IPL 2023: ಐಪಿಎಲ್ನ 56ನೇ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಬಾರಿಸಿ ಯಶಸ್ವಿ ಜೈಸ್ವಾಲ್ ಅಬ್ಬರಿಸಿದ್ದಾರೆ. ಕೇವಲ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್ನಲ್ಲಿ ಹೊಸ ಇತಿಹಾಸವನ್ನೂ ಕೂಡ ನಿರ್ಮಿಸಿದ್ದಾರೆ.
ವಿಶೇಷ ಎಂದರೆ ಇದಕ್ಕೂ ಮುನ್ನ ಯಶಸ್ವಿ ಜೈಸ್ವಾಲ್ ಮುಂಬೈ ಇಂಡಿಯನ್ಸ್ ವಿರುದ್ಧ 124 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಸ್ಕೋರ್ಗಳಿಸಿದ ಅನ್ಕ್ಯಾಪ್ಡ್ ಆಟಗಾರ ಎಂಬ ದಾಖಲೆ ಕೂಡ ಜೈಸ್ವಾಲ್ ಪಾಲಾಗಿತ್ತು.
ಇಲ್ಲಿ ಈ ಬಾರಿ ಕಣಕ್ಕಿಳಿಯುತ್ತಿರುವ ಅನ್ಕ್ಯಾಪ್ಡ್ (ಟೀಮ್ ಇಂಡಿಯಾ ಪರ ಆಡದ ಆಟಗಾರ) ಆಟಗಾರರ ಪೈಕಿ ರಾಜಸ್ಥಾನ್ ರಾಯಲ್ಸ್ ತಂಡದ ಯಶಸ್ವಿ ಜೈಸ್ವಾಲ್ ಹಾಗೂ ಆರ್ಸಿಬಿ ತಂಡದ ಅನೂಜ್ ರಾವತ್ ಕೋಟಿ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ.
ಆರ್ಸಿಬಿ ಫ್ರಾಂಚೈಸಿಯು ಅನೂಜ್ ರಾವತ್ಗೆ 3.8 ಕೋಟಿ ರೂ. ನೀಡುತ್ತಿದ್ದರೆ, ರಾಜಸ್ಥಾನ್ ರಾಯಲ್ಸ್ ಯಶಸ್ವಿ ಜೈಸ್ವಾಲ್ಗೆ 4 ಕೋಟಿ ರೂ. ನೀಡುತ್ತಿದೆ. ಆದರೆ ಇವರಿಬ್ಬರ ಪ್ರದರ್ಶನ ಅಜಗಜಾಂತರದ ವ್ಯತ್ಯಾಸವಿದೆ ಎಂಬುದೇ ಇಲ್ಲಿ ವಿಶೇಷ.
ಅಂದರೆ 4 ಕೋಟಿ ರೂ. ಪಡೆಯುತ್ತಿರುವ ಯಶಸ್ವಿ ಜೈಸ್ವಾಲ್ 12 ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಈ ವೇಳೆ ಕಲೆಹಾಕಿರುವುದು ಬರೋಬ್ಬರಿ 575 ರನ್ಗಳು. ಈ ವೇಳೆ 4 ಅರ್ಧಶತಕ ಹಾಗೂ 1 ಶತಕವನ್ನೂ ಕೂಡ ಬಾರಿಸಿದ್ದಾರೆ.ಅಂದರೆ 4 ಕೋಟಿ ರೂ. ಪಡೆಯುತ್ತಿರುವ ಯಶಸ್ವಿ ಜೈಸ್ವಾಲ್ 12 ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಈ ವೇಳೆ ಕಲೆಹಾಕಿರುವುದು ಬರೋಬ್ಬರಿ 575 ರನ್ಗಳು. ಈ ವೇಳೆ 4 ಅರ್ಧಶತಕ ಹಾಗೂ 1 ಶತಕವನ್ನೂ ಕೂಡ ಬಾರಿಸಿದ್ದಾರೆ.
ಮತ್ತೊಂದೆಡೆ ಆರ್ಸಿಬಿ ಆಟಗಾರ ಅನೂಜ್ ರಾವತ್ 6 ಪಂದ್ಯಗಳಲ್ಲಿ ಕಣಕ್ಕಿಳಿದು ಕಲೆಹಾಕಿರುವುದು ಕೇವಲ 39 ರನ್ಗಳು ಅಂದರೆ ನಂಬಲೇಬೇಕು.
ಇಲ್ಲಿ ಮತ್ತೊಂದು ಅಚ್ಚರಿಯ ವಿಷಯ ಎಂದರೆ ಯಶಸ್ವಿ ಜೈಸ್ವಾಲ್ 12 ಪಂದ್ಯಗಳಲ್ಲಿ 74 ಫೋರ್ ಹಾಗೂ 26 ಸಿಕ್ಸ್ ಸಿಡಿಸಿದ್ದಾರೆ. ಆದರೆ ಅನೂಜ್ ರಾವತ್ 6 ಪಂದ್ಯಗಳಲ್ಲಿ ಬಾರಿಸಿದ್ದು 2 ಫೋರ್ ಹಾಗೂ 1 ಸಿಕ್ಸ್ ಮಾತ್ರ.
ಒಂದು ವೇಳೆ ಯಶಸ್ವಿ ಜೈಸ್ವಾಲ್ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಕಾರಣ ಬೃಹತ್ ಸ್ಕೋರ್ಗಳಿಸಿದ್ದಾರೆ ಎಂದು ನೀವು ಹೇಳುವುದಾದರೆ, ಅನೂಜ್ ರಾವತ್ ಐಪಿಎಲ್ 2022 ರಲ್ಲಿ ಆರ್ಸಿಬಿ ಪರ 8 ಪಂದ್ಯಗಳಲ್ಲಿ ಆರಂಭಿಕರಾಗಿ ಬ್ಯಾಟ್ ಬೀಸಿದ್ದರು.
ಈ ವೇಳೆ ಅನೂಜ್ ರಾವತ್ ಬ್ಯಾಟ್ನಿಂದ ಮೂಡಿಬಂದಿರುವುದು ಕೇವಲ 10 ಫೋರ್ ಹಾಗೂ 7 ಸಿಕ್ಸ್ಗಳು ಮಾತ್ರ. ಹಾಗೆಯೇ 8 ಪಂದ್ಯಗಳಿಂದ ಕಲೆಹಾಕಿರುವುದು 129 ರನ್ ಮಾತ್ರ.
ಅಂದರೆ ಆರ್ಸಿಬಿ ಪರ ಒಟ್ಟು 14 ಪಂದ್ಯಗಳನ್ನಾಡಿರುವ ಅನೂಜ್ ರಾವತ್ ಇದುವರೆಗೆ ಕಲೆಹಾಕಿರುವುದು 168 ರನ್ಗಳು ಮಾತ್ರ. ಇದುವೇ ಆರ್ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಖರೀದಿಸಿರುವ ಆಟಗಾರರ ನಡುವಣ ವ್ಯತ್ಯಾಸ ಎಂದಷ್ಟೇ ಹೇಳಬಹುದು.
Published On - 9:22 pm, Sat, 13 May 23