IPL 2024: CSK vs RCB: ಚೆನ್ನೈನಲ್ಲಿ ಚಮಕ್ ಕೊಡೋರು ಯಾರು?

| Updated By: ಝಾಹಿರ್ ಯೂಸುಫ್

Updated on: Mar 21, 2024 | 1:52 PM

IPL 2024 CSK vs RCB: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಚೆನ್ನೈನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಸಿಎಸ್​ಕೆ ಮತ್ತು ಆರ್​ಸಿಬಿ ತಂಡಗಳು ಕಣಕ್ಕಿಳಿಯಲಿದೆ. ಈ ಪಂದ್ಯವು ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವುದು ಸಿಎಸ್​ಕೆ ಪಾಲಿಗೆ ಪ್ಲಸ್ ಪಾಯಿಂಟ್.

1 / 7
ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್-17 ಆರಂಭಕ್ಕೆ ವೇದಿಕೆ ಸಿದ್ಧವಾಗಿದೆ. ಶುಕ್ರವಾರ (ಮಾ.22) ಶುರುವಾಗಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವುದು ವಿಶೇಷ.

2 / 7
ಅಂದರೆ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಮೊದಲ ಪಂದ್ಯವನ್ನು ತವರಿನಲ್ಲಿ ಆಡುತ್ತಿರುವುದು ಪ್ಲಸ್ ಪಾಯಿಂಟ್ ಆಗಲಿದೆ. ಏಕೆಂದರೆ ಸಿಎಸ್​ಕೆ ತಂಡವು ಎಂಎ ಚಿದಂಬರಂ ಮೈದಾನದಲ್ಲಿ ಸೋತಿದಕ್ಕಿಂತ ಗೆದ್ದಿದ್ದೇ ಹೆಚ್ಚು. ಅದರಲ್ಲೂ ಸಿಎಸ್​ಕೆ ತವರಿನಲ್ಲಿ ಆರ್​ಸಿಬಿ ವಿರುದ್ಧ ಸೋತಿರುವುದು ಕೇವಲ 1 ಬಾರಿ ಎಂದರೆ ನಂಬಲೇಬಕು.

3 / 7
ಉಭಯ ತಂಡಗಳು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಇದುವರೆಗೆ 8 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು 7 ಬಾರಿ ಭರ್ಜರಿ ಜಯ ಸಾಧಿಸಿದೆ. ಇನ್ನು ಆರ್​ಸಿಬಿ ತಂಡ ಗೆದ್ದಿರುವುದು ಕೇವಲ 1 ಬಾರಿ ಮಾತ್ರ. ಅದು ಕೂಡ 2008 ರಲ್ಲಿ. ಇದಾದ ಬಳಿಕ ಚೆನ್ನೈನಲ್ಲಿ ಸಿಎಸ್​ಕೆ ವಿರುದ್ಧ ಆರ್​ಸಿಬಿ ಗೆಲುವಿನ ನಗೆ ಬೀರಿಲ್ಲ.

4 / 7
ಇನ್ನು ಸಿಎಸ್​ಕೆ ತಂಡವು ತವರು ಮೈದಾನದಲ್ಲಿ ಇದುವರೆಗೆ 64 ಪಂದ್ಯಗಳನ್ನಾಡಿದೆ. ಈ ವೇಳೆ 18 ಪಂದ್ಯಗಳಲ್ಲಿ ಸೋತರೆ, 46 ಪಂದ್ಯಗಳಲ್ಲಿ ಜಯಬೇರಿ ಬಾರಿಸಿದೆ. ಹೀಗಾಗಿಯೇ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ತವರಿನ ಹುಲಿಗಳೆಂದು ಕರೆಯಲಾಗುತ್ತದೆ.

5 / 7
ಹಾಗೆಯೇ ಆರ್​ಸಿಬಿ ತಂಡವು ಚೆನ್ನೈ ಮೈದಾನದಲ್ಲಿ ಒಟ್ಟು 12 ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಅಂದರೆ 5 ಪಂದ್ಯಗಳಲ್ಲಿ ಜಯ ಸಾಧಿಸಿದರೆ, 7 ಮ್ಯಾಚ್​ಗಳಲ್ಲಿ ಸೋಲನುಭವಿಸಿದೆ.

6 / 7
ಇದಾಗ್ಯೂ ಈ ಮೈದಾನದಲ್ಲಿ ಟಾಸ್ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಇದಕ್ಕೆ ಸಾಕ್ಷಿಯೇ ಸಿಎಸ್​ಕೆ ಗೆದ್ದಿರುವ ಪಂದ್ಯಗಳ ಸಂಖ್ಯೆ. ಅಂದರೆ ಚೆನ್ನೈನಲ್ಲಿ ಧೋನಿ ಪಡೆ ಗೆದ್ದಿರುವ 46 ಪಂದ್ಯಗಳಲ್ಲಿ ಸಿಎಸ್​ಕೆ 30 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ. ಹೀಗಾಗಿ ಇಲ್ಲಿ ಸಿಎಸ್​ಕೆ ತಂಡ ಮೇಲುಗೈ ಹೊಂದಿದ್ದರೂ, ಟಾಸ್ ಅದೃಷ್ಟ ಕೈ ಹಿಡಿದರೆ ಅಚ್ಚರಿಯ ಫಲಿತಾಂಶವನ್ನು ನಿರೀಕ್ಷಿಸಬಹುದು.

7 / 7
ಅದರಲ್ಲೂ 2021 ರ ಬಳಿಕ ಇದೇ ಮೊದಲ ಬಾರಿಗೆ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿಯುತ್ತಿರುವ ಆರ್​ಸಿಬಿ ತಂಡವು ಹೊಸ ಹುಮ್ಮಸ್ಸಿನಲ್ಲಿದ್ದು, ಹೀಗಾಗಿ ಈ ಪಂದ್ಯದಲ್ಲಿ CSK ಗೆ ಕಠಿಣ ಪೈಪೋಟಿ ನೀಡಿ RCB ಶುಭಾರಂಭ ಮಾಡುವ ನಿರೀಕ್ಷೆಯಿದೆ.