IPL 2024: ಆರೆಂಜ್ ಕ್ಯಾಪ್ ರೇಸ್​ನಲ್ಲಿ ಕೊಹ್ಲಿಯೇ ಕಿಂಗ್..!

| Updated By: ಝಾಹಿರ್ ಯೂಸುಫ್

Updated on: Apr 14, 2024 | 1:31 PM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2024) 17ನೇ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈಗಾಗಲೇ 319 ರನ್​ ಕಲೆಹಾಕಿರುವ ಕಿಂಗ್ ಕೊಹ್ಲಿ ಟಾಪ್ ರನ್ ಸರದಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಹಾಗೆಯೇ ಬೌಲಿಂಗ್​ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಯುಜ್ವೇಂದ್ರ ಚಹಲ್ ಉತ್ತಮ ಪ್ರದರ್ಶನ ನೀಡಿದ್ದಾರೆ.

1 / 5
ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) 27 ಪಂದ್ಯಗಳ ಮುಕ್ತಾಯದ ವೇಳೆಗೆ ಅತ್ಯಧಿಕ ರನ್​ ಕಲೆಹಾಕಿದ ಬ್ಯಾಟರ್​ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಅಗ್ರಸ್ಥಾನದಲ್ಲಿದ್ದಾರೆ. ಅಷ್ಟೇ ಅಲ್ಲದೆ ಈ ಬಾರಿಯ ಐಪಿಎಲ್​ನಲ್ಲಿ ಕೇವಲ 6 ಪಂದ್ಯಗಳ ಮೂಲಕ 300+ ರನ್ ಬಾರಿಸಿದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ. ಅದರಂತೆ ಆರೆಂಜ್-ಪರ್ಪಲ್ ಕ್ಯಾಪ್ ರೇಸ್​ನಲ್ಲಿರುವ ಟಾಪ್-2 ಆಟಗಾರರ ಪಟ್ಟಿ ಇಲ್ಲಿದೆ...

2 / 5
1- ವಿರಾಟ್ ಕೊಹ್ಲಿ: ಈ ಬಾರಿಯ ಐಪಿಎಲ್​ನಲ್ಲಿ ಇದುವರೆಗೆ 6 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ ಒಟ್ಟು 225 ಎಸೆತಗಳನ್ನು ಎದುರಿಸಿದ್ದು, ಈ ಮೂಲಕ 319 ರನ್​ ಕಲೆಹಾಕಿದ್ದಾರೆ. ಈ ವೇಳೆ 1 ಶತಕ ಹಾಗೂ 2 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ.

3 / 5
2- ರಿಯಾನ್ ಪರಾಗ್: ಆರೆಂಜ್ ಕ್ಯಾಪ್ ರೇಸ್​ನಲ್ಲಿ ರಿಯಾನ್ ಪರಾಗ್ ದ್ವಿತೀಯ ಸ್ಥಾನದಲ್ಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ಪರ 6 ಇನಿಂಗ್ಸ್ ಆಡಿರುವ ಪರಾಗ್ 183 ಎಸೆತಗಳಲ್ಲಿ ಒಟ್ಟು 284 ರನ್ ಕಲೆಹಾಕಿದ್ದಾರೆ. ಈ ವೇಳೆ 3 ಅರ್ಧಶತಕಗಳನ್ನು ಬಾರಿಸಿ ಮಿಂಚಿದ್ದಾರೆ.

4 / 5
1- ಯುಜ್ವೇಂದ್ರ ಚಹಲ್: ಪರ್ಪಲ್ ಕ್ಯಾಪ್​ ರೇಸ್​ನಲ್ಲಿ ಅಗ್ರಸ್ಥಾನದಲ್ಲಿರುವುದು ಯುಜ್ವೇಂದ್ರ ಚಹಲ್.  6 ಪಂದ್ಯಗಳಲ್ಲಿ ಒಟ್ಟು 22 ಓವರ್​ಗಳನ್ನು ಎಸೆದಿರುವ ಚಹಲ್ 163 ರನ್ ನೀಡಿ 11 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್​ನಲ್ಲಿ ಅತ್ಯಧಿಕ ವಿಕೆಟ್ ಕಬಳಿಸಿ ಬೌಲರ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

5 / 5
2- ಜಸ್​ಪ್ರೀತ್ ಬುಮ್ರಾ: ಈ ಬಾರಿಯ ಐಪಿಎಲ್​ನಲ್ಲಿ 5 ಪಂದ್ಯಗಳಲ್ಲಿ 20 ಓವರ್​ಗಳನ್ನು ಎಸೆದಿರುವ ಜಸ್​ಪ್ರೀತ್ ಬುಮ್ರಾ 119 ರನ್ ನೀಡಿ 10 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಪರ್ಪಲ್ ಕ್ಯಾಪ್ ರೇಸ್​ನಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

Published On - 1:29 pm, Sun, 14 April 24