17ನೇ ಆವೃತ್ತಿಯ ಐಪಿಎಲ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಲೀಗ್ ಹಂತದ ಎಲ್ಲಾ 70 ಪಂದ್ಯಗಳು ಮುಗಿದಿವೆ. ಇದೀಗ ಪ್ಲೇಆಫ್‌ಗಳು ಆರಂಭವಾಗಿದ್ದು, ಮಂಗಳವಾರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಟೇಬಲ್ ಟಾಪರ್ ಕೋಲ್ಕತ್ತಾ ನೈಟ್ ರೈಡರ್ಸ್, ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುತ್ತಿದೆ.
ಇದಾದ ಬಳಿಕ ಬುಧವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಈ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಹೇಗೆ ಪ್ರದರ್ಶನ ನೀಡಿವೆ ಎಂಬುದನ್ನು ನೋಡುವುದಾದರೆ.. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ 15 ಪಂದ್ಯಗಳನ್ನು ಆಡಿದೆ.
ಈ 15 ಪಂದ್ಯಗಳಲ್ಲಿ ತಂಡ 9ರಲ್ಲಿ ಗೆದ್ದು 5ರಲ್ಲಿ ಸೋತಿದೆ. ಒಂದು ಪಂದ್ಯ ಟೈ ಆಗಿದ್ದು, ಆ ಬಳಿಕ ನಡೆದ ಸೂಪರ್ ಓವರ್‌ನಲ್ಲಿ ರಾಜಸ್ಥಾನ್ ಗೆಲುವು ಸಾಧಿಸಿತ್ತು. ಈ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೇಳೆ ರಾಜಸ್ಥಾನ 4 ಪಂದ್ಯಗಳಲ್ಲಿ ಗೆದ್ದಿದ್ದರೆ, ಗುರಿ ಬೆನ್ನಟ್ಟುವಾ್ 5 ಪಂದ್ಯಗಳನ್ನು ಗೆದ್ದಿದೆ. ಈ ಮೈದಾನದಲ್ಲಿ ತಂಡದ ಗರಿಷ್ಠ ಸ್ಕೋರ್ 201 ರನ್ ಆಗಿದ್ದರೆ, ಕಡಿಮೆ ಮೊತ್ತ 102 ರನ್ ಆಗಿದೆ.
ಇನ್ನು ಇದೇ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ಹೇಗೆ ಎಂಬುದನ್ನು ನೋಡುವುದಾದರೆ.. ಆರ್‌ಸಿಬಿ ಈ ಮೈದಾನದಲ್ಲಿ ಇದುವರೆಗೆ ಕೇವಲ 5 ಪಂದ್ಯಗಳನ್ನು ಮಾತ್ರ ಆಡಿದೆ. ಇದರಲ್ಲಿ ತಂಡ 3ರಲ್ಲಿ ಜಯಗಳಿಸಿದ್ದು, 2ರಲ್ಲಿ ಸೋಲನುಭವಿಸಿದೆ.
ಈ ಮೈದಾನದಲ್ಲಿ ಆರ್‌ಸಿಬಿ 1 ಪಂದ್ಯವನ್ನು ಮೊದಲು ಬ್ಯಾಟಿಂಗ್ ಮಾಡಿದ ಸಂದರ್ಭದಲ್ಲಿ ಮತ್ತು 2 ಪಂದ್ಯಗಳನ್ನು ಚೇಸಿಂಗ್‌ನಲ್ಲಿ ಗೆದ್ದಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಗರಿಷ್ಠ ಸ್ಕೋರ್ 206 ರನ್ ಆಗಿದ್ದರೆ, ಕಡಿಮೆ ಸ್ಕೋರ್ 145 ರನ್ ಆಗಿದೆ.
Published On - 7:56 pm, Tue, 21 May 24