Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಬೆಂಚ್ ಬಿಸಿ ಮಾಡಿದ RCBಯ 47 ಕೋಟಿ ರೂ. ಆಟಗಾರರು..!

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2024) 17ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳಪೆ ಪ್ರದರ್ಶನ ನೀಡುತ್ತಿದೆ. ದುಬಾರಿ ಮೊತ್ತ ನೀಡಿ ಆರ್​ಸಿಬಿ ಫ್ರಾಂಚೈಸಿ ಖರೀದಿಸಿದ ಆಟಗಾರರೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ದುಬಾರಿಯಾಗುತ್ತಿದ್ದಾರೆ. ಹೀಗಾಗಿಯೇ ಈ ಆಟಗಾರರನ್ನು ಇದೀಗ ಪ್ಲೇಯಿಂಗ್ ಇಲೆವೆನ್​ನಿಂದ ಕೈ ಬಿಡಲಾಗಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: Apr 16, 2024 | 9:23 PM

ಇಂಡಿಯನ್ ಪ್ರೀಮಿಯರ್ ಲೀಗ್​ (IPL 2024) ಸೀಸನ್-17 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕಳಪೆ ಪ್ರದರ್ಶನ ಮುಂದುವರೆಸಿದೆ. ಮೊದಲಾರ್ಧದ 7 ಪಂದ್ಯಗಳಲ್ಲಿ ಆರ್​ಸಿಬಿ ಗೆದ್ದಿರುವುದು ಕೇವಲ 1 ಪಂದ್ಯದಲ್ಲಿ ಮಾತ್ರ. RCB ತಂಡದ ಈ ಕಳಪೆ ಪ್ರದರ್ಶನಕ್ಕೆ ಸ್ಟಾರ್ ಆಟಗಾರರೇ ಕಾರಣ.

1 / 8
ಏಕೆಂದರೆ ಆರ್​ಸಿಬಿ ತಂಡದಲ್ಲಿರುವ ಸ್ಟಾರ್ ಆಟಗಾರರು ಸಾಧಾರಣ ಪ್ರದರ್ಶನ ನೀಡುವಲ್ಲಿಯೂ ವಿಫಲರಾಗುತ್ತಿದ್ದಾರೆ. ಹೀಗಾಗಿ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಕೆಲ ಪ್ರಮುಖ ಆಟಗಾರರನ್ನು ಪ್ಲೇಯಿಂಗ್ ಇಲೆವೆನ್​ನಿಂದ ಕೈ ಬಿಡಲಾಗಿತ್ತು. ಹೀಗೆ ಆಡುವ ಬಳಗದಿಂದ ಹೊರಬಿದ್ದ ಆಟಗಾರರಿಗೆ ನೀಡಲಾಗಿರುವ ಒಟ್ಟು ಮೊತ್ತ ಬರೋಬ್ಬರಿ 47 ಕೋಟಿ ರೂ. ಎಂದರೆ ನಂಬಲೇಬೇಕು.

2 / 8
ಅಂದರೆ ಆರ್​ಸಿಬಿ ಫ್ರಾಂಚೈಸಿ ವ್ಯಯಿಸಿದ 100 ಕೋಟಿ ರೂ. ಹರಾಜು ಮೊತ್ತದಲ್ಲಿ 47 ಕೋಟಿ ರೂ. ಮೊತ್ತ ಪಡೆದಿರುವ ಆಟಗಾರರು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ ಎಂಬುದೇ ಅಚ್ಚರಿ. ಇದು ಆರ್​ಸಿಬಿ ಫ್ರಾಂಚೈಸಿಯ ಕಳಪೆ ಆಯ್ಕೆಗೆ ಹಿಡಿದ ಕನ್ನಡಿ ಎಂದರೆ ತಪ್ಪಾಗಲಾರದು.

3 / 8
ಏಕೆಂದರೆ ಆರ್​ಸಿಬಿ ಫ್ರಾಂಚೈಸಿಯು ಈ ಬಾರಿ ಕ್ಯಾಮರೋನ್ ಗ್ರೀನ್ ಅವರನ್ನು ಮುಂಬೈ ಇಂಡಿಯನ್ಸ್ ತಂಡದಿಂದ ಟ್ರೇಡ್ ಮಾಡಿಕೊಂಡಿತ್ತು. ಅದು ಕೂಡ 17.5 ಕೋಟಿ ರೂ. ನೀಡುವ ಮೂಲಕ. ಇತ್ತ ಗ್ರೀನ್ 5 ಪಂದ್ಯಗಳಲ್ಲಿ ಕಣಕ್ಕಿಳಿದು ಕಲೆಹಾಕಿದ್ದು 68 ರನ್​ಗಳು ಮಾತ್ರ. ಹಾಗೆಯೇ 67 ಎಸೆತಗಳಲ್ಲಿ 105 ರನ್ ನೀಡಿ ಕೇವಲ 2 ವಿಕೆಟ್ ಮಾತ್ರ ಪಡೆದಿದ್ದಾರೆ.

4 / 8
ಇನ್ನು ಈ ಬಾರಿಯ ಹರಾಜಿನಲ್ಲಿ ಆರ್​ಸಿಬಿ 11.5 ಕೋಟಿ ರೂ. ನೀಡಿ ಖರೀದಿಸಿದ ವೇಗದ ಬೌಲರ್ ಅಲ್ಝಾರಿ ಜೋಸೆಫ್ 3 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 58 ಎಸೆತಗಳನ್ನು ಎಸೆದಿರುವ ಜೋಸೆಫ್ 115 ರನ್ ನೀಡಿ ಕೇವಲ 1 ವಿಕೆಟ್ ಮಾತ್ರ ಪಡೆದಿದ್ದಾರೆ.

5 / 8
ಈ ಬಾರಿಯ ಹರಾಜಿಗೂ ಮುನ್ನ 11 ಕೋಟಿ ರೂ. ನೀಡಿ ಉಳಿಸಿಕೊಂಡಿದ್ದ ಗ್ಲೆನ್ ಮ್ಯಾಕ್ಸ್​ವೆಲ್ 6 ಪಂದ್ಯಗಳಿಂದ ಕಲೆಹಾಕಿದ ಒಟ್ಟು ಸ್ಕೋರ್ 32 ರನ್​ಗಳು ಎಂದರೆ ನಂಬಲೇಬೇಕು. ಅಲ್ಲದೆ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದಾರೆ.

6 / 8
ಆರ್​ಸಿಬಿ ಫ್ರಾಂಚೈಸಿ ಕಡೆಯಿಂದ 7 ಕೋಟಿ ರೂ. ಮೊತ್ತ ಪಡೆಯುತ್ತಿರುವ ಮೊಹಮ್ಮದ್ ಸಿರಾಜ್ 6 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಈ ವೇಳೆ ಎಸೆದ 132 ಎಸೆತಗಳಲ್ಲಿ ನೀಡಿರುವುದು ಬರೋಬ್ಬರಿ 229 ರನ್​ಗಳು. ಇನ್ನು ಪಡೆದಿರುವುದು ಕೇವಲ 4 ವಿಕೆಟ್ ಮಾತ್ರ.

7 / 8
ಅಂದರೆ ಆರ್​ಸಿಬಿ ಫ್ರಾಂಚೈಸಿ ಒಟ್ಟು 47 ಕೋಟಿ ರೂ. ನೀಡಿ ಖರೀದಿಸಿರುವ ಆಟಗಾರರು ಇದೀಗ ಬೆಂಚ್ ಕಾಯುತ್ತಿದ್ದಾರೆ. ಹೀಗೆ ಬೆಂಚ್ ಕಾಯಲು ಮುಖ್ಯ ಕಾರಣ ಕಳಪೆ ಪ್ರದರ್ಶನ. ಇವರಲ್ಲಿ ಅಲ್ಝಾರಿ ಜೋಸೆಫ್ ಹಾಗೂ ಕ್ಯಾಮರೋನ್ ಗ್ರೀನ್ ಕಳಪೆ ಫಾರ್ಮ್​ನಲ್ಲಿರುವುದು ಗೊತ್ತಿದ್ದರೂ ಆರ್​ಸಿಬಿ ಈ ಆಟಗಾರರಿಗೆ 29 ಕೋಟಿ ರೂ. ವ್ಯಯಿಸಿದ್ದು ಅಚ್ಚರಿಯೇ ಸರಿ. ಅದರ ಫಲವಾಗಿ ಇದೀಗ ದುಬಾರಿ ಆಟಗಾರರು ಬೆಂಚ್ ಬಿಸಿ ಮಾಡುತ್ತಿದ್ದಾರೆ.

8 / 8
Follow us
ಐಪಿಎಲ್ 2025 ರ ಮೊದಲ ಅರ್ಧಶತಕ ಬಾರಿಸಿದ ರಹಾನೆ

ಜಮ್ಮು ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಬಸ್ ಅಪಘಾತದಲ್ಲಿ 14 ಜನರಿಗೆ ಗಾಯ

ದೆಹಲಿಯ ಶಾಹೀನ್ ಬಾಗ್ ಮಾರುಕಟ್ಟೆಯ ಚಪ್ಪಲಿ ಶೋ ರೂಂನಲ್ಲಿ ಬೆಂಕಿ ದುರಂತ

ಸಿಎಂ ದೂರು ಸಲ್ಲಿಸಲು ಹೇಳಿದರೆ ಸಲ್ಲಿಸುತ್ತೇನೆ, ಬೇಡವೆಂದರೆ ಇಲ್ಲ:ರಾಜೇಂದ್ರ

ರವಿಶಂಕರ್ ಗುರೂಜಿ ಜೊತೆ ಟಿವಿ9 ನೆಟ್‌ವರ್ಕ್‌ ಎಂಡಿ ಬರುಣ್ ದಾಸ್ ಸಂವಾದ

ಮಳೆಗಾಲ ಶುರುವಾಗುವ ಮೊದಲು ರಸ್ತೆಗುಂಡಿಗಳು ಮುಚ್ಚಿದರೆ ಸಾಕಿದೆ!

ಕೇರಳದ ಪ್ರಸಿದ್ಧ ದೇವಾಲಯದಲ್ಲಿ ದರ್ಶನ್ ಶತ್ರು ಸಂಹಾರ ಪೂಜೆ? ವಿಡಿಯೋ

ಧರ್ಮಾಧಾರಿತ ಮೀಸಲಾತಿ ಕಾನೂನು ಮತ್ತು ಸಂವಿಧಾನಬಾಹಿರ: ವಿಜಯೇಂದ್ರ

ಹನಿ ಟ್ರ್ಯಾಪಿಂಗ್ ಸಂಬಂಧಿಸಿದಂತೆ ಹೆಚ್​ಎಂ ಹೇಳಿಕೆ ನೀಡಿದ್ದಾರೆ: ಖಾದರ್

ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ