IPL 2024 Auction: ಕಡಿಮೆ ಮೊತ್ತಕ್ಕೆ ಹರಾಜಾದ ರಚಿನ್ ರವೀಂದ್ರ
IPL 2024 Auction: ಏಕದಿನ ವಿಶ್ವಕಪ್ನಲ್ಲಿ ರಚಿನ್ ರವೀಂದ್ರ ಅದ್ಭುತ ಪ್ರದರ್ಶನ ನೀಡಿದ್ದರು. ಇದಾಗ್ಯೂ ಅವರ ಖರೀದಿಗೆ ನಿರೀಕ್ಷಿತ ಪೈಪೋಟಿ ಕಂಡು ಬರಲಿಲ್ಲ. ಹೀಗಾಗಿ ಕೇವಲ 1.80 ಕೋಟಿ ರೂ. ನೀಡುವ ಮೂಲಕ ಸಿಎಸ್ಕೆ ಫ್ರಾಂಚೈಸಿ ಯುವ ಆಲ್ರೌಂಡರ್ನನ್ನು ತಮ್ಮದಾಗಿಸಿಕೊಂಡಿದ್ದಾರೆ.
Updated on:Dec 19, 2023 | 2:09 PM

ಐಪಿಎಲ್ ಸೀಸನ್ 17 ರಲ್ಲಿ ನ್ಯೂಝಿಲೆಂಡ್ ಆಟಗಾರ ರಚಿನ್ ರವೀಂದ್ರ ಕಣಕ್ಕಿಳಿಯುವುದು ಖಚಿತವಾಗಿದೆ. ದುಬೈನ ಕೋಕಾಕೋಲಾ ಅರೇನಾದಲ್ಲಿ ನಡೆದ ಬಿಡ್ಡಿಂಗ್ನಲ್ಲಿ ರಚಿನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಿದೆ.

50 ಲಕ್ಷ ರೂ. ಮೂಲ ಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ರಚಿನ್ ರವೀಂದ್ರ ಅವರ ಖರೀದಿಗೆ ಹೆಚ್ಚಿನ ಆಸಕ್ತಿ ಕಂಡು ಬಂದಿರಲಿಲ್ಲ. ಇತ್ತ ಸಿಎಸ್ಕೆ ಫ್ರಾಂಚೈಸಿಗೆ ಅಂತಿಮ ಹಂತದಲ್ಲಿ ಸನ್ರೈಸರ್ಸ್ ಹೈದರಾಬಾದ್ ಪೈಪೋಟಿ ನೀಡಿತು.

ಪರಿಣಾಮ ರಚಿನ್ ರವೀಂದ್ರ ಹರಾಜು ಮೌಲ್ಯ 1 ಕೋಟಿ ರೂ. ದಾಟಿತು. ಅಂತಿಮವಾಗಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ 1.80 ಕೋಟಿಗೆ ರಚಿನ್ ರವೀಂದ್ರ ಅವರನ್ನು ತಮ್ಮದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್ನಲ್ಲಿ ರಚಿನ್ ರವೀಂದ್ರ ಅದ್ಭುತ ಪ್ರದರ್ಶನ ನೀಡಿದ್ದರು. ಇದಾಗ್ಯೂ ಅವರ ಖರೀದಿಗೆ ನಿರೀಕ್ಷಿತ ಪೈಪೋಟಿ ಕಂಡು ಬರಲಿಲ್ಲ. ಹೀಗಾಗಿ ಕೇವಲ 1.80 ಕೋಟಿ ರೂ. ನೀಡುವ ಮೂಲಕ ಸಿಎಸ್ಕೆ ಫ್ರಾಂಚೈಸಿ ಯುವ ಆಲ್ರೌಂಡರ್ನನ್ನು ತಮ್ಮದಾಗಿಸಿಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ: ಎಂಎಸ್ ಧೋನಿ, ರವೀಂದ್ರ ಜಡೇಜಾ, ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಮಥೀಶ ಪತಿರಾಣ, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಮಹೀಶ್ ತೀಕ್ಷಣ, ಅಜಿಂಕ್ಯ ರಹಾನೆ, ಶೇಕ್ ರಶೀದ್, ನಿಶಾಂತ್ ಸಿಂಧು, ಅಜಯ್ ಮಂಡಲ್, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡೇರಿಲ್ ಮಿಚೆಲ್, ಸಮೀರ್ ರಿಝ್ವಿ
Published On - 2:00 pm, Tue, 19 December 23
