IPL 2024: ಸೋಲಿನ ಬೆನ್ನಲ್ಲೇ ರೋಹಿತ್ ಶರ್ಮಾ ಜೊತೆ ಆಕಾಶ್ ಅಂಬಾನಿ ಸುದೀರ್ಘ ಚರ್ಚೆ..!
TV9 Web | Updated By: ಝಾಹಿರ್ ಯೂಸುಫ್
Updated on:
Mar 28, 2024 | 8:22 AM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ಪಂದ್ಯವೊಂದರಲ್ಲಿ 240 ಕ್ಕಿಂತ ಅಧಿಕ ರನ್ ನೀಡಿದೆ. ಈ ರನ್ಗಳೊಂದಿಗೆ ಐಪಿಎಲ್ನಲ್ಲಿ ಅತ್ಯಂತ ಕೆಟ್ಟ ಬೌಲಿಂಗ್ ಪ್ರದರ್ಶನ ನೀಡಿದ ತಂಡವೆಂಬ ಅಪಖ್ಯಾತಿಯನ್ನೂ ಸಹ ಹಾರ್ದಿಕ್ ಪಾಂಡ್ಯ ಪಡೆ ತನ್ನದಾಗಿಸಿಕೊಂಡಿದೆ.
1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಇತಿಹಾಸದಲ್ಲೇ ಅತ್ಯಂತ ಕೆಟ್ಟ ಬೌಲಿಂಗ್ ಪ್ರದರ್ಶನ ನೀಡಿದ ತಂಡ ಎಂಬ ಅಪಖ್ಯಾತಿ ಇದೀಗ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದೆ. ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 277 ರನ್ ನೀಡುವ ಮೂಲಕ ಮುಂಬೈ ಇಂಡಿಯನ್ಸ್ ಈ ಅಪಕೀರ್ತಿಯನ್ನು ತನ್ನದಾಗಿಸಿಕೊಂಡಿದೆ.
2 / 6
ಈ ಅಪಖ್ಯಾತಿಯೊಂದಿಗೆ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 31 ರನ್ಗಳಿಂದ ಸೋಲನುಭವಿಸಿತು. ಈ ಸೋಲಿನ ಬೆನ್ನಲ್ಲೇ ಮುಂಬೈ ತಂಡದ ಮಾಲೀಕರಾದ ಆಕಾಶ್ ಅಂಬಾನಿ ರೋಹಿತ್ ಶರ್ಮಾ ಅವರನ್ನು ಭೇಟಿಯಾಗಿದ್ದು ವಿಶೇಷ. ಅಷ್ಟೇ ಅಲ್ಲದೆ ಸುದೀರ್ಘ ಚರ್ಚೆ ನಡೆಸುತ್ತಿರುವುದು ಕೂಡ ಕಂಡು ಬಂತು.
3 / 6
ಮುಂಬೈ ಇಂಡಿಯನ್ಸ್ ತಂಡ ಸೋಲುತ್ತಿದ್ದಂತೆ ಡಗೌಟ್ನತ್ತ ಬಂದ ಆಕಾಶ್ ಅಂಬಾನಿ ರೋಹಿತ್ ಶರ್ಮಾ ಅವರೊಂದಿಗೆ ವಿಶೇಷ ಚರ್ಚೆ ನಡೆಸಿದರು. ಈ ಚರ್ಚೆಯು ಕೆಲ ಹೊತ್ತಿನವರೆಗೂ ಸಾಗಿದ್ದು ವಿಶೇಷ. ಇದೀಗ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
4 / 6
ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ಹಾರ್ದಿಕ್ ಪಾಂಡ್ಯಗೆ ಕ್ಯಾಪ್ಟನ್ ಪಟ್ಟ ನೀಡಿದ್ದರು. ಆದರೆ ಮೊದಲೆರಡು ಪಂದ್ಯಗಳಲ್ಲೂ ಮುಂಬೈ ಇಂಡಿಯನ್ಸ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ.
5 / 6
ಅದರಲ್ಲೂ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ರನ್ ನೀಡಿದ ಅಪಖ್ಯಾತಿಯನ್ನು ಮುಂಬೈ ಇಂಡಿಯನ್ಸ್ ತಂಡ ಮೈಮೇಲೆ ಎಳೆದುಕೊಂಡಿರುವುದು ಫ್ರಾಂಚೈಸಿಯ ಬೇಸರಕ್ಕೆ ಕಾರಣವಾಗಿದೆ. ಹೀಗಾಗಿಯೇ ಆಕಾಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರು ರೋಹಿತ್ ಶರ್ಮಾ ಅವರ ಜೊತೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ.
6 / 6
ಸದ್ಯ ಆಕಾಶ್ ಅಂಬಾನಿ ಹಾಗೂ ರೋಹಿತ್ ಶರ್ಮಾ ನಡುವಣ ಚರ್ಚಾ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಇದು ನಾಯಕತ್ವದ ಬದಲಾವಣೆಯ ಮುನ್ಸೂಚನೆ ಎಂದು ಹಿಟ್ಮ್ಯಾನ್ ಫ್ಯಾನ್ಸ್ ಫುಲ್ ಖುಷಿ ವ್ಯಕ್ತಪಡಿಸಲಾರಂಭಿಸಿದ್ದಾರೆ. ಅದರಂತೆ ಮುಂಬರುವ ಪಂದ್ಯಗಳಲ್ಲಿ ಪಾಂಡ್ಯ ಬದಲಿಗೆ ರೋಹಿತ್ ಶರ್ಮಾ ಕ್ಯಾಪ್ಟನ್ ಆಗಲಿದ್ದಾರಾ ಕಾದು ನೋಡಬೇಕಿದೆ.