IPL 2024: ಹಾಯ್ ಮಗಾ, ಏನ್​ ಸಮಾಚಾರ: ಕನ್ನಡಿಗರ ಮುಖಾಮುಖಿ

| Updated By: ಝಾಹಿರ್ ಯೂಸುಫ್

Updated on: Apr 28, 2024 | 11:08 AM

IPL 2024 GT vs RCB: ಐಪಿಎಲ್​ನಲ್ಲಿ ಇಂದು (ಏ.28) ನಡೆಯಲಿರುವ ಮೊದಲ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಮಧ್ಯಾಹ್ನ 3.30 ರಿಂದ ಶುರುವಾಗಲಿದೆ. ಇನ್ನು ರಾತ್ರಿ 7.30 ರಿಂದ ಶುರುವಾಗಲಿರುವ 2ನೇ ಪಂದ್ಯದಲ್ಲಿ ಸಿಎಸ್​ಕೆ ಮತ್ತು ಎಸ್​ಆರ್​ಹೆಚ್ ತಂಡಗಳು ಸೆಣಸಲಿದೆ.

1 / 5
ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) 45ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ತಂಡಗಳು ಮುಖಾಮುಖಿಯಾಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ (ಏ.28) ನಡೆಯಲಿರುವ ಈ ಪಂದ್ಯದ ಮೂಲಕ ಗೆಲುವಿನ ಲಯ ಮುಂದುವರೆಸುವ ಇರಾದೆಯಲ್ಲಿದೆ ಆರ್​ಸಿಬಿ ತಂಡ.

2 / 5
ಈ ಪಂದ್ಯಕ್ಕೂ ಮುನ್ನ ಉಭಯ ತಂಡಗಳು ಆಟಗಾರರು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸಿದರು. ಇದೇ ವೇಳೆ ಕರ್ನಾಟಕದ ಆಟಗಾರರು ಜೊತೆಯಾಗಿ ಕಾಣಿಸಿಕೊಂಡರು. ಅಂದರೆ ಆರ್​ಸಿಬಿ ತಂಡದಲ್ಲಿ ಇಬ್ಬರು ಕನ್ನಡಿಗರಿದ್ದರೆ, ಗುಜರಾತ್ ಟೈಟಾನ್ಸ್​ ತಂಡ ಓರ್ವ ಕನ್ನಡಿಗ ಸ್ಥಾನ ಪಡೆದಿದ್ದಾರೆ. ಈ ಮೂವರ ಮುಖಾಮುಖಿಯ ಫೋಟೋ ಇದೀಗ ವೈರಲ್ ಆಗಿದೆ.

3 / 5
ವಿಜಯಕುಮಾರ್ ವೈಶಾಕ್: ಕರ್ನಾಟಕದ ವೇಗದ ಬೌಲರ್ ವಿಜಯಕುಮಾರ್ ವೈಶಾಕ್ ಕಳೆದ ಸೀಸನ್​ನಿಂದ ಆರ್​ಸಿಬಿ ತಂಡದಲ್ಲಿ  ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಈ ಬಾರಿಯ ಐಪಿಎಲ್​ನಲ್ಲಿ ಮೂರು ಪಂದ್ಯಗಳನ್ನಾಡಿರುವ ವೈಶಾಕ್ 2 ವಿಕೆಟ್ ಕಬಳಿಸಿದ್ದಾರೆ.

4 / 5
ಬಿಆರ್​ ಶರತ್: ಕರ್ನಾಟಕದ ವಿಕೆಟ್ ಕೀಪರ್ ಬ್ಯಾಟರ್ ಬಿಆರ್​ ಶರತ್ ಗುಜರಾತ್ ಟೈಟಾನ್ಸ್ ತಂಡದಲ್ಲಿದ್ದಾರೆ. ಇದೇ ಮೊದಲ ಬಾರಿಗೆ ಐಪಿಎಲ್​ನಲ್ಲಿ ಸ್ಥಾನ ಪಡೆದಿರುವ ಶರತ್ ಈವರೆಗೆ ಏಕೈಕ ಪಂದ್ಯವಾಡಿದ್ದು, ಈ ವೇಳೆ ಕೇವಲ 2 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ.

5 / 5
ಮನೋಜ್ ಭಾಂಡಗೆ: ಕಳೆದ ಸೀಸನ್​ನಿಂದ ಆರ್​ಸಿಬಿ ತಂಡದಲ್ಲಿರುವ ಮನೋಜ್ ಭಾಂಡಗೆಗೆ ಇದುವರೆಗೆ ಪಾದಾರ್ಪಣೆ ಮಾಡುವ ಅವಕಾಶ ಸಿಕ್ಕಿಲ್ಲ. ಆರ್​ಸಿಬಿ ತಂಡಕ್ಕೆ ಇನ್ನೂ 5 ಪಂದ್ಯಗಳಿದ್ದು, ಈ ಮ್ಯಾಚ್​ಗಳ ಮೂಲಕ ಮನೋಜ್ ಚೊಚ್ಚಲ ಪಂದ್ಯವಾಡಲಿದ್ದಾರಾ ಕಾದು ನೋಡಬೇಕಿದೆ.