IPL 2024 Points Table: ಐಪಿಎಲ್ ಸೀಸನ್ 17 ರಲ್ಲಿ 56 ಪಂದ್ಯಗಳು ಮುಗಿದಿವೆ. ಇದಾಗ್ಯೂ ಯಾವುದೇ ತಂಡ ಪ್ಲೇಆಫ್ ಪ್ರವೇಶಿಸಿಲ್ಲ ಎಂಬುದು ವಿಶೇಷ. ಅಂದರೆ ಇಲ್ಲಿ ಎರಡು ತಂಡಗಳು 16 ಅಂಕಗಳನ್ನು ಹೊಂದಿದ್ದರೆ, ಇನ್ನುಳಿದ ನಾಲ್ಕು ತಂಡಗಳು 12 ಅಂಕಗಳನ್ನು ಕಲೆಹಾಕಿದೆ. ಹಾಗೆಯೇ ಉಳಿದ 4 ತಂಡಗಳಿಗೂ 14 ಅಂಕಗಳನ್ನು ಕಲೆಹಾಕಲು ಅವಕಾಶವಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಪ್ಲೇಆಫ್ ಪ್ರವೇಶಿಸಲು ಕಠಿಣ ಪೈಪೋಟಿ ಕಂಡು ಬರಲಿದೆ.