ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ (IPL 2024) 30ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಸನ್ರೈಸರ್ಸ್ ಹೈದರಾಬಾದ್ (SRH) ತಂಡ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಆರ್ಸಿಬಿ ಪಾಲಿಗೆ ಬೌಲರ್ಗಳೇ ಕಂಟಕವಾಗಿ ಪರಿಣಮಿಸಿದರು.
ಅಂದರೆ 200 ರನ್ಗಳ ಗುರಿಯನ್ನು ಬೆನ್ನತ್ತುವ ವಿಶ್ವಾಸದೊಂದಿಗೆ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡಿದ್ದರು. ಆದರೆ ಆರ್ಸಿಬಿ ಬೌಲರ್ಗಳ ಕಳಪೆ ಪ್ರದರ್ಶನದಿಂದಾಗಿ ಸನ್ರೈಸರ್ಸ್ ಹೈದರಾಬಾದ್ ತಂಡವು 287 ರನ್ಗಳ ದಾಖಲೆಯ ಮೊತ್ತ ಪೇರಿಸಿತು.
ಹೀಗೆ ಎಸ್ಆರ್ಹೆಚ್ ತಂಡ ದಾಖಲೆ ಮೊತ್ತ ಕಲೆಹಾಕಲು ಮುಖ್ಯ ಕಾರಣ ಆರ್ಸಿಬಿ ತಂಡದ ನಾಲ್ವರು ವೇಗಿಗಳು ಎಂದರೆ ತಪ್ಪಾಗಲಾರದು. ಏಕೆಂದರೆ ಈ ಪಂದ್ಯದಲ್ಲಿ ತಲಾ 4 ಓವರ್ಗಳನ್ನು ಎಸೆದಿದ್ದ ನಾಲ್ವರು ಬೌಲರ್ಗಳು 50+ ರನ್ ನೀಡಿದ್ದರು. ಹೀಗೆ ಆರ್ಸಿಬಿ ಪಾಲಿಗೆ ದುಬಾರಿಯಾದ ಬೌಲರ್ಗಳು ಯಾರೆಲ್ಲಾ ಎಂದು ನೋಡುವುದಾದರೆ...
1- ರೀಸ್ ಟೋಪ್ಲಿ: ಎಡಗೈ ವೇಗಿ ರೀಸ್ ಟೋಪ್ಲಿ ಈ ಪಂದ್ಯದಲ್ಲಿ ಒಟ್ಟು 4 ಓವರ್ಗಳನ್ನು ಎಸೆದಿದ್ದರು. ಈ ವೇಳೆ ನೀಡಿದ್ದು ಬರೋಬ್ಬರಿ 68 ರನ್ಗಳು. ಅಂದರೆ ಪ್ರತಿ ಓವರ್ಗೆ 17 ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.
2- ವಿಜಯಕುಮಾರ್ ವೈಶಾಕ್: ಆರ್ಸಿಬಿ ಪರ ದುಬಾರಿಯಾದ 2ನೇ ಬೌಲರ್ ಕನ್ನಡಿಗ ವಿಜಯಕುಮಾರ್ ವೈಶಾಕ್. 4 ಓವರ್ಗಳನ್ನು ಎಸೆದಿದ್ದ ವೈಶಾಕ್ ಪ್ರತಿ ಓವರ್ಗೆ 16ರ ಸರಾಸರಿಯಂತೆ ಒಟ್ಟು 64 ರನ್ ನೀಡಿದ್ದಾರೆ.
3- ಲಾಕಿ ಫರ್ಗುಸನ್: ಈ ಪಂದ್ಯದ ಮೂಲಕ ಆರ್ಸಿಬಿ ಪರ ಪಾದಾರ್ಪಣೆ ಮಾಡಿದ್ದ ಲಾಕಿ ಫರ್ಗುಸನ್ 4 ಓವರ್ಗಳಲ್ಲಿ 52 ರನ್ ಚಚ್ಚಿಸಿಕೊಂಡರು. ಅಂದರೆ ಪ್ರತಿ ಓವರ್ಗೆ 13ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ.
4- ಯಶ್ ದಯಾಳ್: ಆರ್ಸಿಬಿ ತಂಡದ ಎಡಗೈ ವೇಗಿ ಯಶ್ ದಯಾಳ್ ಈ ಪಂದ್ಯದಲ್ಲಿ 4 ಓವರ್ಗಳಲ್ಲಿ 51 ರನ್ಗಳನ್ನು ನೀಡಿದ್ದಾರೆ. ಈ ಮೂಲಕ ಪ್ರತಿ ಓವರ್ಗೆ 12.80 ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದಾರೆ.