Kavya Maran: ಯಾರಿಲ್ಲ ಯಾರಿಲ್ಲ… ಒಂಟಿಯಾಗಿ ಪಂದ್ಯ ವೀಕ್ಷಿಸಿದ ಕಾವ್ಯ ಮಾರನ್..!
ಝಾಹಿರ್ ಯೂಸುಫ್ | Updated By: Digi Tech Desk
Updated on:
May 22, 2024 | 9:37 AM
IPL 2024 KKR vs SRH: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡವು 19.3 ಓವರ್ಗಳಲ್ಲಿ 159 ರನ್ಗಳಿಸಿ ಆಲೌಟ್ ಆಯಿತು. 160 ರನ್ಗಳ ಸುಲಭ ಗುರಿಯನ್ನು ಬೆನ್ನತ್ತಿದ ಕೆಕೆಆರ್ ಪರ ವೆಂಕಟೇಶ್ ಅಯ್ಯರ್ (51) ಹಾಗೂ ಶ್ರೇಯಸ್ ಅಯ್ಯರ್ (58) ಅಜೇಯ ಅರ್ಧಶತಕ ಬಾರಿಸಿದರು. ಈ ಮೂಲಕ ಕೇವಲ 13.4 ಓವರ್ಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು.
1 / 5
ಅಹಮದಾಬಾದ್ನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಕೆಕೆಆರ್ ತಂಡ ಫೈನಲ್ಗೆ ಲಗ್ಗೆಯಿಟ್ಟಿದೆ. ಅತ್ತ ಸೋತಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಫೈನಲ್ ರೇಸ್ನಲ್ಲಿ ಉಳಿದುಕೊಂಡಿದೆ. ಅಂದರೆ ಎಸ್ಆರ್ಹೆಚ್ ತಂಡ 2ನೇ ಕ್ವಾಲಿಫೈಯರ್ ಪಂದ್ಯವಾಡಲಿದ್ದು, ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಫೈನಲ್ಗೆ ಪ್ರವೇಶಿಸಬಹುದು.
2 / 5
ವಿಶೇಷ ಎಂದರೆ ಈ ಮಹತ್ವದ ಪಂದ್ಯದ ವೇಳೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎಸ್ಆರ್ಹೆಚ್ ಅಭಿಮಾನಿಗಳು ಕಡಿಮೆ ಸಂಖ್ಯೆಯಲ್ಲಿ ಕಾಣಿಸಿಕೊಂಡಿದ್ದರು. ಅದರಲ್ಲೂ ಸನ್ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯ ಮಾರನ್ ಒಂಟಿಯಾಗಿ ಕೂತು ಪಂದ್ಯ ವೀಕ್ಷಿಸುತ್ತಿರುವುದು ಕಂಡು ಬಂದಿದೆ.
3 / 5
ಸಾಮಾನ್ಯವಾಗಿ ಕಾವ್ಯ ಮಾರನ್ ಒಂದಷ್ಟು ವಿಐಪಿ ಗುಂಪಿನೊಂದಿಗೆ ಕಾಣಿಸಿಕೊಳ್ಳುವುದು ವಾಡಿಕೆ. ಅಲ್ಲದೆ ಅವರ ಸುತ್ತ ಮುತ್ತ ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರರ ಕುಟುಂಬಸ್ಥರು ಕಾಣಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಯಾರೂ ಇರಲಿಲ್ಲ.
4 / 5
ಕಾವ್ಯ ಮಾರನ್ ಕೂತಿದ್ದ ಸೀಟಿನ ಅಕ್ಕ ಪಕ್ಕದ ಆಸನಗಳು ಖಾಲಿಯಿದ್ದವು. ಇತ್ತ ಸನ್ರೈಸರ್ಸ್ ಹೈದರಾಬಾದ್ ತಂಡವು ಆರಂಭಿಕ ಆಘಾತಕ್ಕೆ ಒಳಗಾಗುತ್ತಿದ್ದಂತೆ ಅತ್ತ ಕಾವ್ಯ ಕೂಡ ಹತಾಶರಾದರು. ಅಲ್ಲದೆ ಸಪ್ಪೆ ಮುಖದೊಂದಿಗೆ ಇಡೀ ಪಂದ್ಯವನ್ನು ವೀಕ್ಷಿಸಿದರು. ಇದೀಗ ಒಂಟಿಯಾಗಿ ಕಾಣಿಸಿಕೊಂಡ ಕಾವ್ಯ ಮಾರನ್ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
5 / 5
ಇನ್ನು ಈ ಪಂದ್ಯದಲ್ಲಿ ಸೋತಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್ನಿಂದ ಹೊರಬಿದ್ದಿಲ್ಲ. ಎಸ್ಆರ್ಹೆಚ್ ತಂಡಕ್ಕೆ ಇನ್ನೊಂದು ಅವಕಾಶ ಕೂಡ ಇದೆ. ಅಂದರೆ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವಣ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ಟೀಮ್ ಜೊತೆ ಎಸ್ಆರ್ಹೆಚ್ ತಂಡ 2ನೇ ಕ್ವಾಲಿಫೈಯರ್ ಪಂದ್ಯವಾಡಲಿದೆ. ಈ ಮೂಲಕ ಫೈನಲ್ಗೆ ಪ್ರವೇಶಿಸುವ ಅವಕಾಶ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕಿದೆ.
Published On - 9:23 am, Wed, 22 May 24