IPL 2023: CSK ತಂಡಕ್ಕೆ ಝೀವಾ ಧೋನಿ ಫುಲ್ ಸಪೋರ್ಟ್: ಇಲ್ಲಿದೆ ಫೋಟೋಸ್
IPL 2023 Kannada: ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್ಕೆ ತಂಡದ ನಾಯಕ ಧೋನಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 139 ರನ್ ಕಲೆಹಾಕಿತ್ತು.
Updated on: May 06, 2023 | 7:07 PM

IPL 2023: ಚೆನ್ನೈನ ಎಂಎ ಚಿದರಂಬರಂ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್-ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯದ ವೇಳೆ ಝೀವಾ ಧೋನಿ ಕಾಣಿಸಿಕೊಂಡಿದ್ದಾರೆ.

ಪ್ರತಿ ಸೀಸನ್ನಲ್ಲೂ ತಂದೆಯ ಸಿಎಸ್ಕೆ ತಂಡ ಸಪೋಟರ್ ಆಗಿ ಕಾಣಿಸಿಕೊಳ್ಳುವ ಝೀವಾ ಈ ಬಾರಿಯ ಐಪಿಎಲ್ನಿಂದ ದೂರವೇ ಉಳಿದಿದ್ದರು.

ಅಷ್ಟೇ ಅಲ್ಲದೆ ಧೋನಿಯ ಪತ್ನಿ ಸಾಕ್ಷಿ ಧೋನಿ ಕೂಡ ಯಾವುದೇ ಪಂದ್ಯ ವೀಕ್ಷಿಸಲು ಆಗಮಿಸಿರಲಿಲ್ಲ. ಆದರೀಗ ಚೆಪಾಕ್ನಲ್ಲಿ ನಡೆದ 49ನೇ ಪಂದ್ಯದ ಸಿಎಸ್ಕೆ ಧ್ವಜದೊಂದಿಗೆ ಝೀವಾ ಹಾಗೂ ಸಾಕ್ಷಿ ಕಾಣಿಸಿಕೊಂಡಿದ್ದಾರೆ.

ಇದೀಗ ಝೀವಾ ಧೋನಿಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್ಕೆ ತಂಡದ ನಾಯಕ ಧೋನಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 139 ರನ್ ಕಲೆಹಾಕಿತ್ತು.

ಈ ಸುಲಭ ಗುರಿಯನ್ನು ಬೆನ್ನತ್ತಿದ ಸಿಎಸ್ಕೆ ತಂಡವು 17.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 140 ರನ್ಗಳಿಸುವ ಮೂಲಕ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
