IPL 2024: RCB ಬೌಲಿಂಗ್ ವೀಕು: ಗೆಲ್ಲೋಕೆ ರಣತಂತ್ರ ತಿಳಿಸಿದ ಫಾಫ್ ಡುಪ್ಲೆಸಿಸ್
TV9 Web | Updated By: ಝಾಹಿರ್ ಯೂಸುಫ್
Updated on:
Apr 14, 2024 | 2:22 PM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) 17ನೇ ಆವೃತ್ತಿಯಲ್ಲಿ ಆರ್ಸಿಬಿ ಸತತ ಸೋಲುಗಳಿಂದ ಕಂಗೆಟ್ಟಿದೆ. ಆಡಿರುವ 6 ಪಂದ್ಯಗಳಲ್ಲಿ ಆರ್ಸಿಬಿ ಗೆದ್ದಿರುವುದು ಕೇವಲ 1 ಮ್ಯಾಚ್ ಮಾತ್ರ. ಉಳಿದ ಐದು ಪಂದ್ಯಗಳಲ್ಲಿ ಹೀನಾಯ ಸೋಲನುಭವಿಸಿ ಇದೀಗ IPL 2024 ರ ಪಾಯಿಂಟ್ಸ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿದೆ.
1 / 6
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ರಲ್ಲಿ ಹೊಸ ಅಧ್ಯಾಯ ಬರೆಯುವ ಹುರುಪಿನೊಂದಿಗೆ ಕಣಕ್ಕಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸತತ ಸೋಲುಗಳಿಂದ ಕಂಗೆಟ್ಟಿದೆ. ಆಡಿರುವ 6 ಪಂದ್ಯಗಳಲ್ಲಿ ಆರ್ಸಿಬಿ ಗೆದ್ದಿರುವುದು ಕೇವಲ 1 ಮ್ಯಾಚ್ನಲ್ಲಿ ಮಾತ್ರ.
2 / 6
ಸಿಎಸ್ಕೆ ವಿರುದ್ಧದ ಸೋಲಿನೊಂದಿಗೆ ಐಪಿಎಲ್ ಸೀಸನ್-17 ಆರಂಭಿಸಿದ ಆರ್ಸಿಬಿ ಪಂಜಾಬ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿತ್ತು. ಇದಾದ ಬಳಿಕ ಕೊಲ್ಕತ್ತಾ ನೈಟ್ ರೈಡರ್ಸ್, ಲಕ್ನೋ ಸೂಪರ್ ಜೈಂಟ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ವಿರುದ್ಧ ಸೋಲನುಭವಿಸಿದೆ.
3 / 6
ಆರ್ಸಿಬಿ ತಂಡದ ಈ ಸೋಲುಗಳಿಗೆ ಮುಖ್ಯ ಕಾರಣ ಬೌಲರ್ಗಳು ಎಂದಿದ್ದಾರೆ ಫಾಫ್ ಡುಪ್ಲೆಸಿಸ್. ಆರ್ಸಿಬಿ ತಂಡದ ಬೌಲಿಂಗ್ ವಿಭಾಗವು ಅಷ್ಟೊಂದು ಹರಿತವಾಗಿಲ್ಲ. ಹೀಗಾಗಿಯೇ ನಾವು ಉತ್ತಮ ಮೊತ್ತ ಪೇರಿಸಿದರೂ ಸೋಲುತ್ತಿದ್ದೇವೆ ಎಂದು ಡುಪ್ಲೆಸಿಸ್ ಹೇಳಿದ್ದಾರೆ.
4 / 6
ಇನ್ನು ಈ ಸೋಲಿನ ಸಂಕೋಲೆಯಿಂದ ಆರ್ಸಿಬಿಗೆ ಹೊರಬರಲು ಇರುವುದು ಒಂದೇ ಮಾರ್ಗ. ಅದುವೇ ಬೃಹತ್ ರನ್ ಮೊತ್ತದ ಗುರಿ ನೀಡುವುದು. ನಾವು ಏನೇ ಮಾಡುವುದಿದ್ದರೂ ಇನ್ನು ಬ್ಯಾಟಿಂಗ್ನಲ್ಲಿ ಮಾಡಬೇಕಿದೆ. ನನ್ನ ಪ್ರಕಾರ, ಇನ್ಮುಂದೆ ನಾವು ಬಿಗ್ ಟಾರ್ಗೆಟ್ ನೀಡಿದರೆ ಮಾತ್ರ ಗೆಲ್ಲೋಕೆ ಸಾಧ್ಯ ಎಂದು ಡುಪ್ಲೆಸಿಸ್ ಹೇಳಿದ್ದಾರೆ.
5 / 6
ಈ ಮೂಲಕ ಮುಂಬರುವ ಪಂದ್ಯಗಳಲ್ಲಿ ಆರ್ಸಿಬಿ ಬ್ಯಾಟರ್ಗಳು ಆತ್ಮವಿಶ್ವಾಸದಿಂದ ಬ್ಯಾಟ್ ಬೀಸಬೇಕಿದೆ. ಅಲ್ಲದೆ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡುವ ಮೂಲಕ ಬೃಹತ್ ಮೊತ್ತ ಪೇರಿಸಿ ಗೆಲ್ಲುವ ದಾರಿ ಕಂಡುಕೊಳ್ಳಬೇಕಿದೆ ಎಂದು ಆರ್ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಹೇಳಿದ್ದಾರೆ.
6 / 6
ಆರ್ಸಿಬಿ ತಂಡವು ತನ್ನ ಮುಂದಿನ ಪಂದ್ಯವನ್ನು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಏಪ್ರಿಲ್ 15 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಹೊಸ ರಣತಂತ್ರದೊಂದಿಗೆ ಕಣಕ್ಕಿಳಿಯುವ ಇರಾದೆಯಲ್ಲಿದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ.