IPL 2024: ಐಪಿಎಲ್​ನಿಂದ ಟೀಮ್ ಇಂಡಿಯಾದ ಇಬ್ಬರು ಆಟಗಾರರು ಔಟ್

| Updated By: ಝಾಹಿರ್ ಯೂಸುಫ್

Updated on: Mar 12, 2024 | 1:23 PM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸೀಸನ್ 17 ಆರಂಭಕ್ಕೂ ಮುನ್ನವೇ ಗಾಯಾಳುವಾಗಿರುವ ಟೀಮ್ ಇಂಡಿಯಾ ಆಟಗಾರರು ಫಿಟ್​ನೆಸ್​ ಟೆಸ್ಟ್​ ಮೂಲಕ ಪ್ರಮಾಣಪತ್ರವನ್ನು ಪಡೆಯಬೇಕೆಂದು ಬಿಸಿಸಿಐ ಸೂಚಿಸಿದೆ. ಅದರಂತೆ ಕೆಲ ಆಟಗಾರರು ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್​ನೆಸ್ ಟೆಸ್ಟ್​ಗೆ ಒಳಗಾಗಿದ್ದಾರೆ.

1 / 5
ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಆರಂಭಕ್ಕೂ ಮುನ್ನವೇ ಭಾರತದ ಇಬ್ಬರು ಆಟಗಾರರು ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಭ್ ಪಂತ್ ಫಿಟ್​ನೆಸ್ ಟೆಸ್ಟ್​ನಲ್ಲಿ ಪಾಸ್ ಆಗಿದ್ದು, ಹಾಗೆಯೇ ಟೀಮ್ ಇಂಡಿಯಾ ಇಬ್ಬರು ವೇಗಿಗಳು ಮುಂಬರುವ ಐಪಿಎಲ್​ನಲ್ಲಿ ಕಣಕ್ಕಿಳಿಯುವುದಿಲ್ಲ ಎಂದು BCCI ತಿಳಿಸಿದೆ.

2 / 5
ರಿಷಭ್ ಪಂತ್:  ಕಳೆದ 14 ತಿಂಗಳುಗಳಿಂದ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ರಿಷಭ್ ಪಂತ್ NCAನಲ್ಲಿ ಫಿಟ್​ನೆಸ್ ಟೆಸ್ಟ್​ಗೆ ಒಳಗಾಗಿದ್ದರು. ಈ ಟೆಸ್ಟ್​ನಲ್ಲಿ ಪಂತ್ ತಮ್ಮ ಫಿಟ್​ನೆಸ್ ಅನ್ನು ಸಾಬೀತುಪಡಿಸಿದ್ದಾರೆ. ಈ ಮೂಲಕ ಐಪಿಎಲ್ 2024 ರಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಕಣಕ್ಕಿಳಿಯಲು ರಿಷಭ್ ಬಿಸಿಸಿಐ ಕಡೆಯಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡಿದ್ದಾರೆ.

3 / 5
ಮೊಹಮ್ಮದ್ ಶಮಿ: ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಹಿಮ್ಮಡಿ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಪ್ರಸ್ತುತ ಅವರು BCCI ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ಅಲ್ಲದೆ ಗಾಯದಿಂದ ಗುಣಮುಖರಾಗಲು ಮತ್ತಷ್ಟು ತಿಂಗಳುಗಳು ಬೇಕಾಗಿದ್ದು, ಹೀಗಾಗಿ ಮೊಹಮ್ಮದ್ ಶಮಿ ಐಪಿಎಲ್​ಗೆ ಅಲಭ್ಯರಾಗಲಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.

4 / 5
ಪ್ರಸಿದ್ಧ್ ಕೃಷ್ಣ: ಭಾರತ ತಂಡದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅವರು ಎಡ ಪ್ರಾಕ್ಸಿಮಲ್ ಕ್ವಾಡ್ರೈಸ್ಪ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಹೀಗಾಗಿ ಅವರು ಕೂಡ ಮುಂಬರುವ ಐಪಿಎಲ್​ನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ.

5 / 5
ಇದರೊಂದಿಗೆ ಐಪಿಎಲ್ ಸೀಸನ್​-17 ರಿಂದ ಗುಜರಾತ್ ಟೈಟಾನ್ಸ್ ವೇಗಿ ಮೊಹಮ್ಮದ್ ಶಮಿ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಹೊರಗುಳಿಯುತ್ತಿರುವುದು ಖಚಿತವಾಗಿದೆ. ಅತ್ತ ರಿಷಭ್ ಪಂತ್ ಈ ಬಾರಿಯ ಐಪಿಎಲ್ ಮೂಲಕ ಕಂಬ್ಯಾಕ್ ಮಾಡುವುದು ಕೂಡ ಕನ್ಫರ್ಮ್​ ಆಗಿದೆ.