- Kannada News Photo gallery Cricket photos IPL 2024 Gujarat Titans wicketkeeper batter Matthew Wade set to miss first two matches
IPL 2024: ಐಪಿಎಲ್ ಆರಂಭಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ತಂಡಕ್ಕೆ ಮತ್ತೊಂದು ಬಿಗ್ ಶಾಕ್..!
IPL 2024: ಗುಜರಾತ್ ಟೈಟಾನ್ಸ್ ತನ್ನ ಮೊದಲ ಪಂದ್ಯವನ್ನು ಮಾರ್ಚ್ 25 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಬೇಕಾಗಿದೆ. ಅದೇನೇ ಇರಲಿ, ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಗುಜರಾತ್ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮ್ಯಾಥ್ಯೂ ವೇಡ್ ಈ ಪಂದ್ಯದಲ್ಲಿ ಆಡುತಿಲ್ಲ ಎಂಬ ಸುದ್ದಿ ಹೊರಬಿದ್ದಿದೆ.
Updated on:Mar 08, 2024 | 4:11 PM

ಐಪಿಎಲ್ ಆರಂಭಕ್ಕೂ ಮುನ್ನ ಗುಜರಾತ್ ಟೈಟಾನ್ಸ್ ತಂಡಕ್ಕೆ ಸಾಲು ಸಾಲು ಸಂಕಷ್ಟಗಳು ಎದುರಾಗುತ್ತಿವೆ. ಈ ಸೀಸನ್‌ಗೂ ಮುನ್ನ ಈ ತಂಡದ ಹಲವು ದೊಡ್ಡ ಆಟಗಾರರು ಒಬ್ಬರ ಹಿಂದೆ ಒಬ್ಬರು ತಂಡದಿಂದ ಹೊರಬೀಳುತ್ತಿದ್ದಾರೆ. ತಂಡದ ಮಾಜಿ ನಾಯಕ ಹಾರ್ದಿಕ್ ಪಾಂಡ್ಯ ಈಗಾಗಲೇ ಫ್ರಾಂಚೈಸಿ ತೊರೆದಿದ್ದಾರೆ.

ಅವರಲ್ಲದೆ ತಂಡದ ಅನುಭವಿ ಬೌಲರ್ ಮೊಹಮ್ಮದ್ ಶಮಿ ಅವರು ಐಪಿಎಲ್ 2024 ರ ಸಂಪೂರ್ಣ ಪಂದ್ಯಾವಳಿಯಿಂದ ಹೊರಗುಳಿದಿದ್ದಾರೆ. ರಶೀದ್ ಖಾನ್ ಕೂಡ ಬಹಳ ಸಮಯದಿಂದ ಗಾಯದಿಂದ ಬಳಲುತ್ತಿದ್ದು, ಅವರನ ಆಡುವ ಬಗ್ಗೆಯೂ ಅನುಮಾನವಿದೆ. ಇದೀಗ ಈ ತಂಡ ಮತ್ತೊಂದು ಹಿನ್ನಡೆ ಅನುಭವಿಸಿದೆ.

ಗುಜರಾತ್ ಟೈಟಾನ್ಸ್ ತನ್ನ ಮೊದಲ ಪಂದ್ಯವನ್ನು ಮಾರ್ಚ್ 25 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಬೇಕಾಗಿದೆ. ಅದೇನೇ ಇರಲಿ, ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಗುಜರಾತ್ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮ್ಯಾಥ್ಯೂ ವೇಡ್ ಈ ಪಂದ್ಯದಲ್ಲಿ ಆಡುತಿಲ್ಲ ಎಂಬ ಸುದ್ದಿ ಹೊರಬಿದ್ದಿದೆ.

ವಾಸ್ತವವಾಗಿ ವೇಡ್ ಆಸ್ಟ್ರೇಲಿಯ ಪರ ದೇಶೀಯ ಕ್ರಿಕೆಟ್ ಆಡಲು ಹೆಚ್ಚು ಗಮನಹರಿಸುತ್ತಿದ್ದಾರೆ. ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್‌ನ ಅಂತಿಮ ಪಂದ್ಯವು ಮಾರ್ಚ್ 21 ರಿಂದ ಮಾರ್ಚ್ 25 ರ ನಡುವೆ ನಡೆಯಲಿದೆ. ಹೀಗಿರುವಾಗ ಗುಜರಾತ್ನ ಮೊದಲ ಪಂದ್ಯ ಹಾಗೂ ಆಸ್ಟ್ರೇಲಿಯದ ದೇಶೀಯ ಕ್ರಿಕೆಟ್‌ನ ಅಂತಿಮ ಪಂದ್ಯ ಒಂದೇ ದಿನ ನಡೆಯಲ್ಲಿವೆ. ಈ ಕಾರಣದಿಂದ ಮೊದಲೆರಡು ಪಂದ್ಯಗಳಿಗೆ ರಿಲೀಫ್ ನೀಡಬೇಕು ಎಂದು ಸ್ವತಃ ಆಟಗಾರ ಫ್ರಾಂಚೈಸಿಯಿಂದ ಬೇಡಿಕೆ ಇಟ್ಟಿದ್ದಾರೆ ಎಂದು ವರದಿಯಾಗಿದೆ.

ಗುಜರಾತ್ ಟೈಟಾನ್ಸ್ ಐಪಿಎಲ್ 2024 ರ ಎರಡನೇ ಪಂದ್ಯವನ್ನು ಮಾರ್ಚ್ 27 ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಆದರೆ ಈ ಪಂದ್ಯದಲ್ಲೂ ಮ್ಯಾಥ್ಯೂ ವೇಡ್ ಆಡುತ್ತಿಲ್ಲ. ಮಾರ್ಚ್ 25 ರವರೆಗೆ ಫೈನಲ್ ಆಡಿದ ನಂತರ, ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದು ಮಾರ್ಚ್ 27 ರಂದು ಚೆನ್ನೈ ವಿರುದ್ಧ ಆಡುವುದು ಸುಲಭವಲ್ಲ, ಇದರಿಂದಾಗಿ ಅವರು ಎರಡನೇ ಪಂದ್ಯದಿಂದಲೂ ಹೊರಗುಳಿಯಬಹುದು.

ಟೂರ್ನಿಯಲ್ಲಿ ಗುಜರಾತ್ಗ ಮೂರನೇ ಪಂದ್ಯ ಮಾರ್ಚ್ 31 ರಂದು ಹೈದರಾಬಾದ್ ವಿರುದ್ಧ ನಡೆಯಲಿದೆ. ಈ ಪಂದ್ಯದಲ್ಲಿ ಮ್ಯಾಥ್ಯೂ ವೇಡ್ ತಂಡದ ಪರ ಆಡುವ ನಿರೀಕ್ಷೆಯಿದೆ.

17ನೇ ಆವೃತ್ತಿಯ ಐಪಿಎಲ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಲೀಗ್‌ನ ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆಯಲಿದೆ. ಕಳೆದ ಐಪಿಎಲ್ ಸೀಸನ್ನ ವಿಜೇತ ತಂಡ ಚೆನ್ನೈ ಹಾಗೂ ಮೊದಲ ಟ್ರೋಫಿ ಗೆಲ್ಲಲು ಕಾಯುತ್ತಿರುವ ಆರ್ಸಿಬಿ ತಂಡಗಳ ನಡುವೆ ಈ ಪಂದ್ಯ ರೋಚಕತೆಯಿಂದ ಕೂಡಿರಲಿದೆ.
Published On - 4:10 pm, Fri, 8 March 24




