- Kannada News Photo gallery Cricket photos IPL 2024 4 mumbai domestic players play for csk against mumbai indians
IPL 2024: ಮುಂಬೈಗೆ ತನ್ನವರೇ ಶತ್ರುಗಳು; ಸಿಎಸ್ಕೆ ತಂಡದಲ್ಲಿ ನಾಲ್ವರು ಮುಂಬೈ ಕ್ರಿಕೆಟಿಗರು
IPL 2024: ಐಪಿಎಲ್ 2024 ರ 29 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗುತ್ತಿವೆ. ಮುಂಬೈನ ತವರು ಮೈದಾನ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯ ಒಂದು ವಿಶಿಷ್ಟ ಘಟನೆಗೆ ಸಾಕ್ಷಿಯಾಗುತ್ತಿರುವುದು ಈ ಪಂದ್ಯಕ್ಕೆ ಇನ್ನಷ್ಟು ಮೆರಗು ತಂದಿದೆ.
Updated on: Apr 14, 2024 | 6:08 PM

ಐಪಿಎಲ್ 2024 ರ 29 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗುತ್ತಿವೆ. ಮುಂಬೈನ ತವರು ಮೈದಾನ ವಾಂಖೆಡೆ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಈ ಪಂದ್ಯ ಒಂದು ವಿಶಿಷ್ಟ ಘಟನೆಗೆ ಸಾಕ್ಷಿಯಾಗುತ್ತಿರುವುದು ಈ ಪಂದ್ಯಕ್ಕೆ ಇನ್ನಷ್ಟು ಮೆರಗು ತಂದಿದೆ.

ವಾಸ್ತವವಾಗಿ ಈ ಪಂದ್ಯ ಸಿಎಸ್ಕೆ ಹಾಗೂ ಮುಂಬೈ ನಡುವೆ ನಡೆಯುತ್ತಿದ್ದರೂ, ಮುಂಬೈ ಇಂಡಿಯನ್ಸ್ ತಂಡಕ್ಕೆ ಮುಂಬೈ ಕ್ರಿಕೆಟಿಗರೆ ವಿಲನ್ ಆಗಿದ್ದಾರೆ. ಅಂದರೆ ಇಂದಿನ ಪಂದ್ಯದಲ್ಲಿ ಮುಂಬೈ ವಿರುದ್ಧ ನಾಲ್ವರು ಮುಂಬೈ ಕ್ರಿಕೆಟಿಗರು ಸಿಎಸ್ಕೆ ಪರ ಕಣಕ್ಕಿಳಿಯುತ್ತಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಮುಂಬೈ ಪರ ಆಡುತ್ತಿರುವ ಶಿವಂ ದುಬೆ, ಅಜಿಂಕ್ಯ ರಹಾನೆ, ತುಷಾರ್ ದೇಶಪಾಂಡೆ ಮತ್ತು ಶಾರ್ದೂಲ್ ಠಾಕೂರ್ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದಾರೆ. ಈ ಆಟಗಾರರು ಇಂದು ಸಿಎಸ್ಕೆ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ.

ಕಳೆದ ಪಂದ್ಯದಲ್ಲೂ ಈ ಆಟಗಾರರು ಚೆನ್ನೈನ ಪ್ಲೇಯಿಂಗ್ 11ರ ಭಾಗವಾಗಿದ್ದರು. ಹೀಗಾಗಿ ಇಂದಿನ ಪಂದ್ಯದಲ್ಲಿ ಈ ನಾಲ್ವರು ಕಣಕ್ಕಿಳಿದರೆ ಮುಂಬೈ ತಂಡಕ್ಕೆ ಸಂಕಷ್ಟ ಎದುರಾಗುವುದು ಖಚಿತ. ಏಕೆಂದರೆ ಈ ನಾಲ್ವರಿಗೆ ವಾಂಖೆಡೆ ತವರು ನೆಲವಾಗಿರುವುದರಿಂದ ಮುಂಬೈ ವಿರುದ್ಧ ಅದ್ಭುತ ಪ್ರದರ್ಶನ ನೀಡುವ ಸಾಧ್ಯತೆಗಳು ಹೆಚ್ಚಿವೆ.

ಇನ್ನು ಐಪಿಎಲ್ 2024 ರಲ್ಲಿ ಸಿಎಸ್ಕೆ ಆಡದ ಬಗ್ಗೆ ಹೇಳುವುದಾದರೆ.. ಈ ತಂಡವು ಇಲ್ಲಿಯವರೆಗೆ 5 ಪಂದ್ಯಗಳನ್ನು ಆಡಿದ್ದು, 3 ಪಂದ್ಯಗಳನ್ನು ಗೆದ್ದು 2 ರಲ್ಲಿ ಸೋಲು ಕಂಡಿದೆ. ಅಂಕಪಟ್ಟಿಯಲ್ಲಿ 6 ಅಂಕಗಳೊಂದಿಗೆ ತಂಡ ಮೂರನೇ ಸ್ಥಾನದಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ಸಮೀರ್ ರಿಜ್ವಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಮುಸ್ತಾಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ, ಮಹೇಶ್ ತಿಕ್ಷಣ. ಇಂಪ್ಯಾಕ್ಟ್ ಪ್ಲೇಯರ್: ಶಿವಂ ದುಬೆ.




