 11:47 PM

IPL 2023 Kannada: ಮುಂಬೈ ಇಂಡಿಯನ್ಸ್ ಹಾಗೂ ಆರ್​ಸಿಬಿ ನಡುವಣ ಪಂದ್ಯವು ಮಂಗಳವಾರ ನಡೆಯಲಿದ್ದು, ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡವು ಪಾಯಿಂಟ್ಸ್ ಟೇಬಲ್​ನಲ್ಲಿ ಮೇಲೇರಲಿದೆ.

1 / 6
IPL 2023: ಮಂಗಳವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ನಡುವಣ ಪಂದ್ಯಕ್ಕೂ ಮುನ್ನ ಕ್ರಿಕೆಟ್ ದಿಗ್ಗಜರ ಸಮಾಗಮವಾಗಿದೆ. ಅದರಲ್ಲಿ ಒಬ್ಬರು ಕ್ರಿಕೆಟ್ ಗಾಡ್ ಆದರೆ, ಮತ್ತೊಬ್ಬರು ಕ್ರಿಕೆಟ್ ಕಿಂಗ್.

IPL 2023: ಮಂಗಳವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ಹಾಗೂ ಆರ್ಸಿಬಿ ನಡುವಣ ಪಂದ್ಯಕ್ಕೂ ಮುನ್ನ ಕ್ರಿಕೆಟ್ ದಿಗ್ಗಜರ ಸಮಾಗಮವಾಗಿದೆ. ಅದರಲ್ಲಿ ಒಬ್ಬರು ಕ್ರಿಕೆಟ್ ಗಾಡ್ ಆದರೆ, ಮತ್ತೊಬ್ಬರು ಕ್ರಿಕೆಟ್ ಕಿಂಗ್.

2 / 6

ಹೌದು, ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಅಭ್ಯಾಸದ ವೇಳೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರನ್ನು ಕಿಂಗ್ ಕೊಹ್ಲಿ ಭೇಟಿಯಾಗಿದ್ದಾರೆ. ಈ ಅಪೂರ್ವ ಸಮಾಗಮದ ಫೋಟೋಗಳನ್ನು ಆರ್ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

3 / 6

ವಿಶೇಷ ಎಂದರೆ ಈ ಇಬ್ಬರು ಭಾರತೀಯ ದಂತಕಥೆಗಳು ಒಟ್ಟು 59,679 ಅಂತರಾಷ್ಟ್ರೀಯ ರನ್ ಮತ್ತು 175 ಶತಕಗಳನ್ನು ಬಾರಿಸಿದ್ದಾರೆ. ಅದರಲ್ಲೂ ಸಚಿನ್ ತೆಂಡೂಲ್ಕರ್ ಬಳಿಕ ಅತ್ಯಧಿಕ ಅಂತಾರಾಷ್ಟ್ರೀಯ ಶತಕ ಸಿಡಿಸಿದ ದಾಖಲೆ ಕಿಂಗ್ ಕೊಹ್ಲಿಯ ಹೆಸರಿನಲ್ಲಿದೆ.

4 / 6

ಇನ್ನು ಮಾಸ್ಟರ್ ಬ್ಲಾಸ್ಟರ್ ಅವರ ಹಲವು ದಾಖಲೆಯನ್ನು ಮುರಿಯುವ ಮೂಲಕ ವಿರಾಟ್ ಕೊಹ್ಲಿ ಅಬ್ಬರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಇದೀಗ ಸಚಿನ್ ಅವರ ನೂರು ಶತಕದ ದಾಖಲೆಯತ್ತ ದಾಪುಗಾಲಿಟ್ಟಿದ್ದಾರೆ.

5 / 6

ವಿಶೇಷ ಎಂದರೆ ಈ ಹಿಂದೆ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿಯಬಲ್ಲರು ಎಂದು ಭವಿಷ್ಯ ನುಡಿದಿದ್ದರು. ಇದೀಗ ಕಿಂಗ್ ಕೊಹ್ಲಿ ಕೂಡ ಅದೇ ಹಾದಿಯಲ್ಲಿ ಸಾಗಿರುವುದು ವಿಶೇಷ.

6 / 6

ಮುಂಬೈ ಇಂಡಿಯನ್ಸ್ ಹಾಗೂ ಆರ್​ಸಿಬಿ ನಡುವಣ ಪಂದ್ಯವು ಮಂಗಳವಾರ ನಡೆಯಲಿದ್ದು, ಈ ಪಂದ್ಯದಲ್ಲಿ ಜಯ ಸಾಧಿಸುವ ತಂಡವು ಪಾಯಿಂಟ್ಸ್ ಟೇಬಲ್​ನಲ್ಲಿ ಮೇಲೇರಲಿದೆ. ಹೀಗಾಗಿ ಉಭಯ ತಂಡಗಳಿಗೆ ಈ ಪಂದ್ಯವು ಮಹತ್ವದ್ದಾಗಿದೆ. ಅದರಂತೆ ಈ ಪಂದ್ಯದಲ್ಲಿ ಕಿಂಗ್ ಕೊಹ್ಲಿಯ ಆರ್​ಸಿಬಿ ಗೆಲ್ಲಲಿದೆಯಾ ಅಥವಾ ಸಚಿನ್ ತೆಂಡೂಲ್ಕರ್ ಮಾರ್ಗದರ್ಶನದ ಮುಂಬೈ ಇಂಡಿಯನ್ಸ್ ಜಯಿಸಲಿದೆಯಾ ಕಾದು ನೋಡಬೇಕಿದೆ.

Loading...
Unable to load recommendations.
Follow Us