IPL 2024: RCB ಅಭಿಮಾನಿಗಳ ಸೌಂಡ್ಗೆ CSK ಫ್ಯಾನ್ಸ್ ರೆಕಾರ್ಡ್ ಠುಸ್..!
TV9 Web | Updated By: ಝಾಹಿರ್ ಯೂಸುಫ್
Updated on:
Mar 27, 2024 | 2:02 PM
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ರಲ್ಲಿ ತಂಡಗಳ ಜೊತೆಗೆ ಅಭಿಮಾನಿಗಳ ನಡುವೆ ಕೂಡ ಪೈಪೋಟಿ ಶುರುವಾಗಿದೆ. ಅದು ಸಹ ಹರ್ಷೋದ್ಗಾರದೊಂದಿಗೆ ಎಂಬುದು ವಿಶೇಷ. ಅಂದರೆ ಐಪಿಎಲ್ ಇತಿಹಾಸದಲ್ಲಿ ದೊಡ್ಡ ಧ್ವನಿಯಲ್ಲಿ ಹರ್ಷೋದ್ಗಾರ ಮೊಳಗಿಸಿದ ಸಿಎಸ್ಕೆ ಫ್ಯಾನ್ಸ್ ದಾಖಲೆಯನ್ನು ಆರ್‌ಸಿಬಿ ಅಭಿಮಾನಿಗಳು ಮುರಿದಿದ್ದಾರೆ.
1 / 6
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 6ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಜಯ ಸಾಧಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಖಾತೆ ತೆರೆದಿದೆ. ಈ ಗೆಲುವಿನ ಜೊತೆಗೆ RCB ಅಭಿಮಾನಿಗಳು ವಿಶೇಷ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಅದು ಕೂಡ ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.
2 / 6
ಅಂದರೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ದಾಖಲಿಸುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಅದು ಸಹ 130 ಡೆಸಿಬಲ್ನಲ್ಲಿ ಎಂಬುದು ಅಚ್ಚರಿ. ಅಂದರೆ ಐಪಿಎಲ್ ಇತಿಹಾಸದಲ್ಲೇ ಇಷ್ಟೊಂದು ಶಬ್ದದಲ್ಲಿ ಯಾವುದೇ ತಂಡದ ಅಭಿಮಾನಿಗಳು ಸಂಭ್ರಮಿಸಿಲ್ಲ.
3 / 6
ಈ ಹಿಂದೆ ಐಪಿಎಲ್ 2023 ರಲ್ಲಿ ಮಹೇಂದ್ರ ಸಿಂಗ್ ಬ್ಯಾಟಿಂಗ್ಗೆ ಇಳಿದಾಗ ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್ 120 ಡಿಸಿಬಲ್ ಸೌಂಡ್ನಲ್ಲಿ ಸ್ವಾಗತಿಸಿದ್ದರು. ಇದುವೇ ಐಪಿಎಲ್ ಇತಿಹಾಸದಲ್ಲಿ ಕೇಳಿ ಬಂದ ಅತೀ ದೊಡ್ಡ ಹರ್ಷೋದ್ಗಾರವಾಗಿತ್ತು.
4 / 6
ಆದರೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೊದಲ ಕ್ಯಾಚ್ ಹಿಡಿದಾಗ ಆರ್‌ಸಿಬಿ ಅಭಿಮಾನಿಗಳು 124 ಡಿಸಿಬಲ್ ಸೌಂಡ್ನಲ್ಲಿ ಸಂಭ್ರಮಿಸಿದ್ದರು. ಇದಾದ ಬಳಿಕ ಆರ್‌ಸಿಬಿ ಜಯ ಸಾಧಿಸುತ್ತಿದ್ದಂತೆ ಈ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
5 / 6
ಅದು ಕೂಡ 130 ಡಿಸಿಬಲ್ ಸೌಂಡ್ ಸಂಭ್ರಮದೊಂದಿಗೆ ಎಂಬುದು ವಿಶೇಷ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲೇ ಅತೇ ದೊಡ್ಡ ಧ್ವನಿಯಲ್ಲಿ ಹರ್ಷೋದ್ಗಾರ ಮೊಳಗಿಸಿದ ದಾಖಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲಾಯಲ್ ಅಭಿಮಾನಿಗಳ ಪಾಲಾಗಿದೆ.
6 / 6
ಇದಾಗ್ಯೂ ಸಿಎಸ್ಕೆ ಅಭಿಮಾನಿಗಳು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ಈ ಮೂಲಕ ಆರ್‌ಸಿಬಿ ಅಭಿಮಾನಿಗಳ ದಾಖಲೆಯನ್ನು ಮುರಿಯುವ ಯತ್ನದಲ್ಲಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ಪಂದ್ಯಗಳ ನಡುವೆ ಅಭಿಮಾನಿಗಳ ಹರ್ಷೋದ್ಗಾರದ ಪೈಪೋಟಿ ಕೂಡ ಕಂಡು ಬರಲಿದೆ.