IPL 2024 Auction: ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಹರಾಜಾದ ಮಿಚೆಲ್ ಸ್ಟಾರ್ಕ್
IPL 2024 Auction: ಮಿಚೆಲ್ ಸ್ಟಾರ್ಕ್ ಐಪಿಎಲ್ನಲ್ಲಿ ಕೇವಲ 2 ಸೀಸನ್ ಮಾತ್ರ ಆಡಿದ್ದಾರೆ. ಅದು ಕೂಡ ಆರ್ಸಿಬಿ ಪರ ಮಾತ್ರ. 2014 ಮತ್ತು 2015 ರಲ್ಲಿ ಆರ್ಸಿಬಿ ಪರ 27 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಸ್ಟಾರ್ಕ್ 34 ವಿಕೆಟ್ ಪಡೆದು ಮಿಂಚಿದ್ದರು.
Updated on:Dec 19, 2023 | 3:50 PM

ದುಬೈನ ಕೋಕಾಕೋಲ ಅರೇನಾದಲ್ಲಿ ನಡೆಯುತ್ತಿರುವ ಐಪಿಎಲ್ ಸೀಸನ್ 17 ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾ ತಂಡದ ವೇಗಿ ಮಿಚೆಲ್ ಸ್ಟಾರ್ ದುಬಾರಿ ಮೊತ್ತಕ್ಕೆ ಹರಾಜಾಗಿದ್ದಾರೆ. 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸ್ಟಾರ್ ಅವರ ಖರೀದಿಗೆ ಬಹುತೇಕ ಫ್ರಾಂಚೈಸಿಗಳು ಬಿಡ್ಡಿಂಗ್ ನಡೆಸಿದ್ದವು.

ಅದರಲ್ಲೂ ಗುಜರಾತ್ ಟೈಟಾನ್ಸ್ ಹಾಗೂ ಕೆಕೆಆರ್ ನಡುವೆ ನೇರ ಪೈಪೋಟಿ ನಡೆಯಿತು. ಅತ್ತ ಗುಜರಾತ್ ಕಮಿನ್ಸ್ಗಾಗಿ 15 ಕೋಟಿ ಘೋಷಿಸಿದರೆ, ಇತ್ತ ಕೆಕೆಆರ್ 16 ಕೋಟಿಯ ಬಿಡ್ಡಿಂಗ್ ನಡೆಸಿತು. ಇದಾಗ್ಯೂ ಉಭಯ ಫ್ರಾಂಚೈಸಿಗಳು ಹಿಂದೆ ಸರಿಯಲು ಮುಂದಾಗಿರಲಿಲ್ಲ.

ಪರಿಣಾಮ ಕೆಲವೇ ಕ್ಷಣಗಳಲ್ಲಿ ಮಿಚೆಲ್ ಸ್ಟಾರ್ಕ್ ಮೌಲ್ಯವು 20 ಕೋಟಿ ರೂ. ದಾಟಿತು. ಇನ್ನು ಕೆಕೆಆರ್ 22 ಕೋಟಿ ರೂ. ನೀಡಲು ಮುಂದಾದರೆ, ಗುಜರಾತ್ ಟೈಟಾನ್ಸ್ 23 ಕೋಟಿ ರೂ.ಗೆ ಬಿಡ್ಡಿಂಗ್ ನಡೆಸಿತು.

ಅಂತಿಮವಾಗಿ 24.75 ಕೋಟಿ ರೂ. ನೀಡುವ ಮೂಲಕ ಮಿಚೆಲ್ ಸ್ಟಾರ್ಕ್ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಖರೀದಿಸಿದೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಹರಾಜಾದ ಆಟಗಾರ ಎಂಬ ಹೆಗ್ಗಳಿಕೆಗೆ ಮಿಚೆಲ್ ಸ್ಟಾರ್ಕ್ ಪಾತ್ರರಾದರು.

ಮಿಚೆಲ್ ಸ್ಟಾರ್ಕ್ ಐಪಿಎಲ್ನಲ್ಲಿ ಕೇವಲ 2 ಸೀಸನ್ ಮಾತ್ರ ಆಡಿದ್ದಾರೆ. ಅದು ಕೂಡ ಆರ್ಸಿಬಿ ಪರ ಮಾತ್ರ. 2014 ಮತ್ತು 2015 ರಲ್ಲಿ ಆರ್ಸಿಬಿ ಪರ 27 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಸ್ಟಾರ್ಕ್ 34 ವಿಕೆಟ್ ಪಡೆದು ಮಿಂಚಿದ್ದರು. ಇದೀಗ ಬರೋಬ್ಬರಿ 24.75 ಕೋಟಿಗೆ ಹರಾಜಾಗುವ ಮೂಲಕ ಮಿಚೆಲ್ ಸ್ಟಾರ್ಕ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ರಹಮಾನುಲ್ಲಾ ಗುರ್ಬಾಝ್, ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಸುನಿಲ್ ನರೈನ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಅನುಕೂಲ್ ರಾಯ್, ರಿಂಕು ಸಿಂಗ್, ವೈಭವ್ ಅರೋರಾ, ಸುಯಶ್ ಶರ್ಮಾ, ಕುಲ್ವಂತ್ ಖೆಜ್ರೋಲಿಯಾ, ಮನ್‌ದೀಪ್ ಸಿಂಗ್, ಜೇಸನ್ ರಾಯ್, ಮಿಚೆಲ್ ಸ್ಟಾರ್ಕ್.
Published On - 3:46 pm, Tue, 19 December 23




