IPL 2023: ವಿರಾಟ್ ಕೊಹ್ಲಿಗೆ ವಿಧಿಸಿದ ದಂಡವನ್ನು ಕಟ್ಟುವವರು ಯಾರು?
TV9 Web | Updated By: ಝಾಹಿರ್ ಯೂಸುಫ್
Updated on:
May 04, 2023 | 8:28 PM
IPL 2023 Kannada: BCCI ತಂಡಗಳ ಮೇಲೆ ವಿಧಿಸಲಾದ ಎಲ್ಲಾ ದಂಡಗಳ ಬಿಲ್ ಅನ್ನು ಫ್ರಾಂಚೈಸಿಗಳಿಗೆ ಕಳುಹಿಸುತ್ತದೆ. ಆ ಬಳಿಕ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದ ಹಾಗೂ ಆಟಗಾರರ ದಂಡವನ್ನು ಮೇಲಿನ ತೆರವುಗೊಳಿಸಬೇಕು.
1 / 7
IPL 2023: ಐಪಿಎಲ್ನ 43ನೇ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘನೆಗಾಗಿ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಹಾಗೂ ನವೀನ್ ಉಲ್ ಹಕ್ಗೆ ದಂಡ ವಿಧಿಸಲಾಗಿತ್ತು. ಇಲ್ಲಿ ಕೊಹ್ಲಿ ಹಾಗೂ ಗಂಭೀರ್ಗೆ ಪಂದ್ಯ ಶುಲ್ಕದ ಶೇ.100 ರಷ್ಟು ದಂಡ ವಿಧಿಸಿದರೆ, ನವೀನ್ ಉಲ್ ಹಕ್ಗೆ ಮ್ಯಾಚ್ ಫೀನ ಶೇ.50 ರಷ್ಟು ದಂಡ ವಿಧಿಸಲಾಗಿದೆ.
2 / 7
ಅದರಂತೆ ವಿರಾಟ್ ಕೊಹ್ಲಿ 1.07 ಕೋಟಿ ರೂ. ದಂಡ ಪಾವತಿಸಬೇಕಾಗಿದೆ. ಹಾಗೆಯೇ ಗೌತಮ್ ಗಂಭೀರ್ 25 ಲಕ್ಷ ದಂಡ ಕಟ್ಟಬೇಕಿದೆ. ಅಂದರೆ ಇಲ್ಲಿ ವಿರಾಟ್ ಕೊಹ್ಲಿಯ ಐಪಿಎಲ್ ಸಂಭಾವನೆ 15 ಕೋಟಿ ರೂ.ಗೆ ಅನುಗುಣವಾಗಿ ಪ್ರತಿ ಪಂದ್ಯದ ಶುಲ್ಕ ಸುಮಾರು 1.07 ಕೋಟಿ ರೂ. ಆಗಿರಲಿದೆ. ಆದರೆ ಈ ಮೊತ್ತವನ್ನು ವಿರಾಟ್ ಕೊಹ್ಲಿ ಪಾವತಿಸುವುದಿಲ್ಲ ಎಂಬ ಮಾಹಿತಿಯೊಂದು ಹೊರಬಿದ್ದಿದೆ.ಅದರಂತೆ ವಿರಾಟ್ ಕೊಹ್ಲಿ 1.07 ಕೋಟಿ ರೂ. ದಂಡ ಪಾವತಿಸಬೇಕಾಗಿದೆ. ಹಾಗೆಯೇ ಗೌತಮ್ ಗಂಭೀರ್ 25 ಲಕ್ಷ ದಂಡ ಕಟ್ಟಬೇಕಿದೆ. ಅಂದರೆ ಇಲ್ಲಿ ವಿರಾಟ್ ಕೊಹ್ಲಿಯ ಐಪಿಎಲ್ ಸಂಭಾವನೆ 15 ಕೋಟಿ ರೂ.ಗೆ ಅನುಗುಣವಾಗಿ ಪ್ರತಿ ಪಂದ್ಯದ ಶುಲ್ಕ ಸುಮಾರು 1.07 ಕೋಟಿ ರೂ. ಆಗಿರಲಿದೆ. ಆದರೆ ಈ ಮೊತ್ತವನ್ನು ವಿರಾಟ್ ಕೊಹ್ಲಿ ಪಾವತಿಸುವುದಿಲ್ಲ ಎಂಬ ಮಾಹಿತಿಯೊಂದು ಹೊರಬಿದ್ದಿದೆ.
3 / 7
ಇಲ್ಲಿ ವಿರಾಟ್ ಕೊಹ್ಲಿಗೆ ಹಾಗೂ ಗಂಭೀರ್ಗೆ ದಂಡ ವಿಧಿಸಲಾಗಿದ್ದರೂ, ಅದನ್ನು ಪಾವತಿಸುವುದು ಐಪಿಎಲ್ ಮುಕ್ತಾಯದ ಬಳಿಕ. ಅಂದರೆ ಐಪಿಎಲ್ ಮುಗಿದ ನಂತರ ಪ್ರತಿ ತಂಡಗಳಿಗೆ ಹಾಗೂ ಆಟಗಾರರಿಗೆ ವಿಧಿಸಲಾದ ದಂಡ ಮೊತ್ತ ಲೆಕ್ಕವನ್ನು ಫ್ರಾಂಚೈಸ್ಗಳಿಗೆ ನೀಡಲಾಗುತ್ತದೆ. ಅದಕ್ಕನುಗುಣವಾಗಿ ಫೈನ್ ಮೊತ್ತವನ್ನು ಪಾವತಿಸಿ ಕ್ಲಿಯರ್ ಮಾಡಲಾಗುತ್ತದೆ.
4 / 7
ಇಲ್ಲಿ ಕುತೂಹಲಕಾರಿ ವಿಷಯ ಎಂದರೆ ಆರ್ಸಿಬಿ ಫ್ರಾಂಚೈಸ್ಯು ವಿರಾಟ್ ಕೊಹ್ಲಿಯ ದಂಡದ ಮೊತ್ತವನ್ನು ಪಾವತಿಸಲಿದೆ. ಕೊಹ್ಲಿಗೆ ನೀಡಲಿರುವ 15 ಕೋಟಿ ರೂ. ಸಂಭಾವನೆಯಿಂದ ಆರ್ಸಿಬಿ ಯಾವುದೇ ಮೊತ್ತವನ್ನು ಕಡಿತಗೊಳಿಸುವುದಿಲ್ಲ. ಈ ನಷ್ಟದ ಹೊರೆಯನ್ನು ಆರ್ಸಿಬಿ ಫ್ರಾಂಚೈಸಿಯೇ ಭರಿಸಲಿದೆ ವರದಿಯಾಗಿದೆ.
5 / 7
ಹೆಚ್ಚಿನ ಫ್ರಾಂಚೈಸಿಗಳು ತಮ್ಮ ಆಟಗಾರರಿಗೆ ಹಾಗೂ ಸಿಬ್ಬಂದಿಗೆ ವಿಧಿಸಲಾಗುವ ದಂಡದ ಮೊತ್ತವನ್ನು ಪಾವತಿಸುತ್ತದೆ. ಹೀಗಾಗಿ ವಿರಾಟ್ ಕೊಹ್ಲಿ ಅವರ ವೇತನದಲ್ಲಿ ಯಾವುದೇ ಕಡಿತವಾಗುವುದಿಲ್ಲ ಎಂದು ತಿಳಿದು ಬಂದಿದೆ.
6 / 7
BCCI ತಂಡಗಳ ಮೇಲೆ ವಿಧಿಸಲಾದ ಎಲ್ಲಾ ದಂಡಗಳ ಬಿಲ್ ಅನ್ನು ಫ್ರಾಂಚೈಸಿಗಳಿಗೆ ಕಳುಹಿಸುತ್ತದೆ. ಆ ಬಳಿಕ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡದ ಹಾಗೂ ಆಟಗಾರರ ದಂಡವನ್ನು ತೆರವುಗೊಳಿಸಬೇಕು. ಇಲ್ಲಿ ಆಟಗಾರನ ವೇತನದಿಂದ ಈ ಮೊತ್ತವನ್ನು ಕಡಿತಗೊಳಿಸಬೇಕೇ ಅಥವಾ ಬೇಡವೇ ಎಂಬುದು ಆಯಾ ತಂಡದ ಆಂತರಿಕ ವಿಷಯವಾಗಿದೆ.
7 / 7
ಇದಾಗ್ಯೂ ಆರ್ಸಿಬಿ ಕಿಂಗ್ ಕೊಹ್ಲಿಯ ವೇತನದಲ್ಲಿ ಯಾವುದೇ ಕಡಿತ ಮಾಡುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಹೀಗಾಗಿ ವಿರಾಟ್ ಕೊಹ್ಲಿ ದಂಡ ಪಾವತಿಸುವುದಿಲ್ಲ, ಬದಲಾಗಿ ಆರ್ಸಿಬಿಯೇ ಆ ವೆಚ್ಚವನ್ನು ಭರಿಸಲಿದೆ.