IPL 2024: ಪ್ಲೇಆಫ್ ರೇಸ್ನಿಂದ ಮೂರು ತಂಡಗಳು ಔಟ್
TV9 Web | Updated By: ಝಾಹಿರ್ ಯೂಸುಫ್
Updated on:
May 14, 2024 | 6:52 AM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ರ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತದತ್ತ ಸಾಗುತ್ತಿದೆ. ಇನ್ನುಳಿದಿರುವುದು ಕೇವಲ 7 ಮ್ಯಾಚ್ಗಳು ಮಾತ್ರ. ಈ ಏಳು ಪಂದ್ಯಗಳಲ್ಲಿ ಪ್ಲೇಆಫ್ ಆಡಲಿರುವ ಉಳಿದ ಮೂರು ತಂಡಗಳಾವುವು ಎಂಬುದು ನಿರ್ಧಾರವಾಗಲಿದೆ. ಅಂದರೆ ಕೆಕೆಆರ್ ತಂಡವು ಈಗಾಗಲೇ ಪ್ಲೇಆಫ್ ಪ್ರವೇಶಿಸಿದ್ದು, ಇನ್ನುಳಿದ ಮೂರು ಸ್ಥಾನಗಳಿಗಾಗಿ 6 ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.
1 / 6
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 17ನೇ ಆವೃತ್ತಿಯು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ 63 ಪಂದ್ಯಗಳು ಮುಗಿದಿದ್ದು, ಈ ವೇಳೆಗೆ ಒಂದು ತಂಡ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡರೆ, ಮೂರು ತಂಡಗಳು ಹೊರಬಿದ್ದಿದೆ.
2 / 6
ಇಲ್ಲಿ 13 ಪಂದ್ಯಗಳಲ್ಲಿ 9 ಜಯ, 3 ಸೋಲುಗಳೊಂದಿಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಒಟ್ಟು 19 ಅಂಕಗಳನ್ನು ಕಲೆಹಾಕಿದೆ. ಈ ಮೂಲಕ ಅಧಿಕೃತವಾಗಿ ಪ್ಲೇಆಫ್ಗೆ ಪ್ರವೇಶಿಸಿದೆ.
3 / 6
ಮತ್ತೊಂದೆಡೆ 12 ಪಂದ್ಯಗಳಲ್ಲಿ ಕೇವಲ 4 ಜಯ ಸಾಧಿಸಿ, 8 ಸೋಲನುಭವಿಸಿರುವ ಪಂಜಾಬ್ ಕಿಂಗ್ಸ್ ತಂಡ ಪ್ಲೇಆಫ್ನಿಂದ ಹೊರಬಿದ್ದಿದೆ. ಇದಾಗ್ಯೂ ಪಂಜಾಬ್ ಕಿಂಗ್ಸ್ ತಂಡಕ್ಕೆ ಇನ್ನೆರಡು ಪಂದ್ಯಗಳಿದ್ದು, ಈ ಮ್ಯಾಚ್ಗಳಲ್ಲಿ ಗೆದ್ದರೂ ಪ್ಲೇಆಫ್ಗೆ ಅರ್ಹತೆ ಪಡೆಯುವುದಿಲ್ಲ.
4 / 6
ಹಾಗೆಯೇ 13 ಮ್ಯಾಚ್ಗಳಲ್ಲಿ 4 ಜಯ ಸಾಧಿಸಿರುವ ಮುಂಬೈ ಇಂಡಿಯನ್ಸ್ ತಂಡ ಕೂಡ ಐಪಿಎಲ್ನಿಂದ ಹೊರಬಿದ್ದಿದೆ. ಈಗಾಗಲೇ 9 ಸೋಲನುಭವಿಸಿರುವ ಮುಂಬೈ ಪಡೆ ಕೊನೆಯ ಪಂದ್ಯದಲ್ಲಿ ಗೆದ್ದರೂ ಪ್ಲೇಆಫ್ ಪ್ರವೇಶಿಸಲು ಅವಕಾಶವಿಲ್ಲ.
5 / 6
ಇನ್ನು ಪ್ಲೇಆಫ್ ರೇಸ್ನಲ್ಲಿದ್ದ ಗುಜರಾತ್ ಟೈಟಾನ್ಸ್ ಪಾಲಿಗೆ ವರುಣ ಅವಕೃಪೆ ತೋರಿದ್ದಾನೆ. ಸೋಮವಾರ ಕೆಕೆಆರ್ ವಿರುದ್ಧ ನಡೆಯಬೇಕಿದ್ದ ಪಂದ್ಯಕ್ಕೆ ಮಳೆ ಅಡಚಣೆಯನ್ನುಂಟು ಮಾಡಿದ್ದು, ಹೀಗಾಗಿ ಪಂದ್ಯವನ್ನು ರದ್ದು ಮಾಡಲಾಗಿದೆ. ಪಂದ್ಯದ ರದ್ದಾದ ಕಾರಣ ಉಭಯ ತಂಡಗಳು ತಲಾ ಒಂದೊಂದು ಅಂಕಗಳನ್ನು ಹಂಚಿಕೊಂಡಿದೆ. ಇದರೊಂದಿಗೆ 11 ಅಂಕಗಳನ್ನು ಹೊಂದಿರುವ ಗುಜರಾತ್ ಟೈಟಾನ್ಸ್ ಕೂಡ ಪ್ಲೇಆಫ್ ರೇಸ್ನಿಂದ ಹೊರಬಿದ್ದಂತಾಗಿದೆ.
6 / 6
ಸದ್ಯ ಪ್ಲೇಆಫ್ ರೇಸ್ನಲ್ಲಿ ರಾಜಸ್ಥಾನ್ ರಾಯಲ್ಸ್, ಸಿಎಸ್ಕೆ, ಎಸ್ಆರ್ಹೆಚ್, ಆರ್ಸಿಬಿ, ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿವೆ. ಈ ಆರು ತಂಡಗಳಲ್ಲಿ ಮೂರು ತಂಡಗಳು ಪ್ಲೇಆಫ್ ಪ್ರವೇಶಿಸಲಿದ್ದು, ಇದರಲ್ಲಿ ಟಾಪ್-2 ನಲ್ಲಿ ಕಾಣಿಸಿಕೊಳ್ಳುವ ತಂಡ ಕೆಕೆಆರ್ ವಿರುದ್ಧ ಕ್ವಾಲಿಫೈಯರ್ ಪಂದ್ಯವಾಡಲಿದೆ.