IPL 2024 Auction: ಮೊದಲ ಸುತ್ತಿನಲ್ಲಿ ಹರಾಜಾಗುವ ಆಟಗಾರರು ಯಾರು ಗೊತ್ತಾ?
TV9 Web | Updated By: ಝಾಹಿರ್ ಯೂಸುಫ್
Updated on:
Dec 18, 2023 | 7:36 AM
IPL 2024 Auction: ದುಬೈನಲ್ಲಿ ನಡೆಯಲಿರುವ ಆಕ್ಷನ್ನಲ್ಲಿ ಒಂದೊಂದು ಸೆಟ್ಗಳ ಮೂಲಕ ಹರಾಜು ಕೂಗಲಾಗುತ್ತದೆ. ವಿಶೇಷ ಎಂದರೆ ಈ ಬಾರಿಯ ಮೊದಲ ಸೆಟ್ನಲ್ಲಿ ಒಟ್ಟು 7 ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ. ಇವರಲ್ಲಿ ಇಬ್ಬರು ಭಾರತೀಯ ಕೂಡ ಕಾಣಿಸಿಕೊಂಡಿದ್ದಾರೆ.
1 / 8
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಮಿನಿ ಹರಾಜಿಗಾಗಿ ವೇದಿಕೆ ಸಿದ್ಧವಾಗಿದೆ. ಡಿಸೆಂಬರ್ 19 ರಂದು ದುಬೈನ ಕೋಕಾಕೋಲಾ ಅರೇನಾದಲ್ಲಿ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 333 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಈ ಆಟಗಾರರನ್ನು ಒಟ್ಟು 19 ಸೆಟ್ಗಳಾಗಿ ವಿಂಗಡಿಸಲಾಗಿದೆ.
2 / 8
ಅಂದರೆ ಇಲ್ಲಿ ಒಂದೊಂದು ಸೆಟ್ಗಳ ಮೂಲಕ ಹರಾಜು ಕೂಗಲಾಗುತ್ತದೆ. ವಿಶೇಷ ಎಂದರೆ ಈ ಬಾರಿಯ ಮೊದಲ ಸೆಟ್ನಲ್ಲಿ ಒಟ್ಟು 7 ಆಟಗಾರರು ಮಾತ್ರ ಸ್ಥಾನ ಪಡೆದಿದ್ದಾರೆ. ಇವರಲ್ಲಿ ಇಬ್ಬರು ಭಾರತೀಯ ಕೂಡ ಕಾಣಿಸಿಕೊಂಡಿದ್ದಾರೆ.
3 / 8
ಆದರೆ ಈ ಪಟ್ಟಿಯಲ್ಲಿ ಯಾವುದೇ ಬೌಲರ್ ಇಲ್ಲ ಎಂಬುದು ವಿಶೇಷ. ಅಂದರೆ ಮೊದಲ ಸುತ್ತಿನಲ್ಲೇ ಬ್ಯಾಟರ್ಗಳಿಗೆ ಮಣೆಹಾಕಲು 10 ಫ್ರಾಂಚೈಸಿಗಳು ನಿರ್ಧರಿಸಿದೆ. ಇನ್ನು 2ನೇ ಸೆಟ್ನಲ್ಲಿ ಪ್ರಮುಖ ಆಲ್ರೌಂಡರ್ಗಳು ಕಾಣಿಸಿಕೊಂಡಿದ್ದಾರೆ.
4 / 8
ಹಾಗೆಯೇ ಮೂರನೇ ಸೆಟ್ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗಳು ಕಾಣಿಸಿಕೊಂಡಿದ್ದಾರೆ. ಹಾಗೆಯೇ ನಾಲ್ಕನೇ ಸೆಟ್ನ ಮೂಲಕ ಪ್ರಮುಖ ವೇಗಿಗಳ ಹರಾಜು ನಡೆಯಲಿದೆ. ಅದರಂತೆ ಮೊದಲ 4 ಸೆಟ್ಗಳಲ್ಲಿರುವ ಆಟಗಾರರ ಪಟ್ಟಿ ಹೀಗಿದೆ...
5 / 8
ಸೆಟ್ 1: ಹ್ಯಾರಿ ಬ್ರೂಕ್ (ಇಂಗ್ಲೆಂಡ್ - 2 ಕೋಟಿ ರೂ.), ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ - 2 ಕೋಟಿ ರೂ.), ಕರುಣ್ ನಾಯರ್ (ಭಾರತ - 50 ಲಕ್ಷ ರೂ.), ಮನೀಶ್ ಪಾಂಡೆ (ಭಾರತ-– 50 ಲಕ್ಷ ರೂ.), ರೋವ್ಮನ್ ಪೊವೆಲ್ (ವೆಸ್ಟ್ ಇಂಡೀಸ್ - 1 ಕೋಟಿ ರೂ), ರಿಲೀ ರೊಸೊವ್ (ಸೌತ್ ಆಫ್ರಿಕಾ - 2 ಕೋಟಿ ರೂ.), ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ - 2 ಕೋಟಿ ರೂ.).
6 / 8
ಸೆಟ್ 2: ಜೆರಾಲ್ಡ್ ಕೋಟ್ಝಿ (ಸೌತ್ ಆಫ್ರಿಕಾ - 2 ಕೋಟಿ ರೂ., ಪ್ಯಾಟ್ ಕಮ್ಮಿನ್ಸ್ (ಆಸ್ಟ್ರೇಲಿಯಾ - 2 ಕೋಟಿ ರೂ.), ವನಿಂದು ಹಸರಂಗ ( ಶ್ರೀಲಂಕಾ - 1.5 ಕೋಟಿ ರೂ.), ಡೇರಿಲ್ ಮಿಚೆಲ್ (ನ್ಯೂಝಿಲೆಂಡ್ - 1 ಕೋಟಿ ರೂ.), ಅಜ್ಮತುಲ್ಲಾ ಒಮರ್ಜಾಯ್ (ಅಫ್ಘಾನಿಸ್ತಾನ - 50 ಲಕ್ಷ ರೂ.), ಹರ್ಷಲ್ ಪಟೇಲ್ (ಭಾರತ - 2 ಕೋಟಿ ರೂ.), ರಚಿನ್ ರವೀಂದ್ರ (ನ್ಯೂಝಿಲೆಂಡ್ -50 ಲಕ್ಷ ರೂ.,)ಶಾರ್ದೂಲ್ ಠಾಕೂರ್ - (ಭಾರತ - 2 ಕೋಟಿ ರೂ.), (ಕ್ರಿಸ್ ವೋಕ್ಸ್ - ಇಂಗ್ಲೆಂಡ್ - 2 ಕೋಟಿ ರೂ.)
7 / 8
ಸೆಟ್ 3: ಕೆ.ಎಸ್. ಭಾರತ (ಭಾರತ - 50 ಲಕ್ಷ ರೂ.), ಜೋಶ್ ಇಂಗ್ಲಿಸ್ (ಆಸ್ಟ್ರೇಲಿಯಾ - 2 ಕೋಟಿ ರೂ.), ಕುಸಾಲ್ ಮೆಂಡಿಸ್ (ಶ್ರೀಲಂಕಾ - 50 ಲಕ್ಷ ರೂ.), ಫಿಲಿಪ್ ಸಾಲ್ಟ್ (ಇಂಗ್ಲೆಂಡ್ - 1.5 ಕೋಟಿ ರೂ.), ಟ್ರಿಸ್ಟಾನ್ ಸ್ಟಬ್ಸ್ (ಸೌತ್ ಆಫ್ರಿಕಾ - 50 ಲಕ್ಷ ರೂ.)
8 / 8
ಸೆಟ್ 4: ಲಾಕಿ ಫರ್ಗುಸನ್ (ನ್ಯೂಝಿಲೆಂಡ್ - 2 ಕೋಟಿ ರೂ.), ಜೋಶ್ ಹ್ಯಾಝಲ್‌ವುಡ್ (ಆಸ್ಟ್ರೇಲಿಯಾ - 2 ಕೋಟಿ ರೂ.), ಅಲ್ಜಾರಿ ಜೋಸೆಫ್ (ವೆಸ್ಟ್ ಇಂಡೀಸ್ - 1 ಕೋಟಿ ರೂ.), ದಿಲ್ಶನ್ ಮಧುಶಂಕ (ಶ್ರೀಲಂಕಾ - 50 ಲಕ್ಷ ರೂ.), ಶಿವಂ ಮಾವಿ (ಭಾರತ -50 ಲಕ್ಷ ರೂ.), ಚೇತನ್ ಸಕರಿಯಾ (ಭಾರತ - 50 ಲಕ್ಷ ರೂ.), ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ - 2 ಕೋಟಿ ರೂ.), ಜಯದೇವ್ ಉನದ್ಕತ್ (ಭಾರತ - 50 ಲಕ್ಷ ರೂ.), ಉಮೇಶ್ ಯಾದವ್ (ಭಾರತ - 2 ಕೋಟಿ ರೂ.)
Published On - 7:34 am, Mon, 18 December 23